Advertisement

ಕಾಲ್ನಡಿಗೆಯಿಂದ ರಾಯಘಡಕ್ಕೆ ಸೇರುವ ಸಾಹಸ

06:34 PM May 31, 2020 | Naveen |

ಅಫಜಲಪುರ: ಮಹಾರಾಷ್ಟ್ರ ರಾಜ್ಯದ ರಾಯಘಡ ಜಿಲ್ಲೆಯ ಕಾರ್ಮಿಕರು ಕರ್ನಾಟಕದ ರಾಯಚೂರಿನ ಮಾನ್ವಿ ಪಟ್ಟಣದಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ 57 ಜನ ಮರಳಿ ತಮ್ಮ ಊರುಗಳಿಗೆ ತೆರಳಲು ವಾಹನ ಸೌಕರ್ಯವಿಲ್ಲದೆ ಕಳೆದ ಒಂಭತ್ತು ದಿನಗಳಿಂದ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದಾರೆ.

Advertisement

ಸಣ್ಣ ಮಕ್ಕಳನ್ನು ಹೊತ್ತುಕೊಂಡು ನಿತ್ಯ ಮೈಲಿಗಟ್ಟಲೇ ನಡೆಯುವ ಇವರ ಕಷ್ಟ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ದಾರಿಯುದ್ದಕ್ಕೂ ಸುಡು ಬಿಸಿಲನ್ನು ಲೆಕ್ಕಿಸದೇ ನಡೆದು ಸುಸ್ತಾಗಿ ನೆರಳು ಕಂಡಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಇವರಿಗೆ ಅನ್ನ-ನೀರಿಗೂ ಗತಿ ಇಲ್ಲದಂತಾಗಿದೆ. ಆದರೂ ಇನ್ನೂ ನೂರಾರು ಕಿಲೋ ಮೀಟರ್‌ ನಡೆದು ತಮ್ಮೂರಿಗೆ ಸೇರಲು ತವಕಿಸುತ್ತಿದ್ದಾರೆ. ಸದ್ಯ ಇವರೆಲ್ಲ ಬಳೂರ್ಗಿ ಗ್ರಾಮದ ಗಡಿ ಚೆಕ್‌ಪೋಸ್ಟ್‌ ಬಳಿ ಇದ್ದಾರೆ.

ಸಮಾಜ ಸೇವಕರು, ದಾನಿಗಳು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಇವರಿಗೆ ಅನ್ನ, ನೀರಿನ ವ್ಯವಸ್ಥೆ ಮಾಡಿ, ವಾಹನ ಸೌಕರ್ಯ ಕಲ್ಪಿಸಿಕೊಟ್ಟರೆ ನಿರಾತಂಕವಾಗಿ ಇವರೆಲ್ಲ ತಮ್ಮೂರಿಗೆ ತಲುಪಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next