Advertisement
ಮೋಹನ್ ಭಾಗವತ್ ಅವರು ಟ್ವಿಟರ್ ಖಾತೆಯಲ್ಲಿ 20.76 ಲಕ್ಷ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಶನಿವಾರ (ಜೂನ್ 05) ಬೆಳಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ ಅನ್ನು ತೆಗೆದಿದ್ದು, ಆಕ್ಷೇಪ ವ್ಯಕ್ತಪಡಿಸಿದ ನಂತರ ಬ್ಲೂ ಬ್ಯಾಡ್ಜ್ ಅನ್ನು ಸಕ್ರಿಯಗೊಳಿಸಿತ್ತು.
ನಾಯ್ಡು ಅವರ
ವೈಯಕ್ತಿಕ ಖಾತೆ 1.3 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿತ್ತು. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆ ಕಳೆದ ಆರು ತಿಂಗಳಿನಿಂದ ನಿಷ್ಕ್ರಿಯವಾಗಿದ್ದು, ಬ್ಲೂ ಬ್ಯಾಡ್ಜ್ ಮಾರ್ಕ್ ಅನ್ನು ಟ್ವಿಟರ್ ತೆಗೆದು ಹಾಕಿರುವುದಾಗಿ ಉಪರಾಷ್ಟ್ರಪತಿ ಕಚೇರಿಯ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿತ್ತು.