Advertisement

Kollywood Actor: ದಳಪತಿ ವಿಜಯ್‌ ಬಳಿಕ ರಾಜಕೀಯದತ್ತ ಮತ್ತೊಬ್ಬ ಖ್ಯಾತ ಕಾಲಿವುಡ್‌ ನಟ?

04:05 PM May 14, 2024 | Team Udayavani |

ಚೆನ್ನೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ದಳಪತಿ ವಿಜಯ್‌ ತನ್ನ ಸಿನಿ ಕೆರಿಯರ್‌ ನಲ್ಲಿ ಟಾಪ್‌ ಲೆವೆಲ್‌ ನಲ್ಲಿರುವಾಗಲೇ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಜಯ್‌ ʼಗೋಟ್‌ʼ ಸಿನಿಮಾದ ಬಳಿಕ ಮತ್ತೊಂದು ಸಿನಿಮಾ ಮಾಡಲಿದ್ದು,  ಆ ಬಳಿಕ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.

Advertisement

ದಳಪತಿ ವಿಜಯ್‌ ಮೊದಲಿನಿಂದಲೂ ಜನರಿಗೆ ಸಹಾಯ ಮಾಡಬೇಕೆನ್ನುವ ಕಾರಣದಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಇದೀಗ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದು, ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ದಳಪತಿ ವಿಜಯ್‌ ರಾಜಕೀಯರಂಗದ ಬಗ್ಗೆ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಮತ್ತೊಬ್ಬ ಖ್ಯಾತ ನಟ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾತುಗಳು ಕಾಲಿವುಡ್‌ ವಲಯದಲ್ಲಿ ಹರಿದಾಡುತ್ತಿದೆ.

ಕಾಲಿವುಡ್‌ ನ ʼಸಿಂಗಂʼ, ನಟ ಸೂರ್ಯ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ.

ಸೂರ್ಯ 2006 ರಿಂದ ತಮ್ಮ ʼಅಗರಂ ಫೌಂಡೇಶನ್ʼ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಈ ಫೌಂಡೇಶನ್ ಅಗತ್ಯವಿರುವ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ.

Advertisement

ಇದೀಗ ಬಂದಿರುವ ಲೇಟೆಸ್ಟ್‌ ವರದಿಯ ಪ್ರಕಾರ, ಸೂರ್ಯ ತನ್ನ ಫೌಂಡೇಶನ್‌ ನ್ನು ತಮಿಳುನಾಡು ರಾಜ್ಯದಾದ್ಯಂತ ವಿಸ್ತರಿಸಲಿದ್ದಾರೆ. ಇದಕ್ಕಾಗಿ 60 ಜಿಲ್ಲೆಗಳಲ್ಲಿ ವಾರ್ಡ್ ವಾರು ಆಡಳಿತಗಾರರನ್ನು ನೇಮಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಸಂಬಂಧ ವಿಲ್ಲುಪುರಂ, ಕಡಲೂರು, ಪುದುಚೇರಿ, ಮೈಲಾಡುತುರೈ, ಕಾರೈಕಲ್ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಸಮಾಲೋಚನಾ ಸಭೆಗಳು ನಡೆದಿವೆ ಎಂದು ವರದಿಯಾಗಿದೆ.

ಸೂರ್ಯ ಅವರ ʼಅಖಿಲ ಭಾರತ ಸೂರ್ಯ ನಲ್ಲಪಾಣಿ ಇಯಕ್ಕಂʼ ಸಂಘ ತಿರುವಾರೂರಿನಲ್ಲಿ ಖಾಸಗಿ ಸಭೆ ನಡೆಸಿದೆ. ಇದೇ ಕಾರಣದಿಂದಾಗಿ ಸೂರ್ಯ ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನುವ ಚರ್ಚೆಗಳು ಶುರುವಾಗಿದೆ.

ಮುಂದಿನ ದಿನಗಳಲ್ಲಿ ಸೂರ್ಯ ಅವರ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ಪ್ರಸ್ತುತ ಸೂರ್ಯ ʼಕಂಗುವʼ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇದಲ್ಲದೆ ಅವರು ಅಕ್ಷಯ್‌ ಕುಮಾರ್‌ ಅವರ ʼಸರ್ಫಿರಾʼ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದು ಸೂರ್ಯ ಅವರ ʼಸೂರರೈ ಪೊಟ್ರುʼ ಸಿನಿಮಾದ ರಿಮೇಕ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next