Advertisement

ಕಾನೂನು, ಸುವ್ಯವಸ್ಥೆಯಲ್ಲಿ ವಿಫ‌ಲ ? ತ್ರಿಪುರ ಸರಕಾರದಿಂದ ಡಿಜಿಪಿಗೆ ದೀರ್ಘ‌ ರಜೆ

08:34 AM Jun 04, 2019 | Team Udayavani |

ಅಗರ್ತಲಾ : ರಾಜ್ಯದ ಪೊಲೀಸ್‌ ಮಹಾ ನಿರ್ದೇಶಕ ಅಖೀಲ್‌ ಕುಮಾರ್‌ ಶುಕ್ಲಾ ಅವರನ್ನು ತ್ರಿಪುರ ಸರಕಾರ ದೀರ್ಘ‌ ರಜೆಯ ಮೇಲೆ ಕಳುಹಿಸಿದೆ. ಶುಕ್ಲಾ ಅವರ ಪದಭಾರವನ್ನು ಸರಕಾರ ಎಡಿಜಿಪಿ (ಕಾನೂನು ಮತು ಸುವ್ಯವಸ್ಥೆ) ರಾಜೀವ್‌ ಸಿಂಗ್‌ ಅವರಿಗೆ ವಹಿಸಿಕೊಟ್ಟಿದೆ ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

Advertisement

ರಾಜ್ಯ ಸರಕಾರದ ಸಾಮಾನ್ಯ ಆಡಳಿತೆಯು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಶುಕ್ಲಾ ಅವರಿಗೆ ಜೂನ್‌ 1ರಿಂದ ಆಗಸ್ಟ್‌ 9 ವರೆಗಿನ 70 ದಿನಗಳಿಗೆ ಗಳಿಕೆ ರಜೆಯನ್ನು ಮಂಜೂರು ಮಾಡಿದೆ. ಈ ರಜೆಯಲ್ಲಿ ಅವರು ಊರು ಬಿಟ್ಟು ಹೊರಹೋಗಬಹುದಾಗಿದೆ.

ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯಲ್ಲಿ ಶುಕ್ಲಾ ಅವರ ಕರ್ತವ್ಯ ನಿರ್ವಹಣೆ ಬಗ್ಗೆ ಸರಕಾರಕ್ಕೆ ತೃಪ್ತಿ ಇರಲಿಲ್ಲ; ಅದಕ್ಕಾಗಿ ಅವರನ್ನು ಬಲವಂತದ ರಜೆಯಲ್ಲಿ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯದ ಅನಾಮಿಕ ಅಧಿಕಾರಿಯೋರ್ವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next