Advertisement

ಅಗ್ರಿಗೋಲ್ಡ್‌ ವಂಚನೆ ಪ್ರಕರಣ: ಹಣ ಮರಳಿಸಲು ಗ್ರಾಹಕರ ಮೊರೆ

10:55 AM Apr 12, 2018 | Harsha Rao |

ಮಂಗಳೂರು: ಕೇಂದ್ರ ಹಾಗೂ ರಾಜ್ಯ ಸರಕಾರವು ಶೀಘ್ರ ಅಗ್ರಿಗೋಲ್ಡ್‌ ಏಜೆಂಟರಿಗೆ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಿ ಎಲ್ಲ ಸದಸ್ಯರಿಗೆ ಅವರ ಹಣ ವಾಪಸ್‌ ಸಿಗುವಂತೆ ಮಾಡಬೇಕು ಎಂದು ಅಗ್ರಿಗೋಲ್ಡ್‌ ಗ್ರಾಹಕರ ಮತ್ತು ಏಜೆಂಟರ ಕಲ್ಯಾಣ ಸಂಘ ಒತ್ತಾಯಿಸಿದೆ.

Advertisement

ಆಂಧ್ರ ಮೂಲದ ಅಗ್ರಿಗೋಲ್ಡ್‌ ಸಂಸ್ಥೆಯು ತನ್ನ ಗ್ರಾಹಕರಿಗೆ ಅಂದಾಜು 7 ಸಾವಿರ ಕೋ. ರೂ. ಹಿಂದಿರುಗಿಸಲು ಬಾಕಿ ಉಳಿಸಿದೆ. ಈ ಬಗ್ಗೆ ಗ್ರಾಹಕರು ಮತ್ತು ಏಜೆಂಟರು ಹಲವು ಬಾರಿ ಹೋರಾಟ ನಡೆಸಿದರೂ ಸಿಗಬೇಕಾದ ಹಣ ಕೈ ಸೇರಿಲ್ಲ. ಈಗ ಹೈದರಾಬಾದ್‌ ಹೈಕೋರ್ಟ್‌ನ ಆದೇಶದಂತೆ ಅಗ್ರಿಗೋಲ್ಡ್‌ನ ಆಸ್ತಿಯನ್ನು ಮಾರಾಟ ಮಾಡಿ ಪ್ರತಿ ಸದಸ್ಯನಿಗೆ ಹಣ ಮರಳಿಸಬೇಕೆಂದು ತಿಳಿಸಲಾಗಿದೆ. ಆದರೆ ಈ ಆದೇಶವನ್ನು ಪಾಲಿಸದ ಕಂಪೆನಿಯು ವೃಥಾ ಕಾಲ ಹರಣ ಮಾಡುತ್ತಿದೆ. ಅಲ್ಲದೆ ಡಾ| ಸುಭಾಷ್‌ಚಂದ್ರ ಫೌಂಡೇಶನ್‌ ಸಂಸ್ಥೆಯು ಅಗ್ರಿಗೋಲ್ಡ್‌ ಸಮೂಹ ಸಂಸ್ಥೆಗಳಿಂದ ಅವರ ಆಸ್ತಿಪಾಸ್ತಿ, ಬಾಕಿ ಕೊಡಬೇಕಾದ ಏಜೆಂಟರ ಕಮಿಷನ್‌ ಮುಂತಾದ ವಿವರಗಳನ್ನು ಕೊಡಲು ಕೇಳಿದೆ. ಆದರೆ ಅದಕ್ಕೂ ಕಂಪೆನಿಯಿಂದ ಪ್ರತಿಕ್ರಿಯೆ ಇಲ್ಲ ಎಂದು ಸಂಘವು ಆರೋಪಿಸಿದೆ. 

ಶೀಘ್ರ ಗ್ರಾಹಕರ ಹಣ ಶೀಘ್ರ ಹಿಂದಿರುಗಿಸಲು ಸರಕಾರಗಳು ಸೂಚಿಸಬೇಕು. ಅಗ್ರಿಗೋಲ್ಡ್‌ನ ಎಲ್ಲ ನಿರ್ದೇಶಕರನ್ನು ಬಂಧಿಸಿ ಸೂಕ್ತ ತನಿಖೆಗೊಳಪಡಿಸಬೇಕು. ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಸಂಘವು ಆಗ್ರಹಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next