Advertisement

ಕರ್ಫ್ಯೂ ಮಧ್ಯೆಯೂ ನಿಲ್ಲದ ಕೃಷಿ ಚಟುವಟಿಕೆ

12:54 PM May 13, 2021 | Team Udayavani |

ಅಳ್ನಾವರ: ಭಾಗದೆಲ್ಲೆಡೆ ಹಲವು ಸಲಉತ್ತಮ ಮಳೆ ಸುರಿದ ಪರಿಣಾಮ ಜತೆಗೆ ಕೊರೊನಾ ಕರ್ಫ್ಯೂಇದ್ದರೂ ಕೃಷಿ ಚಟುವಟಿಕೆಗಳಿಗೆಅನುಮತಿ ನೀಡಿದ್ದರಿಂದ ಬಿತ್ತನೆಗೆಭೂಮಿ ಸಿದ್ಧಗೊಳಿಸುವ ಕೆಲಸಭರದಿಂದ ನಡೆಯುತ್ತಿದೆ ಆದರೆಕೃಷಿ ಇಲಾಖೆ ಬಿತ್ತನೆ ಬೀಜಇನ್ನೂ ವಿತರಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮುಂಗಾರು ಪೂರ್ವ ಮಳೆಗಳುಉತ್ತಮವಾಗಿದ್ದು ಬಿತ್ತನೆಗೆಸೂಕ್ತವಾದ ವಾತಾವರಣವಿದೆ.ಆದರೆ ರಿಯಾಯಿತಿಯಲ್ಲಿ ಬಿತ್ತನೆಯ ಬೀಜ ಇನ್ನೂ ವಿತರಣೆಮಾಡುತ್ತಿಲ್ಲ.ಇಲಾಖೆಯನ್ನುನಂಬಿಕೊಂಡು ಕುಳಿತರೆಮುಂಗಾರು ಮಳೆ ಆರಂಭವಾದರೆಬಿತ್ತನೆಯಿಲ್ಲದೆ ಭೂಮಿಯೆಲ್ಲಾ ಪಾಳು ಬೀಳುತ್ತದೆ ಹಾಗಾಗಿಖಾಸಗಿ ವಿತರಕರಿಂದ ಅ ಧಿಕ ಬೆಲೆನೀಡಿ ಬೀಜ ಖರೀದಿಸುವುದು ಅನಿವಾರ್ಯವಾಗಲಿದೆ ಎನ್ನುತ್ತಿದ್ದಾರೆಭಾಗದ ರೈತರು.

ಸಮಯ ಬದಲಾವಣೆ: ಕೃಷಿಇಲಾಖೆ ಕಚೇರಿಯ ಕಾರ್ಯಸಮಯ ಬದಲಾವಣೆ ಮಾಡಿದ್ದು,ಬೆಳಿಗ್ಗೆ 6 ರಿಂದ 10ರವರೆಗೆಕಾರ್ಯ ನಿರ್ವಹಿಸಲಿದೆ. ಈಸಮಯದಲ್ಲಿಯೇ ರೈತರುಆಗಮಿಸಿ ಸಲಹೆ-ಸಲಕರಣೆ ಪಡೆಯಬೇಕಿದೆ. ಆದರೆಬೆಳಿಗ್ಗೆ ತಂಪಾದ ಸಮಯದಲ್ಲಿ ರೈತರೆಲ್ಲರೂ ಕೃಷಿ ಚಟುವಟಿಕೆಗಳಲ್ಲಿತೊಡಗುವುದು ಸಾಮಾನ್ಯ.ಜತೆಗೆ ದೂರ ಊರುಗಳಿಂದ ಆಗಮಿಸುವ ರೈತರಿಗೆ ಈಸಮಯ ಸೂಕ್ತವಾಗಿರುವುದಿಲ್ಲ.ಕಾರಣ ದಿನಪೂರ್ತಿ ಸೇವೆಒದಗಿಸುವಂತೆ ರೈತರುಒತ್ತಾಯಿಸಿದ್ದಾರೆ.

ಎಸ್‌.ಗೀತಾ

Advertisement

Udayavani is now on Telegram. Click here to join our channel and stay updated with the latest news.

Next