Advertisement

ಮತ್ತೆ ಕಡಲಿಗಿಳಿದ ಮೀನುಗಾರಿಕಾ ಬೋಟ್‌ಗಳು; ಕರರಹಿತ ಡೀಸೆಲ್‌ ಲಭ್ಯ

03:13 PM Feb 24, 2023 | Team Udayavani |

ಮಲ್ಪೆ: ಕರಾವಳಿ ಮೀನುಗಾರಿಕೆ ಸರಕಾರ ಹೆಚ್ಚುವರಿಯಾಗಿ 25 ಸಾವಿರ ಕೆ.ಎಲ್‌. ಲೀ. ಡಿಸೇಲ್‌ ವಿತರಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಕೊರತೆಯಿಂದ ಸ್ಥಗಿತಗೊಂಡಿದ್ದ ಮೀನುಗಾರಿಕೆ ಮತ್ತೆ ಆರಂಭಗೊಂಡಂತಾಯಿತು.

Advertisement

ಸರಕಾರ ವಾರ್ಷಿಕವಾಗಿ ಮೀನುಗಾರಿಕೆಗೆ ನೀಡುತ್ತಿರುವ ಡಿಸೇಲ್‌ ಕೋಟ ಮುಗಿದಿರುವ ಹಿನ್ನೆಲೆಯಲ್ಲಿ ಮೀನು ಗಾರಿಕಾ ಬೋಟ್‌ಗಳು ಕಳೆದ ಒಂದು ವಾರದಿಂದ ಸಮುದ್ರಕ್ಕೆ ತೆರಳಲಾಗದೆ ದಡಸೇರಿತ್ತು. ಇದೀಗ ಸರಕಾರ ಹೆಚ್ಚುವರಿಯಾಗಿ ಡೀಸೆಲ್‌ ಬಿಡುಗಡೆ ಮಾಡಿದ್ದು ಬುಧವಾರ ಸಂಜೆ ಬಹುತೇಕ ಮೀನುಗಾರಿಕೆ ಸಹಕಾರಿ ಸಂಘಗಳ ಡಿಸೇಲ್‌ ಬಂಕ್‌ಗಳಿಗೆ ಪೂರೈಕೆಯಾಗಿದೆ.

ಸರಕಾರ ಮೀನುಗಾರರಿಗೆ ವಾರ್ಷಿಕವಾಗಿ ಎಪ್ರಿಲ್‌ನಿಂದ -ಮಾರ್ಚ್‌ವರೆಗೆ 1.50 ಲಕ್ಷ ಕೆ. ಎಲ್‌. ತೆರಿಗೆ ರಹಿತ ಡೀಸೆಲ್‌ ಪೂರೈಕೆ ಮಾಡುತ್ತಿತ್ತು. ವಾರ್ಷಿಕ ಕೋಟ ಮುಗಿದ ಕಾರಣ ಫೆ. 14ರಿಂದ ಯಾವುದೇ ಮೀನುಗಾರಿಕೆ ಬಂಕ್‌ಗಳಲ್ಲಿ ಡೀಸೆಲ್ ಸಿಗುತ್ತಿರಲಿಲ್ಲ.

ಮೀನುಗಾರ ಸಂಘದ ನೇತೃತ್ವದಲ್ಲಿ ಡಾ| ಜಿ. ಶಂಕರ್‌ ಮತ್ತು ಶಾಸಕ ರಘುಪತಿ ಭಟ್‌ ನೇತೃತ್ವದಲ್ಲಿ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೆವು. ಜನಪ್ರತಿನಿಧಿಗಳ ಪ್ರಯತ್ನ ಫಲ ನೀಡಿದೆ ಎಂದು ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿಯ ಅಧ್ಯಕ್ಷ ಜಯ ಸಿ. ಕೋಟ್ಯಾನ್‌, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.

ಶೇ. 40ರಷ್ಟು ಬೋಟ್‌ಗಳು ದಡದಲ್ಲಿತ್ತು
ನಿಗದಿತ ಪ್ರಮಾಣದ ಡೀಸೆಲ್‌ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಮತ್ಸ್ಯ ಸಂಪತ್ತು ಸಿಗುವ ತಿಂಗಳಲ್ಲೇ ಬೋಟ್‌ಗಳು ಡಿಸೇಲ್‌ ಕೊರತೆಯನ್ನು ಎದುರಿಸುವಂತಾಗಿದೆ. ಬುಧವಾರದವರೆಗೆ ಶೇ. 40ರಷ್ಟು ಬೋಟ್‌ಗಳು ದಡದಲ್ಲಿ ಉಳಿದಿತ್ತು. ಸರಕಾರ 25ಸಾವಿರ ಕೆ. ಎಲ್‌. ಹೆಚ್ಚುವರಿ ಡೀಸೆಲ್‌ ವಿತರಣೆಗೆ ಆದೇಶ ನೀಡಿದ್ದರಿಂದ ಪ್ರಥಮ ಹಂತವಾಗಿ ಬುಧವಾರ ಉಡುಪಿ ಜಿಲ್ಲೆಗೆ 2 ಸಾವಿರ ಕೆ. ಎಲ್‌. ಪೂರೈಕೆಯಾಗಿದೆ ಎನ್ನಲಾಗಿದೆ. ಡಿಸೇಲ್‌ ತುಂಬಿಸಿ
ಕಡಲಿಗಿಳಿಯಲು ಬೋಟ್‌ ಮಾಲಕರು ಪೈಪೋಟಿಗಿಳಿದ್ದಾರೆ. ದಡ ಸೇರಿದ ಶೇ.50ರಷ್ಟು ಬೋಟ್‌ಗಳು ಬುಧವಾರ ರಾತ್ರಿಯೇ ಮೀನುಗಾರಿಕೆಗೆ ತೆರಳಿದರೆ ಇನ್ನುಳಿದವುಗಳು ಗುರುವಾರ ತೆರಳಿದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next