ಮಾಗಡಿ: ಆಗಲಕೋಟೆ ಗ್ರಾಪಂ ಶತಾಯಗತ ಜೆಡಿಎಸ್ ಬೆಂಬಲಿಗರ ತೆಕ್ಕೆ ತೆಗೆದು ಕೊಳ್ಳಲು ಕಾರ್ಯಕರ್ತರೆಲ್ಲರೂ ತೀರ್ಮಾನಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಎ.ಮಂಜುನಾಥ್ ಅವರ ಅವಧಿಯಲ್ಲಿ ಈ ಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಮುಂದೆಯೂ ಅಭಿವೃದ್ಧಿಗಾಗಿಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಆಗಲ ಕೋಟೆ-1 ರಿಂದ ಬಿಸಿಎಂ ಎ ನಿಂದ ನಾಗರಾಜ, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ನಾಗರತ್ನಮ್ಮ,ಆಗಲಕೋಟೆ-2 ರಲ್ಲಿ ಸಾಮಾನ್ಯ ಕ್ಷೇತ್ರದಿಂದ ಮಧು, ಪರಿಶಿಷ್ಟ ಜಾತಿ ಮೀಸಲು ಲಲಿತಾ ರಾಮಯ್ಯ ಸ್ಪರ್ಧಿಸಿದ್ದಾರೆ ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿ ಸುವಂತೆ ಮನವಿ ಮಾಡಿ ಕೋರುತ್ತೇನೆ ಎಂದರು.
ನಾಯಿ, ನರಿ ದೇವರಿಗೆ ಸಮ: ಎಚ್ ಡಿಕೆ ಅವರ ಅಲೆಯಲ್ಲಿಯೇ ಹಿಂದೆ ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ ಸಹ ನಾಲ್ಕು ಬಾರಿ ಗೆದ್ದಿರುವುದು. ಇವರು ಈಗ ಜೆಡಿಎಸ್‌ನಲ್ಲಿ ಗೆದ್ದಿರುವವರೆಲ್ಲರೂ ನಾಯಿ ನರಿಗಳು ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಾಯಿ, ನರಿ ದೇವರಿಗೆ ಸಮ. ಏಕೆಂದರೆ ಒಕ್ಕಲಿಗ ಸಮುದಾಯದ ಕುಲದೇವರು ನಾಯಿಯನ್ನು ಭೈರವ ಎಂದು ಪೂಜಿಸುವುದು. ಪ್ರಾಣಿಗಳ ಬಗ್ಗೆ ತಾತ್ಸಾರದ ಮಾತುಗಳನ್ನು ಆಡುವುದನ್ನು ಬಿಡಬೇಕು ಎಂದು ನುಡಿದರು.
ನನ್ನ ರಾಜಕೀಯ ಗುರು ಎಚ್.ಎಂ.ರೇವಣ್ಣ: ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಅವರ ಮೇಲೆ ನನಗೆ ಗೌರವಿದೆ. ಆದರೂ ದ್ವೇಷವೋ, ಪ್ರೀತಿಯೋ ಗೊತ್ತಿಲ್ಲ. ನನ್ನನ್ನು ತ್ಯೇಜೋವಧೆ ಸಲ್ಲದು. ನನ್ನ ರಾಜಕೀಯ ಗುರುಗಳು ಮಾಜಿ ಸಚಿವ ಎಚ್. ಎಂ.ರೇವಣ್ಣ. ವೈಯಕ್ತಿವಾಗಿ ನನ್ನ ಸಮಸ್ಯೆಗಳನ್ನು ನಾನೇ ಬಗೆಹರಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ನನಗೆ ರಾಜಕೀಯವಾಗಿ ಹಿನ್ನೆಡೆಯಾಗುತ್ತಿದೆ. ಆದ್ದರಿಂದ ನಾನು ಮಾಗಡಿ ರಾಜಕೀಯದಿಂದದೂರ ಉಳಿಯುತ್ತೇನೆ. ಅಧಿಕಾರ ಇಲ್ಲದಿದ್ದರೂಶಾಸಕ ಎ.ಮಂಜುನಾಥ್ ಅವರೊಂದಿಗೆ ಇದ್ದು, ಜನಸೇವೆಯಲ್ಲಿ ನಿರತರಾಗಿರುತ್ತೇನೆ ಎಂದು ಹೇಳಿದರು.
ಇದೇ ವೇಳೆ ಕೆ.ಕೃಷ್ಣಮೂರ್ತಿ ನೇತೃತ್ವದಲ್ಲಿ ನಾಗರತ್ನಮ್ಮ ಲಲಿತಾ ರಾಮಯ್ಯ, ನಾಗರಾಜು,ಮಧು ನಾಮಪತ್ರ ಸಲ್ಲಿಸಿದರು. ತಾಲೂಕು ಜೆಡಿಎಸ್ ಯುವ ಅಧ್ಯಕ್ಷ ವಿಜಯಕುಮಾರ್ ಹಾಗೂ ಜೆಡಿಎಸ್ ಬೆಂಬಲಿತರು ಇದ್ದರು.