Advertisement

ಯುಗಾದಿ ಬಳಿಕ ರಾಜ್ಯದಲ್ಲಿ CM ಬದಲಾವಣೆ; ಉತ್ತರ ಕರ್ನಾಟಕದವರೇ ಮುಂದಿನ ಮುಖ್ಯಮಂತ್ರಿ:ಯತ್ನಾಳ್

05:36 PM Jan 30, 2021 | Team Udayavani |

ವಿಜಯಪುರ : ಮುಂಬರುವ ಯುಗಾದಿ ಬಳಿಕ ಹೊಸ ವರ್ಷದಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದು, ಉತ್ತರ ಕರ್ನಾಟಕ ಭಾಗದವರೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಮ್ಮೆ ಸಿ.ಎಂ ಬದಲಾವಣೆ ಕುರಿತು ಭವಿಷ್ಯ ನುಡಿದಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಂದಿನ ಯುಗಾದಿ ಹಬ್ಬದ ಬಳಿಕ  ರಾಜ್ಯದಲ್ಲಿ ಹೊಸ ಮುಖ್ಯಮಂತ್ರಿ ಬರುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ನಾನು ಮಂತ್ರಿ ಸ್ಥಾನ ಬೇಕು ಎಂದು ದಾವಣಗೆರೆಯಲ್ಲಿ ಮಾತನಾಡಿಲ್ಲ, ಬಿಜೆಪಿ ಬಿಟ್ಟು ಎಲ್ಲೂ ಹೋಗಿಲ್ಲ. ಮುಂದಿನ ಮಂತ್ರಿ ಸ್ಥಾನದಲ್ಲಿ ನಮ್ಮವರೇ ಬರುತ್ತಾರೆ, ಕಾಯಿರಿ.. ಎಂದು ಮತ್ತೊಮ್ಮೆ ಮಾರ್ಮಿಕವಾಗಿಯೇ ಉತ್ತರಿಸಿದರು.

ಇದನ್ನೂ ಓದಿ:ಮಹಾರಾಷ್ಟ್ರ ಬಸ್‌ಗೆ ಮಸಿ ಬಳಿದ ಸೇನೆ

ರಾಮ ಮಂದಿರ ನಿರ್ಮಾಣ ನಿಧಿ ಸಂಗ್ರಹ ವಾಹನದ ಮೇಲೆ ಕಲ್ಲು ಎಸೆಯುವ ಮೂಲಕ ಬೆಂಗಳೂರು ಮತೀಯ ಗಲಭೆ ಸೃಷ್ಟಿಸುವ ಹಾಟ್‍ಸ್ಪಾಟ್ ಆಗುತ್ತಿದೆ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷ ಒದಗಿಸಿದೆ. ರಾಜ್ಯದಲ್ಲಿ ಕೋಮು ಗಲಭೆಯನ್ನು ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ಕೋಮು ಗಲಭೆ ಸೃಷ್ಟಿಸುವವರ ಜೊತೆ ಮುಖ್ಯಮಂತ್ರಿ, ಗೃಹ ಸಚಿವರು ಸಲುಗೆಯ ಸ್ನೇಹ ಹೊಂದಿದರೆ ಇಂಥ ಸ್ಥಿತಿ ರಾಜ್ಯಕ್ಕೆ ತಪ್ಪಿದ್ದಲ್ಲ ಎಂದರು,  ಇದಲ್ಲದೇ ಈ ಸಂದರ್ಭದಲ್ಲಿ ಪ್ರಸ್ತುತ ರಾಜ್ಯದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿವೆ ಎಂದು ವಿಪಕ್ಷಗಳ ವಿರುದ್ಧವೂ ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next