Advertisement

ಅಗ್ನಿವೀರರನ್ನು ಸೇನೆಯಲ್ಲಿ ಉಳಿಸಿಕೊಳ್ಳಲು ವ್ಯವಸ್ಥೆ ಜಾರಿಗೆ

01:07 AM Jan 12, 2023 | Team Udayavani |

ಹೊಸದಿಲ್ಲಿ: ಅಗ್ನಿವೀರರನ್ನು 4 ವರ್ಷಗಳ ಬಳಿಕವೂ ಸೇನೆಯಲ್ಲಿ ಉಳಿಸಿಕೊಳ್ಳುವ ಬಗ್ಗೆ ಭಾರತೀಯ ಸೇನೆಯು ಸಮಗ್ರ ಮೌಲ್ಯಮಾಪನ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

Advertisement

ಕಾರ್ಯಾಚರಣೆ ಕ್ಷಮತೆ, ಆಯುಧಗಳ ಬಳಕೆಯಲ್ಲಿ ಪರಿಣತಿ, ದೈಹಿಕ ಸಾಮರ್ಥ್ಯ ಹಾಗೂ ಇತರ ಸಮರ ಕೌಶಲಗಳ ಮೌಲ್ಯಮಾಪನ ಸೇರಿದಂತೆ ಕಾರ್ಯಕ್ಷಮತೆ ಆಧರಿಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಗ್ನಿವೀರರನ್ನು ಮುಂದಿನ 15 ವರ್ಷಗಳ ಕಾಲ ಸೇವೆಯಲ್ಲಿ ಮುಂದುವರಿಸಲು ಸೇನೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಪರೀಕ್ಷೆಯ ಪೈಕಿ ಶೇ.39ರಷ್ಟು ಕಾರ್ಯಾಚರಣೆ ಸಾಮರ್ಥ್ಯ, ಶೇ.36ರಷ್ಟು ದೈಹಿಕ ದೃಢತೆ, ಶೇ.25ರಷ್ಟು ಲಿಖೀತ ಮತ್ತು ಪ್ರಾಯೋಗಿಕ ಪರೀಕ್ಷೆ ಇರಲಿದೆ. ಅಗ್ನಿವೀರರಿಗೆ ಶೌರ್ಯ ಪ್ರಶಸ್ತಿ ದೊರಕಿದಲ್ಲಿ ಅಂಥವರನ್ನು ಮುಂದುವರಿಸಲು ಅನುಕೂಲವಾಗಲಿದೆ. ಅಶಿಸ್ತು ತೋರಿದರೆ ಋಣಾತ್ಮಕ ಅಂಕಗಳೂ ಇರಲಿವೆ. 2022ರ ಜುಲೈನಲ್ಲಿ ಜಾರಿಗೆ ಬಂದ ಅಗ್ನಿಪಥ ಯೋಜನೆಯ ಅನ್ವಯ 4 ವರ್ಷಗಳ ಬಳಿಕ ಶೇ.25ರಷ್ಟು ಮಂದಿಯನ್ನು ಸೇನೆಯಲ್ಲಿ ಮುಂದುವರಿಸಲಾಗುತ್ತದೆ. ದೇಶದ ವಿವಿಧ ಸೇನಾ ತರಬೇತಿ ಕೇಂದ್ರ ಗಳಲ್ಲಿ ಮೊದಲ ತಂಡದ ಅಗ್ನಿವೀರರಿಗೆ ಜ.1ರಿಂದ ತರಬೇತಿ ಪ್ರಾರಂಭವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next