Advertisement
ಚಕ್ರಿ ಬಾಯಿ ಮತ್ತು ಇತರ 250 ಕೃಷಿಕರ ಬದುಕಿನಲ್ಲಿ 17 ಜೂನ್ 2018, ಒಂದು ವಿಶೇಷ ದಿನ. ಅವರೆಲ್ಲರೂ ತೆಲಂಗಾಣದ ಜಹೀರ್ಬಾದ್ ಹತ್ತಿರದ ಅರ್ಜುನ ನಾಯಕ್ ಹಟ್ಟಿಯವರು. ಆ ದಿನ ಅವರ ಹಟ್ಟಿಗೆ 120 ಕಿ.ಮೀ ದೂರದ ರಾಜಧಾನಿ ಹೈದರಾಬಾದಿನಿಂದ ಸುಮಾರು 100 ಗ್ರಾಹಕರು ಬಂದಿದ್ದರು. ಕೃಷಿಕರು ಮತ್ತು ಗ್ರಾಹಕರ ನಡುವಣ ಕರಾರು ಪತ್ರಕ್ಕೆ ಸಹಿ ಮಾಡಲಿಕ್ಕಾಗಿ.
Related Articles
Advertisement
ಕೃಷಿಕರು ಒಂದು ಅಥವಾ ಎರಡು ವಿಧದ ಧಾನ್ಯ ಅಥವಾ ದ್ವಿದಳಧಾನ್ಯ ಮಾತ್ರ ಒದಗಿಸುತ್ತೇವೆಂದು ಒಪ್ಪಂದ ಮಾಡಿಕೊಳ್ಳಬಹುದಾಗಿತ್ತು. ಆದರೆ, ನಮ್ಮ ಗ್ರಾಮೀಣ ಪ್ರದೇಶಗಳ ಕೃಷಿಯ ತಳಿವೈವಿಧ್ಯವನ್ನು ಮತ್ತು ಬಹುಬೆಳೆಗಳನ್ನು ನಗರವಾಸಿಗಳ ಊಟದ ಬಟ್ಟಲಿಗೆ ವರ್ಗಾಯಿಸುವುದು ಮತ್ತು ಅಗ್ಗದ ಅಕ್ಕಿಯನ್ನೇ ತಿನ್ನುತ್ತಿರುವ ಗ್ರಾಹಕರಿಗೆ ಉತ್ತಮ ಬದಲಿ ಆಹಾರ ಒದಗಿಸುವುದು ನಮ್ಮ ಉದ್ದೇಶ ಎನ್ನುತ್ತಾರೆ ಡೆಕ್ಕನ್ ಡೆವಲಪೆ¾ಂಟ… ಸೊಸೈಟಿಯ ನಿರ್ದೇಶಕರಾದ ಪಿ.ವಿ.ಸತೀಶ್. ಈ ಒಪ್ಪಂದ ಆ ಸೊಸೈಟಿಯದೇ ಯೋಜನೆ.
ಮಳಿಗೆಯಲ್ಲಿ ಸಾವಯವ ಆಹಾರ ಖರೀದಿಸುವಾಗ ನಮ್ಮಲ್ಲಿ ಸುರಕ್ಷಿತ ಆಹಾರ ಖರೀದಿಸಿದ್ದೇವೆಂಬ ಭಾವ. ಆದರೆ ಈ ಯೋಜನೆಯಲ್ಲಿ ಪಾಲ್ಗೊಳ್ಳುವುದು ಅದಕ್ಕಿಂತಲೂ ಮಿಗಿಲಾದ ಅನುಭವ. ಇಂತಹ ಯೋಜನೆಯನ್ನು ಮುಂಚೆಯೇ ಶುರು ಮಾಡಬೇಕಿತ್ತು. ಇದು ನಮ್ಮ ದೇಶದಲ್ಲಿ ಕೃಷಿಕ-ಗ್ರಾಹಕ ಸಂಬಂಧಕ್ಕೊಂದು ಹೊಸ ಮಾದರಿ; ಯಾಕೆಂದರೆ, ಈ ಮಾದರಿಯಲ್ಲಿ ರೈತರಿಗೆ ನೇರವಾಗಿ ಬೆಂಬಲ ಸೂಚಿಸುವ ಮೂಲಕ ಗ್ರಾಹಕರು ಹೆಚ್ಚಿನ ಬದ್ಧತೆ ತೋರಿಸುತ್ತಿ¨ªಾರೆ ಎನ್ನುವುದು ಹೈದರಾಬಾದ್ ವಿಶ್ವವಿದ್ಯಾಲಯದ ಪೊ›ಫೆಸರ್ ವಿನೋದ್ ಪವರಾಲ ಅವರ ಅಭಿಪ್ರಾಯ.
