Advertisement

ಹುರಿಯತ್‌ಗೆ ಬೆದರಿಕೆ ಹಾಕಿ ದೂರ ಸರಿದ ಹಿಜ್‌ಬುಲ್‌ ಕಮಾಂಡರ್‌ ಮೂಸಾ

05:16 PM May 13, 2017 | udayavani editorial |

ಜಮ್ಮು : “ಇಸ್ಲಾಂ ಗಾಗಿ ನಾವು ನಡೆಸುತ್ತಿರುವ ಹೋರಾಟದಲ್ಲಿ ನೀವು ತಲೆ ಹಾಕಿದರೆ ನಿಮ್ಮ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುತ್ತೇನೆ’ ಎಂದು ಹುರಿಯತ್‌ ನಾಯಕರಿಗೆ ಆಡಿಯೋ ಟೇಪ್‌ ಬೆದರಿಕೆ ಹಾಕಿದ ಒಂದು ದಿನದ ತರುವಾಯ ಹಿಜ್‌ಬುಲ್‌ ಮುಜಾಹಿದೀನ್‌ ಕಮಾಂಡರ್‌ ಝಾಕೀರ್‌ ಮೂಸಾ ಇಂದು ಶನಿವಾರ ಹೊಸ ವಿಡಿಯೋ ಬಿಡುಗಡೆ ಮಾಡಿ “ನಾನು ಹಿಜ್‌ಬುಲ್‌ ಸಂಘಟನೆಯಲ್ಲಿ ಇಲ್ಲ’ ಎಂದು ಸಾರಿದ್ದಾನೆ.

Advertisement

“ಹಿಜ್‌ಬುಲ್‌ ನನ್ನನ್ನು ಓರ್ವ ಸದಸ್ಯನೆಂದು ಪರಿಗಣಿಸದಿದ್ದರೆ ನಾನು ಅದನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಬಯಸುತ್ತೇನೆ’ ಎಂಬುದಾಗಿ ಮೂಸಾ ಹೇಳಿದ್ದಾನೆ. ಆದರೆ ತನ್ನ ಈ ಹಿಂದಿನ ಆಡಿಯೋ ಟೇಪ್‌ ಸಂದೇಶದಲ್ಲಿ “ಹುರಿಯತ್‌ ನಾಯಕರ ತಲೆ ಕಡಿದು ಲಾಲ್‌ ಚೌಕದಲ್ಲಿ ನೇತು ಹಾಕುವ’ ತನ್ನ ನಿಲುವಿಗೆ ತಾನು ಬದ್ಧನಾಗಿದ್ದೇನೆ ಎಂದು ಮತ್ತೂಮ್ಮೆ ಗುಡುಗಿದ್ದಾನೆ.

ನಿನ್ನೆ ಮೂಸಾ ಬಿಡುಗಡೆ ಮಾಡಿದ್ದ ಆಡಿಯೋ ಟೇಪ್‌ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆದ ಬಳಿಕ ಹಿಜ್‌ಬುಲ್‌ ಮುಜಾಹಿದೀನ್‌ ವಕ್ತಾರ ಸಲೀಂ ಹಶ್‌ಮೀ ಹೇಳಿಕೆಯೊಂದು ಬಿಡುಗಡೆ ಮಾಡಿ, “ಮೂಸಾ ಹೇಳಿಕೆಗೂ ಹಿಜ್‌ಬುಲ್‌ ಸಂಘಟನೆಗೂ ಯಾವುದೇ ಸಂಬಂಧವಿಲ್ಲ; ಮೇಲಾಗಿ ಆತನ ಹೇಳಿಕೆ ನಮಗೆ ಸ್ವೀಕಾರಾರ್ಹವಾದುದಲ್ಲ; ಅದು ಕೇವಲ ಆತನ ವೈಯಕ್ತಿಕ ಅಭಿಪ್ರಾಯ; ಆ ರೀತಿಯ ಯಾವುದೇ ಹೇಳಿಕೆ ಅಥವಾ ಕ್ರಮದಿಂದ ಉಂಟಾಗುವ ಗೊಂದಲವು ನಮ್ಮ ಹೋರಾಟಕ್ಕೆ ಮರಣಗಂಟೆಯಾದೀತು’ ಎಂದು ಹೇಳಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next