Advertisement
ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೋಟು ಅಮಾನ್ಯ ಕ್ರಮವನ್ನು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಬೊಕ್ಕಸಕ್ಕೆ ಐದರಿಂದ ಆರು ಸಾವಿರ ಕೋಟಿ ರೂ. ನಷ್ಟವಾಗಲಿದೆ ಎಂದು ಹೇಳಿದ್ದರು. ಆದರೆ, ತೆರಿಗೆ ಸಂಗ್ರಹ ಲೆಕ್ಕಾಚಾರ ನೋಡಿದರೆ ಯಾವುದೇ ಪರಿಣಾಮ ಬೀರಿಲ್ಲವೆಂಬುದು ಸಾಬೀತಾಗಿದೆ ಎಂದು ಹೇಳಿದರು. ರಿಯಲ್ ಎಸ್ಟೇಟ್ ವಲಯದ ಕುಸಿತದಿಂದ ನೋಂದಣಿ ಮತ್ತು ಮುದ್ರಾಂಕ ಬಾಬಿ¤ನಿಂದ ಬರುವ ಆದಾಯದಲ್ಲಿ 1 ಸಾವಿರ ಕೋಟಿ ರೂ.ವರೆಗೆ ಕಡಿಮೆಯಾಗಿದೆ. ಆದರೆ, ಅದು ಎಲ್ಲ ಕಾಲದಲ್ಲೂನಡೆಯುವುದೇ. ಅದನ್ನು ಹೊರತುಪಡಿಸಿದರೆ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ ಯಾವುದೇ ಬಾಬಿ¤ನಲ್ಲೂ
ಕಡಿಮೆಯಾಗಿಲ್ಲ. ಹೀಗಾಗಿ, ನೋಟು ಅಮಾನ್ಯ ಕ್ರಮವನ್ನು ಜನತೆ ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ.
ಶೇ.10.5ರಷ್ಟಿದ್ದು, ಇದೀಗ ಶೇ.6.9ಕ್ಕೆ ಇಳಿದಿದೆ. ನೋಟು ಅಮಾನ್ಯದಿಂದ ಏನೋ ಆಗಿಬಿಡುತ್ತದೆಂಬ ಗುಲ್ಲೆಬ್ಬಿಸಲಾಯಿತು. ಆದರೆ, ಯಾವುದಕ್ಕೂ ಅಡ್ಡಿಯಾಗದೆ ಶೇ.7.1ರಷ್ಟು ಜಿಡಿಪಿ ಪ್ರಗತಿ ದಾಖಲಾಗಿದೆಯೆಂದು
ಹೇಳಿದರು. ರಾಜ್ಯ ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ 37 ಸಾವಿರ ಕೋಟಿ ರೂ. ಸಾಲ ಪಡೆಯುವ ಅವಕಾಶ ಮಾಡಿಕೊಂಡಿದೆ. ಈಗಾಗಲೇ ರಾಜ್ಯದ ಸಾಲದ ಪ್ರಮಾಣ 2.20 ಲಕ್ಷ ಕೋಟಿ ರೂ. ಮೀರಿದೆ. ಪ್ರತಿಪಕ್ಷ ನಾಯಕರಾಗಿದ್ದಾಗ ಇದೇ ಸಿದ್ದರಾಮಯ್ಯ, ಸಾಲ ಮಾಡಿ ಆಡಳಿತ ನಡೆಸಬೇಡಿ ಎನ್ನುತ್ತಿದ್ದರು. ಆದರೆ, ಇದೀಗ
ಅವರೇ ಸಾಲ ಮಾಡುತ್ತಿದ್ದಾರೆಂದು ಹೇಳಿದರು. ಸಿಎಂ ಸಮರ್ಥನೆ
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ನಾನು ಸಾಲ ಮಾಡಲು ಅವಕಾಶ ಇದೆ ಎಂದು ಸಾಲ ಮಾಡುವುದು ಬೇಡ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಾಲ ಮಾಡಿ, ಸಾಲ ಮಾಡಿದರೂ ಅಭಿವೃದ್ಧಿ ಮತ್ತು ಆಸ್ತಿ
ಸೃಜಿಸಬೇಕು ಎಂದು ಹೇಳಿದ್ದೆ. ನಮ್ಮ ಸರ್ಕಾರ ಅದರಂತೆ ನಡೆದುಕೊಳ್ಳುತ್ತಿದೆ. ಸಾಲ ಪಡೆಯುವ ಮಿತಿ ಶೇ.25ರಷ್ಟಿದ್ದರೂ ನಾವು ಶೇ.18. 9
Related Articles
ವಿಧಾನಸಭೆ: ಬಜೆಟ್ ಮೇಲಿನ ಚರ್ಚೆಯನ್ನು ಬೇಗ ಮುಗಿಸುವಂತೆ ಸೂಚಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ
ಅವರ ವಿರುದ್ಧ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಸಮಾಧಾನಗೊಂಡ ಘಟನೆ ನಡೆಯಿತು. ಜಗದೀಶ್ ಶೆಟ್ಟರ್,
ಬಜೆಟ್ ಮೇಲಿನ ಚರ್ಚೆ ವೇಳೆ ಸರ್ಕಾರದ ವೈಫಲ್ಯಗಳನ್ನು ಇಲಾಖಾವಾರು ಹೇಳುತ್ತಿದ್ದಾಗ ಮಧ್ಯಪ್ರವೇಶಿಸಿದ ಸ್ಪೀಕರ್, “ಇನ್ನೆಷ್ಟು ಹೊತ್ತು ಮಾತನಾಡುತ್ತೀರಿ, ಬೇಗ ಮುಗಿಸಿ’ ಎಂದು ಪದೇಪದೆ ಹೇಳುತ್ತಿದ್ದರು. ಆದರೂ ಮಾತು
ಮುಂದುವರಿಸಿದಾಗ, ಬೇಗ ಮುಗಿಸಿ. ಇನ್ನೂ ಸಾಕಷ್ಟು ವಿಚಾರ ಚರ್ಚೆಯಾಗಬೇಕೆಂದು ಸ್ಪೀಕರ್ ಹೇಳಿದ್ದು ಜಗದೀಶ್ ಶೆಟ್ಟರ್ ಅವರನ್ನು ಕೆರಳಿಸಿತು. ಬಜೆಟ್ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕರು ಮಾತನಾಡುವಾಗ ಈ ರೀತಿ ನಿಯಂತ್ರಣ ಹೇರುವುದು, ಕಾಲಮಿತಿ ನಿಗದಿಪಡಿಸುವುದು ಸರಿಯಲ್ಲ. ಎಂದು ಆಕ್ಷೇಪ ವ್ಯಕ್ತಪಡಿಸಿದರು.
Advertisement