Advertisement

ಹೊಸಬರ ‘ಅಘೋರ’ದರ್ಶನ: ಮಾರ್ಚ್‌ 4ಕ್ಕೆ ಬಿಡುಗಡೆ

02:57 PM Feb 16, 2022 | Team Udayavani |

ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೈನ್ಸ್‌-ಥ್ರಿಲ್ಲರ್‌ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತಿದೆ. ಇಂಥ ಮಾತುಗಳ ನಡುವೆಯೇ ಇಲ್ಲೊಂದು ಹೊಸಬರ ತಂಡ ಅಂಥದ್ದೇ ಒಂದು ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಹೊರಟಿದೆ. ಅಂದಹಾಗೆ, ಆ ಸಿನಿಮಾದ ಹೆಸರು “ಅಘೋರ’.

Advertisement

“ಮೋಕ್ಷ ಸಿನಿಮಾಸ್‌’ ಬ್ಯಾನರ್‌ನಲ್ಲಿ ಪುನೀತ್‌ ಗೌಡ ನಿರ್ಮಿಸಿರುವ ಈ ಚಿತ್ರದಲ್ಲಿ ಹಿರಿಯ ನಟ ಅವಿನಾಶ್‌ “ಅಘೋರಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಶೋಕ್‌, ಪುನೀತ್‌, ದ್ರವ್ಯಾ ಶೆಟ್ಟಿ, ರಚನಾ ದಶರಥ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ಕೊರಿಯೋಗ್ರಫ‌ರ್‌ ಆಗಿ ಗುರುತಿಸಿಕೊಂಡಿದ್ದ ಎನ್‌. ಎಸ್‌ ಪ್ರಮೋದ ರಾಜ್‌ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಎರಡು ವರ್ಷದ ಹಿಂದೆಯೇ ತಯಾರಾಗಿದ್ದ “ಅಘೋರ’ ಇಷ್ಟೊತ್ತಿಗಾಗಲೇ ತೆರೆ ಕಾಣಬೇಕಿತ್ತು. ಆದರೆ ಆ ನಂತರ ಎದುರಾದ ಕೊರೊನಾ ಆತಂಕ, “ಅಘೋರ’ದ ಬಿಡುಗಡೆಗೆ ಅನಿರ್ಧಿಷ್ಟವಧಿ ಬ್ರೇಕ್‌ ಹಾಕುವಂತೆ ಮಾಡಿತು. ಇದರ ನಡುವೆಯೇ ಸುಮಾರು 40ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫಿಲಂ ಫೆಸ್ಟಿವಲ್‌ಗ‌ಳಲ್ಲಿ ಭಾಗವಹಿಸಿ, ಪ್ರದರ್ಶನ ಕಂಡ “ಅಘೋರ’ ವಿವಿಧ ವಿಭಾಗಗಳಲ್ಲಿ ಹತ್ತಾರು ಪ್ರಶಸ್ತಿ, ಪುರಸ್ಕಾರಗಳನ್ನು ತನ್ನದಾಗಿಸಿಕೊಂಡಿದೆ. ಇದೀಗ ಕೋವಿಡ್‌ ಆತಂಕ ಕಡಿಮೆಯಾಗಿ ಚಿತ್ರರಂಗ ಸಹಜಸ್ಥಿತಿಯತ್ತ ಮರಳಿರುವುದರಿಂದ, “ಅಘೋರ’ ಚಿತ್ರವನ್ನು ಇದೇ ಮಾರ್ಚ್‌. 4ಕ್ಕೆ ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ.

ಇದೇ ವೇಳೆ “ಅಘೋರ’ದ ಬಗ್ಗೆ ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರದ ವಿಶೇಷತೆಗಳ ಬಗ್ಗೆ ಒಂದಷ್ಟು ಮಾತನಾಡಿತು. “ರೆಗ್ಯುಲರ್‌ ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾ ಮಾಡಿದ್ದೇವೆ. ಇಡೀ ಸಿನಿಮಾ ಐದು ಪಾತ್ರಗಳ ಸುತ್ತ ನಡೆಯುತ್ತದೆ. ಪಂಚ ಭೂತಗಳನ್ನು ಪ್ರತಿನಿಧಿಸುವಂತೆ ಪಾತ್ರಗಳಿವೆ. ಒಂದು ದಿನದಲ್ಲಿ ನಡೆಯುವ ಘಟನೆಯ ಸುತ್ತ ಇಡೀ ಸಿನಿಮಾದ ಕಥೆ ನಡೆಯುತ್ತದೆ. ಆಡಿಯನ್ಸ್‌ ಗೆ ಸೈಕಲ್‌ ಆಫ್ ಡೆತ್‌ ಅನುಭವ ಕೊಡುವಂಥ ಸಿನಿಮಾ ಇದು’ ಎಂಬುದು “ಅಘೋರ’ಕಥಾಹಂದರದ ಬಗ್ಗೆ ಚಿತ್ರತಂಡದ ಮಾತು.

“ಈಗಾಗಲೇ ಹಲವು ಪ್ರತಿಷ್ಟಿತ ಫಿಲಂ ಫೆಸ್ಟಿವಲ್‌ಗ‌ಳಲ್ಲಿ ಸಿನಿಮಾ ಪ್ರದರ್ಶನವಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಅದೇ ರೀತಿ ಥಿಯೇಟರ್‌ ನಲ್ಲೂ “ಅಘೋರ’ ಆಡಿಯನ್ಸ್‌ಗೆ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ’ ಎನ್ನುವ ವಿಶ್ವಾಸದ ಮಾತುಗಳು ನಟ ನಿರ್ಮಾಪಕ ಪುನೀತ್‌ ಮತ್ತು ನಿರ್ದೇಶಕ ಎನ್‌. ಎಸ್‌ ಪ್ರಮೋದ ರಾಜ್‌ ಅವರದ್ದು.

Advertisement

“ಅಘೋರ’ ಚಿತ್ರಕ್ಕೆ ಶರತ್‌ ಕುಮಾರ್‌ ಜಿ. ಛಾಯಾಗ್ರಹಣ, ವೆಂಕಟೇಶ್‌ ಸಂಕಲನವಿದೆ. ವಿ. ನಾಗೇಂದ್ರ ಪ್ರಸಾದ್‌ ಸಂಗೀತ ಸಂಯೋಜನೆ, ಮುರಳೀಧರನ್‌ ಹಾಗೂ ಪ್ರವೀಣ್‌ ಪೌಲ್‌ ಹಿನ್ನೆಲೆ ಸಂಗೀತವಿದೆ

Advertisement

Udayavani is now on Telegram. Click here to join our channel and stay updated with the latest news.

Next