Advertisement

ಆಧುನಿಕ ಯಂತ್ರಗಳ ಬಳಕೆಯಿಂದ ಕೃಷಿ ಕ್ಷೇತ್ರ ಅಭಿವೃದ್ಧಿ

03:52 PM Jun 13, 2018 | Team Udayavani |

ಯಾದಗಿರಿ: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಆಧುನಿಕ ಯಂತ್ರಗಳನ್ನು ಬಳಸಲು
ಮುಂದಾದರೆ ಕೃಷಿ ಕ್ಷೇತ್ರ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಶಹಾಪುರ ತಾಪಂ ಉಪಾಧ್ಯಕ್ಷ ನಂದನಗೌಡರ
ಹೇಳಿದರು.

Advertisement

ಶಹಾಪುರ ತಾಲೂಕಿನ ವಡಗೇರಾ ಸಮೀಪದ ಹೊರಟೂರ ಗ್ರಾಮದಲ್ಲಿ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ
ಇಲಾಖೆ ಆಶ್ರಯದಲ್ಲಿ ಈಚೆಗೆ ಆಯೋಜಿಸಿದ್ದ ಕೃಷಿ ಕಲ್ಯಾಣ ಅಭಿಯಾನದಡಿ ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಹಾಗೂ ಜೇನು ಸಾಕಾಣಿಕೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ವಿಜ್ಞಾನ ಕೆಂದ್ರದ ತೋಟಗಾರಿಕೆ ವಿಜ್ಞಾನಿ ಡಾ| ಸತೀಶ ಕಾಳೆ ಮಾತನಾಡಿ, ರೈತರ ಆದಾಯ  ಗುಣಗೊಳಿಸುವ
ನಿಟ್ಟಿನಲ್ಲಿ ಕೇವಲ ದವಸ ಧಾನ್ಯಗಳನ್ನು ಮಾತ್ರ ಬೆಳೆಯದೆ, ವಿವಿಧ ಬಗೆಯ ಉಪಕಸುಬುಗಳನ್ನು ಅಳವಡಿಸಿಕೊಂಡು ಆದಾಯ ಹೆಚ್ಚಿಸಿಕೊಳ್ಳುವ ಕ್ರಮಗಳನ್ನು ತಿಳಿಸಿದರು.

ಮಣ್ಣು ಮತ್ತು ನೀರು ವಿಜ್ಞಾನಿ ಡಾ| ಉಮೇಶ ಬಾರಿಕರ ಮಾತನಾಡಿ, ರೈತರು ಬೆಳೆಯ ಆರೋಗ್ಯ ಮತ್ತು
ಉತ್ಪಾದನೆ ಹೆಚ್ಚಿಸಲು ಮಣ್ಣಿನ ಪರೀಕ್ಷೆ ಮಾಡಿಸಬೇಕು. ನೀರಿನ ಸದ್ಬಳಕೆ ಹೆಚ್ಚಿಸಲು ಹನಿ ನೀರಾವರಿ ಮತ್ತು
ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಪಶು ವಿಜ್ಞಾನಿ ಡಾ| ಮಹೇಶ, ಸಹಾಯಕ ತೋಟಗಾರಿಕೆ ಅಧಿಕಾರಿ ಶ್ರೀಕಾಂತ, ಅರಣ್ಯ ಅಧಿಕಾರಿ ಮೊಹ್ಮದ ಅಸದ್‌ ಮಾತನಾಡಿ, ರೈತರಿಗೆ ಹಲವು ಉಪಯುಕ್ತ ಮಾಹಿತಿ ನೀಡಿದರು.

Advertisement

ಇದೇ ಸಂದರ್ಭದಲ್ಲಿ ಕೃಷಿ ಕಲ್ಯಾಣ ಅಭಿಯಾನ ಯೋಜನೆಯ ಅಂಗವಾಗಿ ಆಯ್ಕೆಯಾದ ಕೃಷಿ ಕುಟುಂಬಗಳಿಗೆ ತೊಗರಿ ಬೀಜದ ಮಿನಿ ಪೊಟ್ಟಣವನ್ನು ವಿತರಿಸಲಾಯಿತು. ಇದರೊಂದಿಗೆ ಅರಣ್ಯ ಮತ್ತು ತೋಟಗಾರಿಕೆ ಸಸಿಗಳನ್ನೂ ಸಹ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಯಲ್ಲಪ್ಪ ಬಾಗಲಿ, ಕೃಷಿ ಅಧಿಕಾರಿ ಜೈರಾಮ ಚವ್ಹಾಣ ಇದ್ದರು. 60ಕ್ಕೂ ಹೆಚ್ಚು ರೈತರು ಈ ತರಬೇತಿ ಲಾಭ ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next