Advertisement
ಕಳೆದ ಮೇ 19ರಂದು ಅಸನಿ ಚಂಡಮಾರುತ ಮಳೆಯಿಂದಾಗಿ ಸಾಕಷ್ಟು ತೇವಂಶವಾಗಿತ್ತು. ನಂತರ ಬಿತ್ತನೆಗೆ ಪೂರಕ ತೇವಾಂಶ ಗಮನಿಸಿ ಬಹುತೇಕ ರೈತರು ಹೆಸರು, ಎಳ್ಳು, ಸೂರ್ಯಕಾಂತಿ ಬಿತ್ತನೆ ಮಾಡಿದ್ದರು. ಈ ನಡುವೆ ಹವಮಾನ ತಜ್ಞರು, ಕೃಷಿ ಇಲಾಖೆಯ ಮೂಲಕ ಮುಂಗಾರು ಮಳೆ ಪ್ರವೇಶಕ್ಕೆ ಕಾಲವಾಕಾಶವಿದೆ. ಇದು ಮುಂಗಾರು ಪೂರ್ವದ ಮಳೆಯಾಗಿದ್ದು, ರೈತರು ಬಿತ್ತನೆಗೆ ಅವಸರ ಮಾಡಬೇಡಿ. ಬಿತ್ತನೆ ಮಾಡಿದರೆ ನಂತರದ ತಾಪಮಾನಕ್ಕೆ ಅಗಿ ಸಾಯುವ ಸಾಧ್ಯತೆಗಳ ಸಲಹೆ ನೀಡಿದ್ದರು.
Related Articles
Advertisement
ಅಡವಿಯಲ್ಲಿ ಗುರ್ಜಿ ಪೂಜೆ: ಬಿತ್ತನೆ ಬಳಿಕ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಅಡವಿಬಾವಿ ಗ್ರಾಮದಲ್ಲಿ ಕಳೆದ ಮೇ 29ರಂದು ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಗುರ್ಜಿ ಪೂಜೆ ಆಚರಿಸಿದ್ದರು. ಇದಾದ ಮೂರನೇ ದಿನ ಮೇ 31 ತಡರಾತ್ರಿ ಚದುರಿದಂತೆ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಗುರ್ಜಿಯ ಫಲಶ್ರುತಿ ಸಂಭ್ರಮದಲ್ಲಿ ಸದರಿ ಆಚರಣೆಗೆ ದೇವಸ್ಥಾನ ಆವರಣದಲ್ಲಿ ಅನ್ನ ಸಂತರ್ಪಣೆ ಮೂಲಕ ತೆರೆ ಗುರ್ಜಿ ಪೂಜೆಗೆ ತೆರೆ ಎಳೆದರು. ತಾಲೂಕಿನ ಅಡವಿ ಗ್ರಾಮದ ರೈತ ಮಲ್ಲಿಕಾರ್ಜುನ ದೋಟಿಹಾಳ ಪ್ರತಿಕ್ರಿಯಿಸಿ ನಮ್ಮೂರಲ್ಲಿ ಬಹುತೇಕ ರೈತರು ಹೆಸರು ಬಿತ್ತನೆ ಮಾಡಿದ್ದರು. ಆದರೆ ಕಳೆದ ಎರಡ್ಮೂರು ದಿನಗಳಲ್ಲಿ ಮಳೆ ಆಗದೇ ಇದ್ದರೆ ಹೆಸರು ಬೆಳೆ ಕೈ ಕೊಡುವ ಸಾಧ್ಯತೆಗಳಿದ್ದವು. ನಮ್ಮೂರಲ್ಲಿ ಮಳೆರಾಯನಿಗಾಗಿ ಗ್ರಾಮಸ್ಥರು ಗುರ್ಜಿ ಅಚರಣೆ ಮಾಡಿದ್ದವು. ರೈತರ ಪ್ರಾರ್ಥನೆಗೆ ಸಾಧಾರಣ ಮಳೆಯಾಗಿದೆ. ಹೀಗಾಗಿ ರೈತರು ಖುಷಿಯಾಗಿ ಜೂನ್ 1ರಂದು ಗುರ್ಜಿಯ ಸಂಪನ್ನ ಕಾರ್ಯಕ್ರಮದ ಮೊದಲೇ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ತಿಳಿಸಿದರು.