Advertisement

ಚುನಾವಣೆ ಬಳಿಕ ಸರ್ಕಾರ ಪತನ ಖಚಿತ: ರಾಮುಲು

11:38 AM Apr 19, 2019 | Sriram |

ಹುಬ್ಬಳ್ಳಿ: ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಉಳಿಯಲ್ಲ ಎಂಬ ಟ್ರೆಂಡ್‌ ಹೆಚ್ಚ ತೊಡಗಿದೆ. ಮಿತ್ರಪಕ್ಷಗಳ ಕಚ್ಚಾಟ ಹಾಗೂ ಶಾಸಕರ ಅಸಮಾಧಾನದಿಂದ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನ ಲಕ್ಷಣಗಳು ಶುರುವಾಗಿವೆ. ನಾವಾಗಿಯೇ ಸರ್ಕಾರ ಬೀಳಿಸಲು ಯತ್ನಿಸುತ್ತಿಲ್ಲ. ಅದು ತಾನಾಗಿಯೇ ಬೀಳುತ್ತದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಒಂದಾಗಿರಬಹುದು. ಕೆಳಹಂತದಲ್ಲಿ ಕಾರ್ಯಕರ್ತರು ಒಂದಾಗಿಲ್ಲ. ಮಿತ್ರ ಪಕ್ಷಗಳಲ್ಲಿ ಗೊಂದಲ ಇದ್ದು, ಬಿಜೆಪಿ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

ಸಿದ್ದರಾಮಯ್ಯ ಅವರಿಗೆ ಮೋದಿ ವಿರುದಟಛಿ ಟೀಕಿಸುವುದು ಬಾಯಿ ಚಪಲದಂತಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲೇ ಮೂಲೆಗುಂಪಾಗಿದ್ದಾರೆ.ಬಳ್ಳಾರಿ ಕ್ಷೇತ್ರದಲ್ಲಿ ಟಿಕೆಟ್‌ ನೀಡುವುದು ಸೇರಿದಂತೆ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಿಲ್ಲ. ಜನ-ಪಕ್ಷ ಬೇಡ ಎನ್ನುವವರೆಗೂ ನಾನು ರಾಜಕೀಯದಲ್ಲಿ ಮುಂದುವರಿಯುತ್ತೇನೆ.

ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಮತದಾನಕ್ಕೆ ಬಳ್ಳಾರಿಯಲ್ಲಿ ಅವಕಾಶ ಇಲ್ಲ. ಗದಗನಲ್ಲಿ ಮತದಾನ ಮಾಡುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಗದಗನಲ್ಲಿನ ನನ್ನ ಮನೆಯನ್ನೇ ಬಾಡಿಗೆ ಪಡೆದಿದ್ದು, ಅಲ್ಲಿನ ವಿಳಾಸ ನೀಡಿದ್ದಾರೆ. ಜಿಲ್ಲಾ ಚುನಾವಣಾ ಅಧಿಕಾರಿ ಈ ಮತದಾನ ಅವಕಾಶ ನೀಡುವ ತೀರ್ಮಾನ ತಿಳಿಸಿಲ್ಲ. ಅನುಮತಿ ಸಿಕ್ಕರೆ ಗದಗನಲ್ಲಿ ಮತದಾನ ಮಾಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next