Advertisement

War: ಇಸ್ರೇಲ್‌-ಹಮಾಸ್‌ ಯುದ್ಧದ ಬಳಿಕ ಹಡಗುಗಳೇ ಟಾರ್ಗೆಟ್‌!

12:53 AM Dec 24, 2023 | Team Udayavani |

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ಯುದ್ಧ ಆರಂಭವಾದ ಬಳಿಕ ಸಮುದ್ರಗಳಲ್ಲಿ ಸಂಚರಿಸುವ ವಿವಿಧ ದೇಶಗಳ ಹಡಗುಗಳ ಮೇಲೆ ಸತತ ದಾಳಿ ನಡೆಯುತ್ತಲೇ ಇದೆ. ಅದಕ್ಕೆ ಹೊಸ ಸೇರ್ಪಡೆಯೇ ಶನಿವಾರ ಮಂಗಳೂರಿಗೆ ಬರುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ನಡೆದ ಡ್ರೋನ್‌ ಅಟ್ಯಾಕ್‌. ನೌಕೆಗಳನ್ನು ಗುರಿಯಾಗಿಸಿಕೊಂಡು ಇತ್ತೀಚೆಗೆ ನಡೆದ ದಾಳಿಗಳ ಮಾಹಿತಿ ಇಲ್ಲಿದೆ.

Advertisement

ಕೆಂಪು ಸಮುದ್ರದ ಬಾಬ್‌-ಅಲ್‌-ಮಂದೇಬ್‌ ಸಂಧಿಯಲ್ಲಿ ಎರಡು ಸರಕು ಹಡಗುಗಳ ಮೇಲೆ ಯೆಮನ್‌ನ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿ ಲೈಬೀರಿಯಾದ ಧ್ವಜವಿದ್ದ ಎಸ್‌ಎಸ್‌ಸಿ ಪ್ಲಾಟಿನಂ-3 ಹಡಗಿನ ಮೇಲೆ ಡ್ರೋನ್‌ ಅಟ್ಯಾಕ್‌ ಮಂಗಳೂರಿನಿಂದ ವೈಮಾನಿಕ ಇಂಧನ ಹೊತ್ತು ನೆದರ್ಲೆಂಡ್ಸ್‌ಗೆ ಹೊರಟಿದ್ದ ಹಡಗಿನ ಮೇಲೆ ಡಿ.11ರಂದು ಕಡಲ್ಗಳ್ಳರಿಂದ ಕ್ಷಿಪಣಿ ದಾಳಿ ಡಿ.16ರಂದು ಕೆಂಪು ಸಮುದ್ರದಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡು ಹೌತಿ ಬಂಡುಕೋರರು ಉಡಾಯಿಸಿದ್ದ 14 ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ, ಯುಕೆ ನೌಕಾಪಡೆಗಳು. ಹಿಂದೂ ಮಹಾಸಾಗರದಲ್ಲಿ ಭಾರತದ ಪಶ್ಚಿಮ ಕರಾವಳಿಯಾಚೆ  ಮಂಗಳೂರಿಗೆ ತೈಲ ಹೊತ್ತು ತರುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ಡ್ರೋನ್‌ ದಾಳಿ.

ಹಮಾಸ್‌ಗೆ ಬೆಂಬಲ ಸೂಚಿಸಿ ದಾಳಿ?

ಗಾಜಾ ಮೇಲೆ ಇಸ್ರೇಲ್‌ ದಾಳಿಯನ್ನು ಖಂಡಿಸುತ್ತಿರುವ ಇರಾನ್‌ನ ಚಿತಾವಣೆ ಮೇಲೆ ಹೌತಿ ಬಂಡುಕೋರರು ಇಂಥ ಕೃತ್ಯ ನಡೆಸುತ್ತಿದ್ದಾರೆ ಎನ್ನುವುದು ಅಮೆರಿಕದ ವಾದ. “ಹಮಾಸ್‌ ಸಂಘ ಟನೆಯನ್ನು ನಾವು ಬೆಂಬಲಿಸುತ್ತೇವೆ’ ಎಂದು ಈಗಾಗಲೇ ಬಂಡುಕೋರರು ಘೋಷಿಸಿದ್ದಾರೆ. ಇಸ್ರೇಲ್‌ ಜತೆಗೆ ಯಾವ ದೇಶ ರಾಜತಾಂತ್ರಿಕ ಮತ್ತು ಮಿತ್ರತ್ವ ಹೊಂದಿದೆಯೋ ಆ ದೇಶದ ಹಡಗುಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ, ಡ್ರೋನ್‌ಗಳ ಮೂಲಕ ದಾಳಿ ನಡೆಸುತ್ತೇವೆ ಎಂದೂ ಬೆದರಿಕೆ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next