ಶಿರ್ವ : ಉಡುಪಿ ಜಿಲ್ಲಾ ರೈತ ಮೋರ್ಚಾದ ಆಶ್ರಯದಲ್ಲಿ ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಕಾರ್ಯಕ್ರಮವು ಕುತ್ಯಾರು ಗ್ರಾ.ಪಂ. ಅಧ್ಯಕ್ಷೆ ಲತಾ ಆಚಾರ್ಯ ಅವರ ಅಧ್ಯಕ್ಷತೆಯಲ್ಲಿ ಕಳತ್ತೂರು ಹೆಲೆನ್ ಫೆರ್ನಾಂಡಿಸ್ ಅವರ ಮನೆಯ ವಠಾರದಲ್ಲಿ ಜು. 21ರಂದು ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ರೈತ ಮೋರ್ಚಾ ರೈತ ಮೋರ್ಚಾದ ಅಧ್ಯಕ್ಷ ಪ್ರವೀಣ್ ಕುಮಾರ್ ಗುರ್ಮೆ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಕೃಷಿಗೆ ಶ್ರದ್ಧೆ ಮತ್ತು ಆಸಕ್ತಿ ಅತ್ಯಗತ್ಯವಾಗಿದ್ದು , ರೈತರು ಕೃಷಿ ಮತ್ತು ತೋಟಗಾರಿಕೆ ಇಲಾಖೆಯೊಂದಿಗೆ ನಿಕಟ ಸಂಪರ್ಕ ಹೊಂದಿದಲ್ಲಿ ಉಪಯುಕ್ತ ಯೋಜನೆಗಳ ಮಾಹಿತಿ ಮತ್ತು ಪ್ರಯೋಜನ ಪಡೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿ ಹೇಮಂತ್ ಕುಮಾರ್ ಮತ್ತು ಕಾಪು ತೋಟಗಾರಿಕೆ ಇಲಾಖೆಯ ಸಹಾಯಕ ಅಧೀಕ್ಷಕ ಅಮಿತ್ ಸಿಂಪಿ ಉದ್ಯೋಗ ಖಾತ್ರಿ ಯೋಜನೆ ಮತ್ತು ತೋಟಗಾರಿಕೆ ಇಲಾಖೆಯಿಂದ ಸಿಗುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಶಿರ್ವ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಸಹಕಾರಿ ಬ್ಯಾಂಕ್‌ನಿಂದ ರೈತರಿಗೆ ಸಿಗುವ ಸಾಲ ಸೌಲಭ್ಯಗಳ ಸದುಪಯೋಗದ ಬಗ್ಗೆ ತಿಳಿಸಿದರು.
ಸಮಾರಂಭದಲ್ಲಿ ಗ್ರಾಮದ ಹಿರಿಯ ಕೃಷಿಕರಾದ ಹೆಲೆನ್ ಫೆರ್ನಾಂಡಿಸ್ ಮತ್ತು ದಿನಕರ ರಾವ್ ಕಳತ್ತೂರು ಅವರನ್ನು ಜಿಲ್ಲಾ ರೈತ ಸಂಘದ ವತಿಯಿಂದ ಸಮ್ಮಾನಿಸಲಾಯಿತು.ಸಂಘಟನೆಯಲ್ಲಿ ಶಕ್ತಿಯಿದ್ದು ,ತೆಂಗು ಬೆಳೆಗಾರರ ಸಂಘ ಸ್ಥಾಪನೆಯ ಧ್ಯೇಯೋದ್ಧೇಶಗಳನ್ನು ಇಲಾಖಾಧಿಕಾರಿ ಹೇಮಂತ ಕುಮಾರ್ ತಿಳಿಸಿದರು.
ಕಾಪು ಮಂಡಲ ರೈತ ಮೋರ್ಚಾದ ಅಧ್ಯಕ್ಷ ಗುರುನಂದನ್ ನಾಯಕ್, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಪಾಂಗಾಳ, ಕುತ್ಯಾರು-ಕಳತ್ತೂರು ಗ್ರಾ.ಪಂ. ಸದಸ್ಯರಾದ ಜನಾರ್ಧನ ಆಚಾರ್ಯ, ದಿವ್ಯಾ ಶೆಟ್ಟಿಗಾರ್,ಕಳತ್ತೂರು ಬೂತ್ ಅಧ್ಯಕ್ಷ ಪ್ರದೀಪ್ ರಾವ್ ವೇದಿಕೆಯಲ್ಲಿದ್ದರು.
ಚಂದ್ರನಗರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ,ಕಳತ್ತೂರು ಗ್ರಾಮದ ಕೃಷಿಕರು,ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ರೈತ ಮೋರ್ಚಾಪ್ರಧಾನ ಕಾರ್ಯದರ್ಶಿ ಗೋಪಾಲ ಕಾಂಚನ್ ಸ್ವಾಗತಿಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಳತ್ತೂರು ಒಕ್ಕೂಟದ ಪ್ರತಿನಿಧಿ ಶಾರದೇಶ್ವರಿ ಗುರ್ಮೆ ನಿರೂಪಿಸಿ, ವಂದಿಸಿದರು