Advertisement
ನಾಲ್ಕು ಕೋಟಿ ವೆಚ್ಚದ ಕ್ರೀಡಾಂಗಣ: 2015-16ರಲ್ಲಿ ಯುವಜನ ಕ್ರೀಡಾ ಇಲಾಖೆ ವತಿಯಿಂದ ನಾಲ್ಕು ಕೋಟಿ ರೂ. ವೆಚ್ಚದ ತಾಲೂಕುಮಟ್ಟದ ಕ್ರಿಡಾಂಗಣ ಕಾಮಗಾರಿಗೆ ಆಗಿನ ಶಾಸಕ ಮಾಲೀಕಯ್ಯ ಗುತ್ತೇದಾರ ಅಡಿಗಲ್ಲು ನೆರವೇರಿಸಿದ್ದರು.
ಕನಸು ನಾಲ್ಕೈದು ವರ್ಷಗಳಿಂದ ನನಸಾಗುತ್ತಿಲ್ಲ. 2015-16ರಲ್ಲಿ ಕೆಕೆಆರ್‌ಡಿಬಿ ವತಿಯಿಂದ 3.98 ಕೋಟಿ ರೂ. ವೆಚ್ಚದ ತಾಲೂಕು ಕ್ರೀಡಾಂಗಣಕ್ಕೆ ಚಾಲನೆ ನಿಡಲಾಗಿತ್ತು. ಆಗಿನಿಂದ ಈಗಿನ ವರೆಗೆ ತಾಲೂಕು ಕ್ರೀಡಾಂಗಣ ಕಾಮಗಾರಿ ಮುಗಿದಿಲ್ಲ. ಅನೇಕ ಸಮಸ್ಯೆಗಳನ್ನು ಎದುರಿಸಿ ಈಗಲೂ ಕ್ರೀಡಾಂಗಣ ಕಾಮಗಾರಿ ಕುಂಟುತ್ತಲೆ ಸಾಗಿದೆ. ಇದನ್ನೂ ಓದಿ:ಜನನ ಪ್ರಮಾಣ ಭಾರೀ ಇಳಿಕೆ : ಚೀನಾದಲ್ಲಿ ಇನ್ನು ಮೂರು ಮಕ್ಕಳಿಗೆ ಅವಕಾಶ
Related Articles
Advertisement
ನಾನು ಭೂಸೇನಾ ನಿಗಮದ ಪ್ರಭಾರಿ ಅಧಿಕಾರ ವಹಿಸಿ ಕೆಲ ದಿನಗಳಾಗಿವೆ. ಕ್ರೀಡಾಂಗಣ ಕಾಮಗಾರಿ ದಾಖಲಾತಿ ಪರಿಶೀಲಿಸಿ, ಶೀಘ್ರವೇ ಮುತುವರ್ಜಿ ವಹಿಸಿ ಕಾಮಗಾರಿ ಮುಕ್ತಾಯ ಮಾಡುವತ್ತ ಕ್ರಮ ಕೈಗೊಳ್ಳುತ್ತೇನೆ-ರಾಜಶೇಖರ, ಲ್ಯಾಂಡ್ ಆರ್ಮಿ, ಪ್ರಭಾರಿ ಅಧಿಕಾರಿ ಕ್ರೀಡಾಂಗಣಕ್ಕೆ ದಾರಿ ಸಮಸ್ಯೆ ಇತ್ತು. ಅದೀಗ ಬಗೆಹರಿದಿದೆ. ಬಹುತೇಕ ಕಾಮಗಾರಿ ಮುಗಿದಿದೆ. ಕ್ರೀಡಾಂಗಣಕ್ಕೆ ಹೋಗುವ ದಾರಿ ಮತ್ತು
ಇತರೆ ವ್ಯವಸ್ಥೆಗಾಗಿ ಎರಡು ಕೊಟಿ ರೂ. ಅನುದಾನ ಬಂದಿದೆ. ಇದನ್ನು ಕ್ರೀಡಾಂಗಣ ಆರಂಭಿಸಲಾಗುತ್ತದೆ.
-ಎಂ.ವೈ. ಪಾಟೀಲ, ಶಾಸಕ 2015ರಿಂದ ಕ್ರೀಡಾಂಗಣ ಕಾಮಗಾರಿ ಆರಂಭವಾದರೂ ಇಲ್ಲಿಯ ವರೆಗೆ ಮುಗಿದಿಲ್ಲ. ಪ್ರತಿ ಬಾರಿ ಸ್ವಾತಂತ್ರ್ಯದಿನದಂದು ಶಾಸಕರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ಮಾಡುತ್ತೇವೆ ಎಂದು ಹುಸಿ ಭರವಸೆ ನೀಡಿ ಜಾರಿಕೊಳ್ಳುತ್ತಿದ್ದಾರೆ. ಇದು ತಾಲೂಕಿನ ಕ್ರೀಡಾಪಟುಗಳಿಗೆ ಮಾಡುತ್ತಿರುವ ಮೋಸವಾಗಿದೆ.
-ಸದ್ದಾಂ ನಾಕೇದಾರ, ಸಾಮಾಜಿಕ ಕಾರ್ಯಕರ್ತ -ಮಲ್ಲಿಕಾರ್ಜುನ ಹಿರೇಮಠ