Advertisement

ಕೃಷಿ- ಕುಡಿಯುವ ನೀರಿಗೆ ಆದ್ಯತೆ: ಹರೀಶ್‌

04:24 PM Apr 24, 2018 | Team Udayavani |

ಹರಿಹರ: ನಗರ ಹಾಗೂ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಬವಣೆ ನೀಗಿಸಲು ಹಾಗು ಕೃಷಿ ಜಮೀನುಗಳಿಗೆ ವರ್ಷವಿಡಿ ನೀರು ಒದಗಿಸಲು ಶಾಶ್ವತ ಯೋಜನೆ ರೂಪಿಸುವುದು ತಮ್ಮ ಗುರಿ ಎಂದು ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಬಿ.ಪಿ.ಹರೀಶ್‌ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಬೇಸಿಗೆಯಲ್ಲೂ ಉಂಟಾಗುವ ಕುಡಿಯುವ ನೀರಿನ ಬವಣೆ ನೀಗಿಸಲು ಬೃಹತ್‌ ನೀರು ಸಂಗ್ರಹಾಗಾರ ನಿರ್ಮಿಸಲಾಗುವುದು. ತಾಲೂಕಿನ ಗ್ರಾಮಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಲಾಗುವುದು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗಕ್ಕೆ ನೀರು ತಲುಪುವಂತೆ ಅಕ್ರಮ ಪಂಪ್‌ ಸೆಟ್‌ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬೈರನಪಾದ ಏತ ನೀರಾವರಿ ಯೋಜನೆ ಅನುಷ್ಠಾನ, ದೇವರ ಬೆಳಕೆರೆ ಪಿಕಪ್‌ ಡ್ಯಾಂ ಅಲ್ಲದೆ ಕೊಂಡಜ್ಜಿ ಕೆರೆ ಅಭಿವೃದ್ಧಿಪಡಿಸಿ, ನಾಲೆಗಳಲ್ಲಿ ಸದಾ ನೀರು ಹರಿಯುವಂತೆ ಮಾಡುವುದು. ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಲಕ್ಷ ಕೋಟಿ ರೂ. ನ ಕೃಷಿ ಬಜೆಟ್‌ನಲ್ಲಿ ಸೇರಿಸಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ಹಾಗೂ ಕಳೆದ ಬಿಜೆಪಿ ಅವಧಿಯಲ್ಲಿ ಕ್ಷೇತ್ರದಲ್ಲಿ ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳಿಂದಾಗಿ ಜನ ತಮ್ಮನ್ನು ಬೆಂಬಲಿಸಲಿದ್ದು, ತಾಲೂಕಿನಲ್ಲಿ ಬಿಜೆಪಿ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next