Advertisement

Agniveer Fight: ಅಗ್ನಿವೀರ್‌ ಯೋಜನೆ ಯೋಧರ ಆರ್ಥಿಕ ಭದ್ರತೆಗೆ ಧಕ್ಕೆ: ರಾಹುಲ್‌ ಗಾಂಧಿ

10:01 PM Jul 29, 2024 | Team Udayavani |

ನವದೆಹಲಿ: ಕೇಂದ್ರ ಸರ್ಕಾರದ ಅಗ್ನಿವೀರ ಯೋಜನೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹಾಗೂ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ನಡುವೆ ಲೋಕಸಭೆಯಲ್ಲಿ ಸೋಮವಾರ ಭಾರಿ ಚರ್ಚೆ ನಡೆಸಿದ್ದಾರೆ.

Advertisement

ಈ ಯೋಜನೆ ಯೋಧರ ಆರ್ಥಿಕ ಭದ್ರತೆ ಧಕ್ಕೆ ಮಾಡುತ್ತಿದೆ ಎಂದು ರಾಹುಲ್‌ ಹೇಳಿದರೆ, ವಿಪಕ್ಷ ನಾಯಕ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಸಿಂಗ್‌ ಆರೋಪಿಸಿದ್ದಾರೆ. ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಮಾತನಾಡಿದ ರಾಹುಲ್‌, ಅಗ್ನಿವೀರ್‌ ಯೋಜನೆ ದೇಶದ ಯೋಧರ ಆರ್ಥಿಕ ಭದ್ರತೆ ಮತ್ತು ಗೌರವವನ್ನು ಹಾಳು ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಯುವ ವಿರೋಧಿ ಮತ್ತು ರೈತ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ. ದುರಂತದಲ್ಲಿ ಮೃತಪಟ್ಟ ಅಗ್ನಿವೀರರನ್ನು ಕೇಂದ್ರ ಸರ್ಕಾರ ಹುತಾತ್ಮ ಎಂದು ಪರಿಗಣಿಸುವುದಿಲ್ಲ. ಆತನ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಕರ್ತವ್ಯದ ಸಮಯದಲ್ಲಿ ಮೃತಪಡುವ ಅಗ್ನಿವೀರರಿಗೆ 1 ಕೋಟಿ ರೂ.ವರೆಗೆ ಪರಿಹಾರವನ್ನು ನೀಡಲಾಗುತ್ತಿದೆ. ರಾಹುಲ್‌ ಗಾಂಧಿ ಸದನಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next