Advertisement

ಮಾಧ್ಯಮ ನಿಯಂತ್ರಣ ವಿರುದ್ಧ ಸಿಡಿದ ವಾಟಾಳ್‌

12:06 PM Mar 31, 2017 | Team Udayavani |

ಬೆಂಗಳೂರು: ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಂಟಿ ಸದನ ಸಮಿತಿ ರಚನೆ ಮಾಡಿರುವ ಕ್ರಮವನ್ನು ವಿರೋಧಿಸಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಗುರುವಾರ ಪ್ರತಿಭಟನೆ ನಡೆಸಿದರು.

Advertisement

ವಿಧಾನಸೌಧದಲ್ಲಿರುವ ಸ್ಪೀಕರ್‌ ಕೆ.ಬಿ.ಕೋಳಿವಾಡ ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶಿಸಿದ ಅವರು, ಮಾಧ್ಯಮಗಳನ್ನು ನಿಯಂತ್ರಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಕೂಡಲೆ ಆದೇಶವನ್ನು ಹಿಂಪಡೆಯಬೇಕು ಎಂದು  ಒತ್ತಾಯಿಸಿದರು.

“ಮಾಧ್ಯಮಗಳ ವಿರುದ್ಧ ಸದನ ಸಮಿತಿ ರಚನೆ ಸರಿಯಲ್ಲ. ದೃಶ್ಯಮಾಧ್ಯಮಗಳು ಬಂದ ನಂತರ ಹಲವಾರು ಬದಲಾವಣೆಗಳು ಆಗಿವೆ. ಸದನದಲ್ಲಿ ಸದಸ್ಯರು ಹಾಜರಾಗದಿರುವುದನ್ನು ಮಾಧ್ಯಮಗಳು ತೋರಿಸುವುದು ತಪ್ಪೇ,” ಎಂದು ಪ್ರಶ್ನಿಸಿದರು.  

ಇದೇ ಸಂದರ್ಭದಲ್ಲಿ ಸ್ಪೀಕರ್‌ ಕೆ.ಬಿ.ಕೋಳಿವಾಡ್‌ ಅವರಿಗೆ ಸದನ ಸಮಿತಿ ರಚನೆ ನಿರ್ಣಯ ವಾಪಸ್‌ ಪಡೆಯುವಂತೆ ಒತ್ತಾಯಿಸಿ ಮನವಿ ನೀಡಿದ ವಾಟಾಳ್‌ ನಾಗರಾಜ್‌, ಸ್ಪೀಕರ್‌ ಜತೆ  ವಾಗ್ವಾದಕ್ಕೆ ಇಳಿದರು. ನಂತರ ಪೊಲೀಸರು ವಾಟಾಳ್‌ ನಾಗರಾಜ್‌ ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next