ವಿಜಯಪುರ : ಜಿ.ಪಂ. ನಲ್ಲಿ ಕಳಪೆ ಕ್ರಿಮಿನಾಶಕ ವ್ಯಾಪಕ ಮಾರಾಟ ಕುರಿತು ಪ್ರತಿಧ್ವನಿಸಿದ 24 ಗಂಟೆ ಕಳೆಯುವ ಮೊದಲೇ ದಾಳಿ ನಡೆಸಿರುವ ಕೃಷಿ ಜಾಗೃತ ದಳದ ಅಧಿಕಾರಿಗಳು, ಪ್ರಕರಣ ದಾಖಲಿಸಿ ಅಂಗಡಿ-ಗೋದಾಮುಗಳನ್ನು ಸೀಝ್ ಮಾಡಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳ, ತಾಳಿಕೋಟೆ ಪಟ್ಟಣಗಳಲ್ಲಿ ರಸಗೊಬ್ಬರ-ಕ್ರಿಮಿನಾಶಕ ಮಾರಾಟದ 3 ಅಂಗಡಿಗಳ ಮೇಲೆ ಕೃಷಿ ಇಲಾಖೆಯ ಬೆಳಗಾವಿ ಜಾಗೃತ ದಳ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದಾಳಿಯ ವೇಳೆ 2 ಅಂಗಡಿ 1 ಗೋದಾಮು ಸೀಝ್ ಮಾಡಿದ್ದಾರೆ. ಅಲ್ಲದೇ ನೋಂದಣಿ ಹಾಗೂ ಪರವಾನಿಗೆ ರಹಿತವಾದ ಕ್ರಿಮಿನಾಶಕಗಳನ್ನು ವಶಕ್ಕೆಪಡೆದಿರುವ ಅಧಿಕಾರಿಗಳು, ಅಂಗಡಿ ಮಾಲಿಕರ ವಿರುದ್ಧ ಕೋರ್ಟನಲ್ಲಿ ಮೊಕದ್ದಮೆ ದಾಖಲಿಸುದಾಗಿ ಹೇಳಿದ್ದಾರೆ.
ಇದನ್ನೂ ಓದಿ :ಮಾಸ್ಕ್ ಧರಿಸದ ಮಹಿಳೆಗೆ ದಂಡ! ಆಕ್ಷೇಪಿಸಿದ ಕಾರ್ಪೊರೇಟರ್ ಕಾಲು ಮುರಿದ ಪೊಲೀಸರು
ತಾಳಿಕೋಟೆ ಪಟ್ಟಣದಲ್ಲಿ ಒಂದು ಅಂಗಡಿ ಮಾಲಿಕನಿಗೆ ನೋಟಿಸ್ ನೀಡಿದ್ದು, 40 ಸಾವಿರ ರೂ ಮೌಲ್ಯದ ನೋಂದಣಿ ರಹಿತ ಕೀಟನಾಶಕಗಳ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ.