Advertisement

ಕೋವಿಡ್ ಕಷ್ಟದ ನಡುವೆ ಕೃಷಿಯ ತಂಪು : ಮುಂಗಾರು ಬೆಂಬಲದ ನಿರೀಕ್ಷೆ

12:29 AM Apr 27, 2021 | Team Udayavani |

ಬೆಂಗಳೂರು : ಒಂದು ಕಡೆ ಉತ್ತಮ ಮುಂಗಾರು ನಿರೀಕ್ಷೆ, ಮತ್ತೂಂದು ಕಡೆ ನಗರ ಬಿಟ್ಟು ಸ್ವಗ್ರಾಮಗಳತ್ತ ಹೋಗಿರುವ ಜನರು… ಈ ಎರಡು ಕಾರಣಗಳಿಂದ ಕಳೆದ ವರ್ಷದಂತೆಯೇ ಈ ವರ್ಷವೂ ದಾಖಲೆ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆದು, ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ.

Advertisement

ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲಿ ಲಕ್ಷಾಂತರ ಮಂದಿ ಊರುಗಳತ್ತ ತೆರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಇದರಿಂದ ಇಡೀ ದೇಶದಲ್ಲಿ ಕೃಷಿ ವಲಯದಲ್ಲಿ ಮಾತ್ರ ಧನಾತ್ಮಕ ಪ್ರಗತಿ ಕಾಣಿಸಿತ್ತು. ಈಗ ಮತ್ತೆ ಮುಂಗಾರು ಹತ್ತಿರವಾಗುತ್ತಿದ್ದು, ಮುಂಗಾರು ಪೂರ್ವ ಮಳೆಯೂ ಚೆನ್ನಾಗಿ ಸುರಿಯುತ್ತಿದೆ. ಈ ವರ್ಷವೂ ದಾಖಲೆ ಪ್ರಮಾಣದಲ್ಲಿ ಕೃಷಿ ನಡೆಯಬಹುದು ಎಂಬುದು ಸರಕಾರದ ಆಶಾಭಾವನೆ.

ಸರಕಾರದ ನೆರವು
ಕಳೆದ ಬಾರಿ ರಾಜ್ಯ ಸರಕಾರವು ಸಹಕಾರಿ ಸಂಘಗಳ ಮೂಲಕ ಸುಮಾರು 5 ಲಕ್ಷ ರೈತರಿಗೆ ಹೊಸದಾಗಿ ಸಾಲ ನೀಡುವ ವ್ಯವಸ್ಥೆ ಮಾಡಿತ್ತು. ಪರಿಣಾಮವಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಗುರಿಮೀರಿದ ಸಾಧನೆ ಆಗಿತ್ತು.

ದಾಖಲೆ ಉತ್ಪಾದನೆ ಗುರಿ
ಹೆಚ್ಚಿನ ಮಂದಿ ಕೃಷಿ ಕ್ಷೇತ್ರಕ್ಕೆ ವಾಪಸಾಗಿದ್ದ ರಿಂದ ಸಾಗುವಳಿ ಭೂಮಿಯ ಪ್ರಮಾಣವೂ ಹೆಚ್ಚಾಗಿದೆ. ಇದರ ಪರಿಣಾಮ ಈ ವರ್ಷ ಕೃಷಿ ಇಲಾಖೆ ಹೆಚ್ಚಿನ ಬಿತ್ತನೆಯ ಗುರಿ ಇರಿಸಿ ಕೊಂಡಿದೆ. ಮುಂಗಾರು ಹಂಗಾಮಿನಲ್ಲಿ 77 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದೆ. ಪೂರ್ವ ಮುಂಗಾರು ಆರಂಭವಾಗಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

ಕಳೆದ ವರ್ಷದ ಸಾಧನೆ
ಮುಂಗಾರು ಹಂಗಾಮು
– ನಿಗದಿತ ಗುರಿಗಿಂತ ಶೇ. 4ರಷ್ಟು ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ
– 73 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ; 77.65 ಲಕ್ಷ ಹೆ. ಬಿತ್ತನೆ, ಶೇ. 77.65ರಷ್ಟು ಸಾಧನೆ

Advertisement

ಹಿಂಗಾರು ಹಂಗಾಮು
– 32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ, 27.10 ಲಕ್ಷ ಹೆ. ಬಿತ್ತನೆ, ಶೇ. 85ರಷ್ಟು ಗುರಿ ಸಾಧನೆ

ಬೇಸಗೆ
– 5 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ, 5. ಲಕ್ಷ ಹೆ. ಸಾಧನೆ, ಶೇ.100ರಷ್ಟು ಗುರಿ ಸಾಧನೆ

ರೈತರಿಗೆ ಬಿತ್ತನೆಗೆ ಯಾವುದೇ ಸಮಸ್ಯೆ ಆಗದಂತೆ ಸಿಎಂ ಸೂಚನೆ ನೀಡಿದ್ದಾರೆ. ಈ ವರ್ಷ 30 ಲಕ್ಷ ರೈತರಿಗೆ 20 ಸಾವಿರ ಕೋ.ರೂ. ಸಾಲ ನೀಡುವ ಗುರಿ ಇದೆ.
– ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next