Advertisement

ಕೃಷಿ, ಅಂತರ್ಜಲ ವೃದ್ಧಿಗೆ ಜಲಕ್ರಾಂತಿ

02:09 PM Nov 24, 2020 | Suhan S |

ಬೆಳ್ತಂಗಡಿ, ನ. 23: ಅಂತರ್ಜಲ ವೃದ್ಧಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ ಅತೀ ಹೆಚ್ಚು 20 ಹಾಗೂ ವಿಶೇಷ ಘಟಕ ಯೋಜನೆಯಡಿ 4 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಸರಕಾರ 125 ಕೋ.ರೂ. ಒದಗಿಸಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಮೃತ್ಯುಂಜಯ, ನೇತ್ರಾವತಿ, ಫಲ್ಗುಣಿ, ಅಣಿಯೂರು, ಸೋಮಾವತಿ ಮೊದಲಾದ ನದಿಗಳ ನೀರು ಬೆಳ್ತಂಗಡಿಯಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ವರೆಗೆ ಕೃಷಿ ಹಾಗೂ ಕುಡಿಯುವ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಆದರೆ ಬೇಸಗೆಯಲ್ಲಿ ನದಿನೀರು ಬತ್ತಿದಾಗ ನೀರು ಪೂರೈಕೆಯಲ್ಲಿ ಸಮಸ್ಯೆ ಎದುರಾಗುತ್ತದೆ.

Advertisement

2019ರಲ್ಲಿ ನೇತ್ರಾವತಿ ಬರಿದಾ ದಾಗ ಇತಿಹಾಸದಲ್ಲೇ ಮೊದಲ ಬಾರಿಗೆ ಧರ್ಮಸ್ಥಳಕ್ಕೆ ಬರುವವರು ಯಾತ್ರೆಯನ್ನು ಮುಂದೂಡುವಂತೆ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ವಿನಂತಿಸಿದ್ದರು. ಜನರು ಜಲ ಸಾಕ್ಷರರಾಗಬೇಕು ಎಂದೂ ಕರೆ ನೀಡಿದ್ದರು. ಇದರ ಭಾಗವಾಗಿ ತಾಲೂಕಿನ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಜಲಯಜ್ಞ ಎಂಬ ನೀರಿಂಗಿಸುವ ಯೋಜನೆಯನ್ನು ಶಾಸಕ ಹರೀಶ್‌ ಪೂಂಜ ರೂಪಿಸಿದ್ದರು.

600 ಕೋ.ರೂ. ಕ್ರಿಯಾಯೋಜನೆ :

ಜಲಯಜ್ಞ ಕಾರ್ಯಕ್ರಮದಡಿ ಶಾಸಕರ ಸಮಿತಿಯಂತೆ ಅಂತರ್ಜಲ ವೃದ್ಧಿಸುವ ಸಲುವಾಗಿ ಸಣ್ಣ ನೀರಾವರಿ ಇಲಾಖೆಯಡಿ 600 ಕೋ.ರೂ. ಕ್ರಿಯಾಯೋಜನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಇದೀಗ ಪಶ್ಚಿಮ ವಾಹಿನಿ ಯೋಜನೆಯಡಿ ತಾಲೂಕಿನ

ಪ್ರಮುಖ ನದಿಗಳ ಆಯ್ದ ಭಾಗಗಳಲ್ಲಿ ಕೃಷಿಗೆ ಅನುಕೂಲ ಹಾಗೂ ಜನರ ಸಂಚಾರಕ್ಕೂ ಸಾಧ್ಯವಾಗುವಂತಹ ಕಿಂಡಿ ಅಣೆಕಟ್ಟು ನಿರ್ಮಿಸುವ ನಿಟ್ಟಿನಲ್ಲಿ  ಅನುದಾನ ಲಭ್ಯವಾಗಿದೆ.

Advertisement

24 ಕಿಂಡಿ ಅಣೆಕಟ್ಟುಗಳು : ಮಳೆಗಾಲದಲ್ಲಿ ಕರಾವಳಿಯ ನದಿಗಳು ತುಂಬಿ ಹರಿಯುತ್ತವೆ. ಆದರೆ ಬೇಸಗೆಯಲ್ಲಿ ವ್ಯಾಪಕ ನೀರಿನಸಮಸ್ಯೆ ಎದುರಿಸುತ್ತಿರುವುದನ್ನುಕಂಡು ಅಂತರ್ಜಲ ವೃದ್ಧಿಗೆ ಬೆಳ್ತಂಗಡಿ ವ್ಯಾಪ್ತಿಯ ನದಿಗಳಲ್ಲಿ ಸರಣಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಚಿಂತಿಸಿದ್ದರ ಫಲವಾಗಿ ಆರಂಭಿಕ ಹಂತದಲ್ಲಿ ಪಶ್ಚಿಮವಾಹಿನಿ ಯೋಜನೆಯಡಿ 125 ಕೋ.ರೂ. ವೆಚ್ಚದಲ್ಲಿ 24 ಕಿಂಡಿ ಅಣೆಕಟ್ಟುಗಳು ನಿರ್ಮಾಣವಾಗಲಿವೆ. – ಹರೀಶ್‌ ಪೂಂಜ,  ಶಾಸಕರು

ದ.ಕ., ಉಡುಪಿ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ನೀರಿನ ಅಭಾವ ತಡೆಯುವ ದೃಷ್ಟಿಯಿಂದ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಅವಶ್ಯವಾಗಿದೆ. ಹೆಚ್ಚಿನ ಕಾಮಗಾರಿಗಳು ಈಗಾಗಲೇ ಆರಂಭಗೊಂಡಿವೆ. 5 ವರ್ಷಗಳಲ್ಲಿ ಇನ್ನಷ್ಟು ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.  – ಗೋಕುಲ್‌ದಾಸ್‌, ಕಾರ್ಯಪಾಲಕ ಅಭಿಯಂತ, ಸಣ್ಣನೀರಾವರಿ ವಿಭಾಗ

 

-ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next