Advertisement
ಕಳೆದ ಕೆಲವು ದಿನಗಳಿಂದ ನಿರಂತರ ಸುರಿದ ಭಾರೀ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ಸ್ತಬ್ಧಗೊಂಡಿತ್ತು. ಗದ್ದೆಗಳಲ್ಲಿ ನೀರು ತುಂಬಿದ್ದು, ಕೃಷಿ ಪ್ರದೇಶ ಸಂಪೂರ್ಣ ಜಲಾವೃತವಾಗಿದ್ದರಿಂದ ರೈತರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಮಳೆ ಕಡಿಮೆಯಾಗಿದ್ದರಿಂದ ರೈತರು ಗದ್ದೆಗಳಲ್ಲಿ ಕೃಷಿ ಕಾರ್ಯ ಆರಂಭಿಸಿದ್ದಾರೆ.
Related Articles
Advertisement
ಇತೀ¤ಚಿನ ದಿನಗಳಲ್ಲಿ ಕೃಷಿ ಕೂಲಿಯಾಳುಗಳ ಕೊರತೆ ಬಹುವಾಗಿ ಕಾಡುತ್ತಿದ್ದು ಇದರಿಂದಾಗಿ ಕರಾವಳಿಯಲ್ಲಿ ಸಾಂಪ್ರದಾಯಿಕ ಭತ್ತದ ನಾಟಿ ಕಾರ್ಯ ಕಡಿಮೆಯಾಗುತ್ತಿದೆ. ಭತ್ತದ ನೇಜಿ ನಾಟಿ ಕೆಲಸವನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ ಕೊಡುವ ಮತ್ತು ಉಳಿಸಿಕೊಡಬೇಕು ಎಂಬ ಇರಾದೆಯೊಂದಿಗೆ ಮನೆಯ 7 ಎಕರೆ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಮಾದರಿಯ ನಾಟಿ ಕೆಲಸವನ್ನು ಪ್ರಗತಿಪರ ಕೃಷಿಕರಾದ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ ನಡೆಸುತ್ತಿ ದ್ದಾರೆ. ಅದಕ್ಕೆ ಬೇಕಾಗುವಷ್ಟು ಕೃಷಿ ಕೂಲಿಯಾಳುಗಳನ್ನು ಸ್ಥಳೀಯ ಕುತ್ಯಾರು – ಕೇಂಜ ಪರಿಸರ ಮಾತ್ರವಲ್ಲದೆ ಇನ್ನಾ, ಪಿಲಾರು ಪರಿಸರದಿಂದ ಪ್ರತ್ಯೇಕ ವಾಹನದ ಮೂಲಕ ಕರೆ ತರಲಾಗುತ್ತಿದೆ. ಅವರಿಗೆ ಉತ್ತಮ ಸಂಬಳದ ಜತೆಗೆ ಉಚಿತ ವಾಹನ, ಊಟೋಪಚಾರವನ್ನು ಒದಗಿಸಲಾಗುತ್ತದೆ.
ಸರಕಾರದಿಂದ ಬಿತ್ತನೆ ಬೀಜ ಖರೀದಿ ಕಡಿಮೆ
ಜಿಲ್ಲೆಯಲ್ಲಿ ಸರಕಾರದಿಂದ ನೀಡು ಬಿತ್ತನೆ ಬೀಜವನ್ನು ಪಡೆಯುವ ರೈತರ ಪ್ರಮಾಣ ತೀರ ಕಡಿಮೆಯಿದೆ. ಶೇ.5ರಿಂದ ಶೇ.10 ಪ್ರಮಾಣದಲ್ಲಿ ರೈತರು ಮಾತ್ರ ಸರಕಾರದಿಂದ ನೀಡುವ ಬಿತ್ತನೆ ಬೀಜ ಪಡೆಯುತ್ತಾರೆ. ಮಳೆಯಿಂದ ಬಿತ್ತನೆ ಬೀಜ ಹಾನಿಯಾಗಿದ್ದಲ್ಲಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಬಿತ್ತನೆ ಬೀಜ ಪಡೆಯಬಹುದು. ಈಗಾಗಲೇ ಬಿತ್ತನೆ ಬೀಜ ಪಡೆದಿರುವ ರೈತರಿಗೆ ನೀಡಲು ಸ್ವಲ್ಪ ಕಷ್ಟವಾಗುತ್ತದೆ. ಇದಕ್ಕೆ ಸರಕಾರದ ಪರಿಷ್ಕೃತ ಆದೇಶವೂ ಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಳೆ ಕಡಿಮೆಯಾಗಿದೆ: ಮಳೆ ಕಡಿಮೆಯಾಗಿರುವುದರಿಂದ ಕೃಷಿ ಚಟುವಟಿಕೆ ಜಿಲ್ಲಾದ್ಯಂತ ಬಿರುಸುಗೊಂಡಿದೆ. 38 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದೇವೆ. ಮಳೆಯಿಂದ ಆಗಿರುವ ಬೆಳೆ ಹಾನಿಯ ಸಮೀಕ್ಷೆಯೂ ನಡೆಯುತ್ತಿದೆ. –ಡಾ| ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಉಡುಪಿ