ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಮತ್ತೆ 22 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಕ್ಯೆ 360ಕ್ಕೆ ಏರಿಕೆಯಾಗಿದೆ.
ಮತ್ತೂಂದೆಡೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ 4 ರೋಗಿಗಳು ಆಸ್ಪತ್ರೆಯಿಂದ ಬಿಡುಡೆ ಆಗಿದ್ದು 290 ಸೋಂಕಿತರು ಈವರೆಗೆ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಉಳಿದಂತೆ ಕೋವಿಡ್ ಆಸ್ಪತ್ರೆಯಲ್ಲಿ ಇದೀಗ 63 ರೋಗಿಗಳು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಮವಾರದವರೆಗೆ ವಿಜಯಪುರ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ವಿವರ ನೀಡಿರುವ ಜಿಲ್ಲಾ ಧಿಕಾರಿ ವೈ.ಎಸ್. ಪಾಟೀಲ, ಜಿಲ್ಲೆಯ ಸೋಂಕಿತರಲ್ಲಿ ಈವರೆಗೆ 7 ಜನರು ಮೃತಪಟ್ಟಿದ್ದಾರೆಂದು ಮಾಹಿತಿ ನೀಡಿದ್ದಾರೆ. ಹೊಸ ಸೋಂಕಿತರಲ್ಲಿ 39 ವರ್ಷದ ಮಹಿಳೆ ಪಿ13443, 32 ವರ್ಷದ ವ್ಯಕ್ತಿ ಪಿ13444, 21 ವರ್ಷದ ಯುವಕ ಪಿ13445, 32 ವರ್ಷದ ವ್ಯಕ್ತಿ ಪಿ13446, 21 ವರ್ಷದ ಯುವಕ ಪಿ13447, 32 ವರ್ಷದ ವ್ಯಕ್ತಿ ಪಿ13448, 19 ವರ್ಷದ ಯುವಕ ಪಿ13449, 50 ವರ್ಷದ ವ್ಯಕ್ತಿ ಪಿ13450, 18 ವರ್ಷದ ಯುವತಿ ಪಿ13451, 45 ವರ್ಷದ ಮಹಿಳೆ ಪಿ13452, 39 ವರ್ಷದ ವ್ಯಕ್ತಿ ಪಿ13453, 55 ವರ್ಷದ ವೃದ್ಧೆ ಪಿ13454, 35 ವರ್ಷದ ಮಹಿಳೆ ಪಿ13455, 15 ವರ್ಷದ ಯುವತಿ ಪಿ13456, 90 ವರ್ಷದ ವೃದ್ಧೆ ಪಿ13457, 6 ವರ್ಷದ ಬಾಲಕಿ ಪಿ13458, 24 ವರ್ಷದ ಮಹಿಳೆ ಪಿ13459, 58 ವರ್ಷದ ವೃದ್ಧ ಪಿ13460, 17 ವರ್ಷದ ಯುವತಿ ಪಿ13461, 30 ವರ್ಷದ ವ್ಯಕ್ತಿ ಪಿ13462, 27 ವರ್ಷದ ಯುವಕ ಪಿ13463, 31 ವರ್ಷದ ಮಹಿಳೆ ಪಿ13464 ಎಂದು ಎಂದು ಗುರುತಿಸಿದ್ದಾಗಿ ವಿವರಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 27,153 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಿದ್ದು, 360 ಜನರಿಗೆ ಸೋಂಕು ಇರಿವುದು ದೃಢಪಟ್ಟಿದೆ. 26,754 ಜನರ ನೆಗೆಟಿವ್ ವರದಿ ಬಂದಿದೆ. ಇನ್ನೂ 63 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ನಿರೀಕ್ಷೆಯಲ್ಲಿದ್ದೇವೆ. ಜಿಲ್ಲೆಯಲ್ಲಿ 34,385 ಜನರ ಮೇಲೆ ನಿಗಾ ಇರಿಸಿದ್ದು ಇದರಲ್ಲಿ 27,379 ಜನರು 28 ದಿನಗಳ ಐಸೋಲೇಷನ್ ಅವಧಿ ಮುಗಿಸಿದ್ದು, 6,709 ಜನರು 28 ದಿನಗಳ ನಿಗಾದಲ್ಲಿದ್ದಾರೆ.