ತೆಲಂಗಾಣದ ಜಹೀರ್ಬಾದ್ ಪ್ರದೇಶದ ರೈತರು ಅನುಸರಿಸುವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಸುವ ವೆಚ್ಚ ಕಡಿಮೆ. ಹಾಗಾಗಿ, ಅಲ್ಲಿನ ರೈತರು ಸಾಲದ ವಿಷವರ್ತುಲದಲ್ಲಿ ಸಿಕ್ಕಿ ಬೀಳುವುದಿಲ್ಲ. ಹಲವು ತಲೆಮಾರುಗಳಿಂದ ಬಿತ್ತುತ್ತಿರುವ ದೇಸಿ ಬೀಜಗಳನ್ನೇ ಅವರು ಈಗಲೂ ಬಿತ್ತುತ್ತಾರೆ. ಅಲ್ಲಿ ಮಣ್ಣು ಮತ್ತು ಹವಾಮಾನ ಅವಲಂಬಿಸಿ, ಯಾವ ಬೀಜ ಬಿತ್ತಬೇಕೆಂದು ಅಲ್ಲಿನ ರೈತ ಸಮುದಾಯದ ಮಹಿಳೆಯರೇ ನಿರ್ಧರಿಸುತ್ತಾರೆ. ಗಮನಿಸಿ: ಅಲ್ಲಿನ ರೈತರೊಂದಿಗೆ ಕಳೆದ ಮುವತ್ತು ವರುಷಗಳಿಂದ ಡೆಕ್ಕನ್ ಡೆವಲಪೆ¾ಂಟ… ಸೊಸೈಟಿ ಕೆಲಸ ಮಾಡುತ್ತಿದೆ; ಈ ಅವಧಿಯಲ್ಲಿ ಅಲ್ಲಿ ಸಾಲದ ಹೊರೆಯಿಂದ ಒಬ್ಬನೇ ಒಬ್ಬ ರೈತನೂ ಆತ್ಮಹತ್ಯೆ ಮಾಡಿಕೊಂಡಿಲ್ಲ.
ಅಲ್ಲಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿರುವ ಮೇಡಕ್ ಮತ್ತು ವಾರಂಗಲ್ ಜಿÇÉೆಗಳಲ್ಲಿ ಪರಿಸ್ಥಿತಿ ತದ್ವಿರುದ್ಧ. ಅಲ್ಲಿ ಪ್ರತಿ ವರ್ಷ ಹಲವಾರು ರೈತರ ಆತ್ಮಹತ್ಯೆ. ಅಂಕೆಸಂಖ್ಯೆಗಳ ಪ್ರಕಾರ, ರೈತರ ಆತ್ಮಹತ್ಯೆಯಲ್ಲಿ ತೆಲಂಗಾಣ ರಾಜ್ಯಕ್ಕೆ ದೇಶದಲ್ಲಿ ಮೂರನೇ ಸ್ಥಾನ. ಆ ಜಿÇÉೆಗಳ ರೈತರಿಗೆ ಹೋಲಿಸಿದಾಗ, ಜಹೀರ್ಬಾದ್ ಪ್ರದೇಶದ ರೈತರು, ಮುಖ್ಯವಾಗಿ ಮಹಿಳೆಯರು, ಕೃಷಿಯ ಅಂತಃಸತ್ವವನ್ನು ಉಳಿಸಿಕೊಂಡಿ¨ªಾರೆ.
ನಮ್ಮ ದೇಶದ ಬಹುಪಾಲು ಪ್ರದೇಶದಲ್ಲಿ ಇಂದು ನಾವು ಕಾಣುತ್ತಿರುವುದು ವಿಷಮಯ ಕೃಷಿ; ರಾಸಾಯನಿಕ ಗೊಬ್ಬರಗಳು ಮತ್ತು ಪೀಡೆನಾಶಕಗಳನ್ನು ಮಣ್ಣಿಗೆ ಸುರಿಯುತ್ತಾ, ಭೂಮಿಗೆ ನೇರವಾಗಿ ವಿಷ ತುಂಬಿಸಲಾಗುತ್ತಿದೆ. ಆದರೆ ಇಂದು ನಮಗೆ ಬೇಕಾಗಿರುವುದು ವಿಷಮುಕ್ತ ಕೃಷಿ ಮತ್ತು ವಿಷಮುಕ್ತ ಆಹಾರ.
ಈ ನಿಟ್ಟಿನಲ್ಲಿ, ವಿಷಮುಕ್ತ ಆಹಾರಕ್ಕಾಗಿ ಮಾಲ್ ಹಾಗೂ ಮಳಿಗೆಗಳನ್ನು ಅವಲಂಬಿಸುವ ಬದಲಾಗಿ, ವಿಷಮುಕ್ತ ಆಹಾರ ಉತ್ಪಾದಿಸುವ ಪ್ರಕ್ರಿಯೆಯಲ್ಲಿ ಕೃಷಿಕರ ಜೊತೆಗಾರರಾಗಲು ನಗರವಾಸಿಗಳು ಮುಂದಾದದ್ದು ಐತಿಹಾಸಿಕ ಬೆಳವಣಿಗೆ. ಭಾರತದÇÉೇ ಮೊದಲನೆಯದಾದ ತೆಲಂಗಾಣದ ಈ ನಗರವಾಸಿ ಗ್ರಾಹಕರು ಬೆಂಬಲಿಸುವ ವಿಷಮುಕ್ತ ಕೃಷಿ ಇತರ ರಾಜ್ಯಗಳಿಗೂ ಮಾದರಿಯಾಗಲಿ.
ಅಡ್ಕೂರು ಕೃಷ್ಣ ರಾವ್