ನವ ದೆಹಲಿ : ಟ್ವೀಟರ್ ಖಾತೆಯ ಬ್ಲಾಕ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಿಗೆ, ನ್ಯಾಶನಲ್ ಕಮಿಷನ್ ಫಾರ್ ಪ್ರೊಟೆಕ್ಶನ್ ಆಫ್ ಚೈಲ್ಡ್ ರೈಟ್ಸ್ (ಎನ್ ಸಿ ಪಿ ಸಿ ಆರ್) ಫೇಸ್ ಬುಕ್ ಸಂಸ್ಥೆ ರಾಹುಲ್ ಗಾಂಧಿ ಅವರ ಇನ್ ಸ್ಟಾಗ್ರಾಂ ಖಾತೆಯನ್ನು ಬ್ಲಾಕ್ ಮಾಡುವಂತೆ ಒತ್ತಾಯಿಸಿದೆ.
ಆಗಸ್ಟ್ 4 ರಂದು ಎನ್ ಸಿ ಪಿ ಸಿ ಆರ್, ದೆಹಲಿಯ ದಲಿತ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿ ಅವರೊಂದಿಗಿನ ಫೋಟೋವನ್ನು ತನ್ನ ಟ್ವೀಟರ್ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಸಂತ್ರಸ್ತೆಯ ಗುರುತನ್ನು ಬಹಿರಂಗ ಪಡಿಸಿದ್ದಾರೆಂದು ಆರೋಪಿಸಿ ಟ್ವೀಟರ್ ಇಂಡಿಯಾ ಸಂಸ್ಥೆಗೆ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆಯನ್ನು ಬ್ಲಾಕ್ ಮಾಡುವಂತೆ ಕೋರಿ ಪತ್ರ ಬರೆದಿತ್ತು.
ಇದನ್ನೂ ಓದಿ : ಅಫ್ಘಾನ್ ನಲ್ಲಿ ಭಾರತೀಯರ ಅಪಹರಣ ಸಾಧ್ಯತೆ? ತಾಲಿಬಾನ್ ಉಗ್ರರಿಂದ ಬಲವಂತದ ವಿವಾಹ!
ಈಗ ಎನ್ ಸಿ ಪಿ ಸಿ ಆರ್, ಫೇಸ್ ಬುಕ್ ಇಂಡಿಯಾ ಗೆ ಪತ್ರ ಬರೆದಿದೆ, ರಾಹುಲ್ ಗಾಂಧಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸಂತ್ರಸ್ತೆಯ ಕುಟುಂಬದವರನ್ನು ಭೇಟಿ ಮಾಡಿರುವ ವಿಡೀಯೋವೊಂದನ್ನು ಹಂಚಿಕೊಂಡಿದ್ದಾರೆ. ಆವೀಡಿಯೋದಲ್ಲಿ ಸಂತ್ರಸ್ತೆಯ ತಂದೆ ಹಾಗೂ ತಾಯಿ ಮುಖ ಪರಿಚಯ ಆಗುವ ಹಾಗೆ ಇದೆ. ಈ ವೀಡಿಯೋದ ಮೂಲಕ ಸಂತ್ರಸ್ತೆ ಬಾಲಕಿಯ ಗುರುತನ್ನು ರಾಹುಲ್ ಗಾಂಧಿ ಬಹಿರಂಗ ಪಡಿಸಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ತನ್ನ ಪತ್ರದಲ್ಲಿ ಉಲ್ಲೇಖಿಸಿದೆ.
ಬಾಲ ನ್ಯಾಯ ಕಾಯ್ದೆ, 2015, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ, 2012, ಮತ್ತು ಭಾರತೀಯ ದಂಡ ಸಂಹಿತೆಯ ನಿಯಮಗಳ ಉಲ್ಲಂಘನೆಯ ಕುರಿತು ಗಾಂಧಿಯವರ ಇನ್‌ಸ್ಟಾಗ್ರಾಮ್ ಪ್ರೊಫೈಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎನ್ ಸಿ ಪಿ ಸಿ ಆರ್ ಫೇಸ್‌ಬುಕ್ ಇಂಡಿಯಾಗೆ ಪತ್ರದ ಮೂಲಕ ಸೂಚಿಸಿದೆ.
ಇದನ್ನೂ ಓದಿ : ಆಟೋ ರಿಕ್ಷಾ, ಟ್ರಕ್, ಬಸ್ ಚಾಲಕರು, ಸಿಬ್ಬಂದಿಗೆ ನೆರವಾಗುವ ಹೊಸ ಬಿಲ್ ಜಾರಿ: ಸಚಿವ ಹೆಬ್ಬಾರ್