Advertisement

ಕೃಷಿ ಕಾರ್ಮಿಕರ ಗ್ರಾಮ ಸಮ್ಮೇಳನ

01:53 PM Oct 14, 2019 | Team Udayavani |

ಕೊಪ್ಪಳ: ತಾಲೂಕಿನ ಹಿರೇಕಾಸನಕಂಡಿಯಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಗ್ರಾಮ ಘಟಕದ ಪ್ರಥಮ ಸಮ್ಮೇಳನ ಜರುಗಿತು.

Advertisement

ರಾಜ್ಯ ಉಪಾಧ್ಯಕ್ಷ ಎಚ್‌. ಗಂಗಾಧರಯ್ಯಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಕೂಲಿಕಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋರಾಟದ ದಾರಿಯೇ ಮುಖ್ಯ. ಬಡ ರೈತರು ಭೂಮಿಯನ್ನು ಕಳೆದುಕೊಂಡು ಮುಂದೆ ಕೃಷಿ ಕೂಲಿಕಾರರಾಗಿ ಉದ್ಯೋಗ ಇಲ್ಲದೆ ದೊಡ್ಡ ದೊಡ್ಡ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಇದೆಲ್ಲವನ್ನೂ ಸರ್ಕಾರದ ಗಮನ ಸೆಳೆಯಬೇಕಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು.

ತಾಲೂಕು ಸಂಚಾಲಕ ಸುಂಕಪ್ಪ ಗದಗ ಮಾತನಾಡಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಮನೆ, ನಿವೇಶನ, ರಸ್ತೆ, ಚರಂಡಿಗಳ ನಿರ್ಮಾಣ ಮಾಡುವಲ್ಲಿ ವಿಳಂಬ ಮಾಡುತ್ತಿರುವ ಪಂಚಾಯತ್‌ ಗಳ ಕಾರ್ಯ ವೈಖರಿ ಖಂಡಿಸಿದರಲ್ಲದೇ, ಗ್ರಾಮ ಪಂಚಾಯತ್‌ ಬಡ ಜನತೆ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ನೂತನ ಪದಾಧಿಕಾರಿಗಳ ಸಮಿತಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನೀಲಪ್ಪ ಗಾಳಿ, ಉಪಾಧ್ಯಕ್ಷರಾಗಿ ಹುಲಿಗೆವ್ವ ಪೂಜಾರ, ನಿಂಗಪ್ಪ ಬಡಿಗೇರ, ಕಾರ್ಯದರ್ಶಿಯಾಗಿ ಫಕೀರಪ್ಪ ಪೂಜಾರ, ಶಾಂತಾ ಪೂಜಾರ, ದೊಡ್ಡ ಗಾಳೆಪ್ಪ ಶಿವಪೂರ, ಖಜಾಂಚಿಯಾಗಿ ಬಸಮ್ಮ (ಮಳಸಿದ್ದಪ್ಪ) ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶಿವರಾಯ (ಸಣ್ಣ ಸಾರೆಪ್ಪ) ಸಿದ್ದಪ್ಪ ಪೂಜಾರ, ಗುಡದಪ್ಪ ಪೂಜಾರ, ಹುಲಿಗೆವ್ವ ಬೂದಾಳ, ಮಂಜುನಾಥ ಪೂಜಾರ, ಶಂಕ್ರವ್ವ ಇಟಗಿ, ನೀಲಮ್ಮ ಕರಡಿ, ನಿಂಗಪ್ಪ ಕೊರ್ರಪ್ಪನವರ ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next