Advertisement
ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯ ಅಂಗವಾಗಿ ಬಿಜೆಪಿ ಆರಂಭಿಸಿರುವ ಗಾಂಧಿ ಸಂಕಲ್ಪ ಯಾತ್ರೆಗೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಜತ್ತೂರು ಗ್ರಾಮದ ಕಾಂಚನದಲ್ಲಿ ಅ. 22ರಂದು ಸಭಾಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮನಂತಹವರು ದೇಶಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದ್ದರು. ಆ ಬಳಿಕ ಸುಭಾಶ್ಚಂದ್ರ ಬೋಸ್, ವೀರ ಸಾವರ್ಕರ್ ಕ್ರಾಂತಿಕಾರಿ ಹೋರಾಟದತ್ತ ಹೆಜ್ಜೆ ಇಟ್ಟರೆ, ಮಹಾತ್ಮ ಗಾಂಧೀಜಿ ಅಹಿಂಸಾತ್ಮಕ ಹೋರಾಟದತ್ತ ಹೆಜ್ಜೆ ಇಟ್ಟರು. ಹಿಂದೂ – ಮುಸಲ್ಮಾನರನ್ನು ಎತ್ತಿಕಟ್ಟಿ ಅವರ ಭಾವನೆಗಳನ್ನು ಕೆರಳಿಸುವ ಕೆಲಸ ಬ್ರಿಟಿಷರಿಂದ ನಡೆದಿದ್ದರೆ, ರಾಮ ನಾಮದ ಮೂಲಕ ಹಿಂದೂ- ಮುಸಲ್ಮಾನರನ್ನು ಮಹಾತ್ಮಾ ಗಾಂಧೀಜಿ ಸಮಾನತೆಯೆಡೆಗೆ ಕೊಂಡೊಯ್ದು ಪ್ರತಿಯೋರ್ವರೂ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿದರು ಎಂದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಮಹಾತ್ಮಾ ಗಾಂಧೀಜಿ ರಾಷ್ಟ್ರಪಿತ. ಅವರ ಬದುಕನ್ನು ಕೇವಲ ಗುಣಗಾನಕ್ಕೆ ಮಾತ್ರ ಸೀಮಿತಗೊಳಿಸಬಾರದು. ಅವರ ಪರಿಕಲ್ಪನೆ ಮನೆ- ಮನೆಯನ್ನು ಮುಟ್ಟಬೇಕು. ಪ್ರತಿಯೋರ್ವರು ಅವರ ತತ್ತಾ$Ìದರ್ಶಗಳನ್ನು ಪಾಲಿಸುವಂತಾಗಬೇಕು. ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್‌ಅವರಿಗೆ ಭಾರತರತ್ನ ನೀಡಿದ್ದು ವಾಜಪೇಯಿ ಪ್ರಧಾನಿಯಾಗಿದ್ದಾಗ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆ ಸ್ಥಾಪಿಸಿದ್ದು ಮೋದಿ ಆಡಳಿತಾವಧಿಯಲ್ಲಿ. ಅಂದು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಅಂಡಮಾನ್‌ನಲ್ಲಿರುವ ಜೈಲಿಗೆ ಭೇಟಿ ಕೊಟ್ಟರೆ ಅಲ್ಲಿ ಸಾವರ್ಕರ್ ಅವರನ್ನು ಕೂಡಿ ಹಾಕಿದ್ದ ಕೊಠಡಿಯೊಳಗೆ ಇಂದೂ ಅವರ ಭಾವಚಿತ್ರ ಇಟ್ಟು, ಅದಕ್ಕೆ ದೀಪ ಉರಿಸಲಾಗುತ್ತಿದೆ ಎಂದರು. ಕ್ಷೇತ್ರಾದ್ಯಂತ ಸಂಚರಿಸಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಭಾಸ್ಕರ್ ನಾಯಕ್ ಪೊರೋಳಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಷ್ಟ್ರಧ್ವಜವನ್ನು ಶಾಸಕ ಸಂಜೀವ ಮಠಂದೂರು ಅವರಿಗೆ ಹಸ್ತಾಂತರಿಸುವ ಮೂಲಕ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ದರು. ಯಾತ್ರೆಗೆ ಚಾಲನೆ ನೀಡಿದ ನೆನಪಿನಲ್ಲಿ ಎರಡು ತೆಂಗಿನ ಸಸಿಗಳನ್ನು ನೆಡ ಲಾಯಿತು. ವಾಸುದೇವ ರೆಂಜಾಳ ಗಾಂಧಿ ವೇಷ ಧಾರಿಯಾಗಿ ಯಾತ್ರೆಯೊಂದಿಗೆ ಸಾಗಿದರು. ಅಲ್ಲಲ್ಲಿ ಉಪಾಹಾರ, ಮಜ್ಜಿಗೆ ವಿತರಿಸಲಾಯಿತು. ಯಾತ್ರೆ ಈ ದಿನ 34ನೇ ನೆಕ್ಕಿಲಾಡಿಯ ಸುಭಾಶ್‌ನಗರದಲ್ಲಿ ಸಮಾಪನಗೊಂಡಿತು. ಯಾತ್ರೆ ಪುತ್ತೂರು ವಿಧಾನಸಭಾ ಕ್ಷೇತ್ರದಾದ್ಯಂತ 13 ದಿನಗಳ ಕಾಲ ಸಂಚರಿಸಲಿದೆ.
Related Articles
Advertisement
ಬಿಜೆಪಿ ಮುಖಂಡರಾದ ಸುರೇಶ್ ಅತ್ರಮಜಲು, ತೇಜಸ್ವಿನಿ, ಲಕ್ಷ್ಮಣ್ ಗೌಡ ಬೆಳ್ಳಿಪ್ಪಾಡಿ, ಸುಜಾತಾ ಕೃಷ್ಣ, ಪ್ರಶಾಂತ್, ರಮೇಶ್ ಭಂಡಾರಿ, ಗಣೇಶ್ ಕಿಂಡೋವು, ಮಾಧವ ಗೌಡ ಒರುಂಬೋಡಿ, ಆನಂದ, ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ, ಬೂಡಿಯಾರ್ ರಾಧಾಕೃಷ್ಣ ರೈ, ಆರ್.ಸಿ. ನಾರಾಯಣ, ವಿಶ್ವೇಶ್ವರ ಭಟ್ ಬಂಗಾರಡ್ಕ, ವಿಜಯಲಕ್ಷ್ಮೀ, ಹಮ್ಮಬ್ಬ ಶೌಕತ್ ಆಲಿ, ಸದಾನಂದ ಶೆಟ್ಟಿ ಮುದ್ದ, ಪ್ರಮುಖರಾದ ಉಮೇಶ ಶೆಣೈ, ಸದಾನಂದ ಕಾರ್ ಕ್ಲಬ್, ದೀಪಕ್ ಪೈ, ರಾಧಾಕೃಷ್ಣ ಕುವೆಚ್ಚಾರು, ಜಗದೀಶ ಶೆಟ್ಟಿ, ಕಿಶೋರ್ ಉಪಸ್ಥಿತರಿದ್ದರು. ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಕೇಶವ ಗೌಡ ಬಜತ್ತೂರು ಸ್ವಾಗತಿಸಿ, ತಾ.ಪಂ. ಸದಸ್ಯ ಮುಕುಂದ ಬಜತ್ತೂರು ವಂದಿಸಿದರು. ಪುತ್ತೂರು ಯುವಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಕಾರ್ಯಕ್ರಮ ನಿರೂಪಿಸಿದರು.