Advertisement
ಈ ಸಂಕಷ್ಟದಲ್ಲೂ ಪ್ರಗತಿ ಸಾಧಿಸಿದ ಏಕೈಕ ಕ್ಷೇತ್ರ ಕೃಷಿ. ಇದಕ್ಕೆರೈತರ ಜತೆಗೆ ಕೃಷಿ ಇಲಾಖೆ ದೂರದೃಷ್ಟಿ ಮತ್ತು ಕಾರ್ಯಕ್ರಮಗಳುಕಾರಣ.ಲಾಕ್‌ಡೌನ್ ಸಂದರ್ಭದಲ್ಲಿ ರೈತರ ನೆರವಿಗಾಗಿ ಕೃಷಿ ಇಲಾಖೆ ವಾರ್‌ರೂಂ ಸ್ಥಾಪಿಸಿತು. ರೈತರು ತಮ್ಮ ಉತ್ಪನ್ನಗಳನ್ನು ಸಾಗಿಸಲು ನೀಡಿದ ಗ್ರೀನ್‌ಪಾಸ್, ಸ್ಥಳೀಯವಾಗಿ ನೇರ ಮಾರುಕಟ್ಟೆಗೆ ಅನುವು ಮಾಡಿಕೊಟ್ಟಿದ್ದು,
Related Articles
Advertisement
ಅನ್ನದಾತರ ನೆರವಿಗೆ ಅಗ್ರಿ ವಾರ್ ರೂಂ
ಕೊರೊನಾ-19ರ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೃಷಿ ಮತ್ತು ಕೃಷಿಸಂಬಂಧಿತ ಕ್ಷೇತ್ರಗಳಲ್ಲಿ ರೈತರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನಿವಾರಣೆಗೆ ಸಲಹೆ ನೀಡಲು ಮತ್ತು ಕೃಷಿ ಚಟುವಟಿಕೆಯನ್ನುಸುಗಮಗೊಳಿಸಲು ಪ್ರಮುಖ ಹೆಜ್ಜೆಯಾಗಿ ಕೃಷಿ ಇಲಾಖೆಯಆವರಣದಲ್ಲಿ “ಅಗ್ರಿ ವಾರ್ ರೂಂ’ ಅನ್ನು ಸ್ಥಾಪಿಸಲಾಯಿತು. ರೈತರಿಗೆ ದೂರವಾಣಿ ಮೂಲಕ ಮಾಹಿತಿ ಒದಗಿಸಲಾಗುತ್ತಿತ್ತು. ಇದರಿಂದ ಅವರುತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ನೆರವಾಗುತ್ತಿದೆ.ಇಂದಿಗೂ ಈ ವಾರ್ ರೂಂ ಕಾರ್ಯಾಚರಣೆಯಲ್ಲಿದೆ.ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳೂ ಕೂಡ ಅಗ್ರಿ ವಾರ್ ರೂಂ’ಪ್ರಾರಂಭಿಸಿ ಕೋವಿಡ್ ಸಂಕಟದ ಸಮಯದಲ್ಲಿ ರೈತರಿಗೆ ತಾಂತ್ರಿಕ ಮಾಹಿತಿ, ಸಲಹೆ ನೀಡಲು ಹಾಗೂ ಕ್ಷೇತ್ರ ಭೇಟಿಯ ಅಗತ್ಯಗಳಿಗೆಸ್ಪಂದಿಸಲು ನೆರವಾಗುತ್ತಿವೆ. ಸಂಪರ್ಕ ಮಾಹಿತಿ, ಮಾರಾಟ ವ್ಯವಸ್ಥೆಗೆ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುತ್ತಿವೆ. ರೈತರಲ್ಲಿ ಕೊರೊನಾಸೋಂಕಿನ ಸುರಕ್ಷತೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಬೀಜ,ನರ್ಸರಿಗಳ ಹಾಗೂ ಮಾರುಕಟ್ಟೆ ಮಾಹಿತಿ ಒದಗಿಸುತ್ತಿವೆ.
ಸಂಚಾರಕ್ಕೆ ಗ್ರೀನ್ ಪಾಸ್
ರಾಜ್ಯದಲ್ಲಿ ಕೊರೊನಾ ಕಟ್ಟುನಿಟ್ಟಿನ ಲಾಕ್‌ಡೌನ್‌ಜಾರಿಯಲ್ಲಿದ್ದ ಅವಧಿಯಲ್ಲಿ ಒಂದು ಕಡೆಯಿಂದಮತ್ತೂಂದು ಕಡೆಗೆ ವಾಹನ ಸಂಚಾರಕ್ಕೆ ಹಾಗೂಜನರ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು.ಇಂತಹ ಸಂದರ್ಭದಲ್ಲಿ ಕೃಷಿಕರಿಗೆ ಅನಾನುಕೂಲಆಗಬಾರದು, ಅವರು ಬೆಳೆದ ಕೃಷಿ ಉತ್ಪನ್ನಗಳಮಾರಾಟಕ್ಕೆ ಹಾಗೂ ಕೃಷಿ ಕಾರ್ಯಕ್ಕೆ ಯಾವುದೇತೊಂದರೆ ಆಗಬಾರದು ಎಂಬ ಉದ್ದೇಶದಿಂದರೈತರಿಗೆ ಕೃಷಿ ಇಲಾಖೆಯ ವತಿಯಿಂದ “ಗ್ರೀನ್‌ಪಾಸ್’ ವಿತರಣೆ ಮಾಡಲಾಗಿತ್ತು. ಕೃಷಿಸಾಮಗ್ರಿಗಳ ಮತ್ತು ಕೃಷಿ ಉತ್ಪನ್ನಗಳ ಸಾಗಾಣಿಕೆಗೆಲಾಕ್‌ಡೌನ್ ನಿಂದ ಸಡಿಲಗೊಳಿಸಿ ಅನುಕೂಲಮಾಡಲಾಯಿತು.
ಸಂಚಾರ ಸಸ್ಯ ಆರೋಗ್ಯ ಚಿಕಿತ್ಸಾಲಯ
ಕೀಟ/ ರೋಗ ಮತ್ತು ಕಳೆಗಳ ಬಾಧೆ ಹಾಗುಮಣ್ಣಿನ ಪೋಷಕಾಂಶಗಳ ಕೊರತೆ ಮತ್ತುಸಮರ್ಪಕ ನಿರ್ವಹಣೆ ಕುರಿತಂತೆ ರೈತರತಾಕುಗಳಿಗೆ ಭೇಟಿ ನೀಡಿ ಹತೋಟಿ ಕ್ರಮಗಳಕುರಿತು ಮಾರ್ಗೋಪಾಯಗಳನ್ನು ಒದಗಿಸಲುರಾಜ್ಯ ಸರ್ಕಾರದ ವತಿಯಿಂದ 60 ಸಂಚಾರ ಸಸ್ಯಆರೋಗ್ಯ ಚಿಕಿತ್ಸಾಲಯಗಳನ್ನು (ಕೃಷಿ ಸಂಜೀವಿನಿವಾಹನ ಒಳಗೊಂಡಂತೆ) ಎಲ್ಲಾ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ 2020-21ನೇಸಾಲಿನಲ್ಲಿ 12.70 ಕೋಟಿ ವೆಚ್ಚ ರೂ. ಅನುದಾನ ನೀಡಲಾಗಿದೆ.