Advertisement

ಶಿರಸಿ: ರೈತರಿಗೆ ರೈತನ ಮನೆಯಂಗಳದಲ್ಲಿಯೇ ಕೃಷಿ ವಿದ್ಯಾರ್ಥಿಗಳಿಂದ ಪಾಠ

01:50 PM Apr 13, 2022 | Team Udayavani |

ಶಿರಸಿ: ತಾಲೂಕಿನ ಸೋಂದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಡಲಕೊಪ್ಪ ಮಜರೆಯಲ್ಲಿ ರೈತರಿಗೆ-ರೈತನ ಮನೆಯಂಗಳದಲ್ಲಿಯೇ ಕೃಷಿ ವಿದ್ಯಾರ್ಥಿಗಳಿಂದ ಪಾಠ ಎಂಬ ಅಪರೂಪವಾದ ತರಬೇತಿ ಕಾರ್ಯಕ್ರಮ ಜರುಗಿತು.

Advertisement

ಶಿರಸಿಯ ತೋಟಗಾರಿಕಾ ಮಹಾವಿದ್ಯಾಲಯದ ಆಶ್ರಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕಳೆದ ಒಂದು ತಿಂಗಳಿನಿಂದ ತಳಮಟ್ಟದ ಅಧ್ಯಯನಕ್ಕೋಸ್ಕರ ಸೋಂದಾ -ಮಠದೇವಳ ಗ್ರಾಮಗಳಲ್ಲಿ ಪ್ರತಿ ರೈತರ ಮನೆ ಬಾಗಿಲಿಗೆ ಬಂದು ಅಧ್ಯಯನ ನಡೆಸುತ್ತಿದ್ದಾರೆ. ತಾವೂ ಮಾಹಿತಿ ಪಡೆದು ಕಳೆದ ನಾಲ್ಕು ವರ್ಷಗಳಿಂದ ತಾವು ಪಡೆದುಕೊಂಡಿರುವ ತೋಟಗಾರಿಕೆ ವಿಜ್ಞಾನಗಳ ಮಾಹಿತಿಯನ್ನು ರೈತರಿಗೆ ಹಂಚುತ್ತಿರವ ಈ ಕಾರ್ಯಕ್ರಮದಲ್ಲಿ ರೈತರೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ

ಬಾಡಲಕೊಪ್ಪ ರಾಮಣ್ಣನವರ ಮನೆಯಂಗಳದಲ್ಲಿ ಕೈ ತೋಟದಿಂದ-ಕೈತುತ್ತಿನವರೆಗೆ ವಿದ್ಯಾರ್ಥಿನಿ ಭುವನೇಶ್ವರಿ ಕೊಟಗೀ, ತೋಟಗಾರಿಕೆ ಯೊಂದಿಗೆ ಉಪಬೆಳೆಯಾಗಿ ಔಷಧಿ ಮತ್ತು ಸುಗಂಧಿ ಸಸ್ಯಗಳನ್ನು ಬೆಳೆದು ರೈತರು ತಮ್ಮ ಆರ್ಥಿಕ  ವೃದ್ಧಿಯನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ವಿದ್ಯಾರ್ಥಿನಿ ಭಾಮತಿ ಭಟ್ ವಿವರಿಸಿದರು.

ರೈತರ ಸಮಸ್ಯೆ ಗಳಿಗೆ ತೋಟಗಾರಿಕಾ ಮಹಾವಿದ್ಯಾಲಯದ, ತೋಟಗಾರಿಕಾ ವಿಸ್ತರಣಾಧಿಕಾರಿ ಡಾ. ಶಿವಾನಂದ ಹೊಂಗಲ್  ಉತ್ತರ ಕೊಟ್ಟರು.ಈ ವೇಳೆ ಪಿ ಎಚ್ ಡಿ ವಿದ್ಯಾರ್ಥಿ ಅರ್ಪಿತಾ ಉಪಸ್ಥಿತರಿದ್ದರು.

ತರಬೇತಿ ಕಾರ್ಯಕ್ರಮದಲ್ಲಿ ಬಾಡಲಕೊಪ್ಪ-ಹುಳಸೇಹೊಂಡ-ಕಡೆಗುಂಟ-ಹೊಸ್ತೋಟ-ಹುಲ್ಲೇಸರ , ರೈತರು-ರೈತ ಮಹಿಳೆ ಯರು ಇದ್ದರು. ವಿಶ್ವವಿದ್ಯಾಲಯದಿಂದ ಪಾಲ್ಗೊಂಡ ಪ್ರತಿಯೊಬ್ಬ ರೀತಿಗೂ ವಿವಿಧ ರೀತಿಯ ಬೀಜಗಳ ಸಂಗ್ರಹ ಕಿಟ್ ಉಚಿತವಾಗಿ ವಿತರಿಸಲಾಯಿತು.

Advertisement

ವಿಭಾ ಭಟ್ ಸ್ವಾಗತಿಸಿದರು. ಸಂಜಯ ಎಂ, ಎನ್, ರತ್ನಾಕರ ಹೆಗಡೆ ಬಾಡಲಕೊಪ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next