Advertisement

ಇಪಿಎಫ್ ಹೂಡಿಕೆ ಮೇಲೆ ತೆರಿಗೆ: ಎ. 1ರಿಂದ ಜಾರಿ

12:36 AM Mar 18, 2022 | Team Udayavani |

ಹೊಸದಿಲ್ಲಿ: ನೌಕರರ ಭವಿಷ್ಯ ನಿಧಿಯ (ಇಪಿಎಫ್) ಬಡ್ಡಿ ದರವನ್ನು ಶೇ. 8.5ರಿಂದ ಶೇ. 8.1ಕ್ಕೆ ಇಳಿಸುವ ಮೂಲಕ ನೌಕರ ವರ್ಗಕ್ಕೆ ಆಘಾತ ಕೊಟ್ಟಿದ್ದ ಕೇಂದ್ರ ಸರಕಾರ ಈಗ ಮತ್ತೂಂದು ಶಾಕ್‌ ನೀಡಲು ಮುಂದಾಗಿದೆ.

Advertisement

ಯಾವುದೇ ನೌಕ ರನ ಇಪಿಎಫ್ನಲ್ಲಿನ ಹೂಡಿಕೆ ವಾರ್ಷಿಕ ಎರಡೂವರೆ ಲಕ್ಷ ರೂ. ದಾಟಿದರೆ ಆ ಹಣದ ಮೇಲೆ ತೆರಿಗೆ ಬೀಳಲಿದೆ. ತೆರಿಗೆಯ ಪ್ರಮಾಣವನ್ನು ಸರಕಾರ ತಿಳಿಸಿಲ್ಲ. ಆದರೆ ಹೊಸ ನಿಯಮ ಎ. 1ರಿಂದ ಜಾರಿಯಾಗುವ ಸಾಧ್ಯತೆಗಳಿವೆ.

ಇನ್ನು ಸರಕಾರಿ ನೌಕರರ ಇಪಿಎಫ್ ಹೂಡಿಕೆ ಮೇಲೆ ರಿಯಾಯಿತಿ ನೀಡಲಾಗಿದ್ದು, ಅವರ ಹೂಡಿಕೆಯು ವಾರ್ಷಿಕ 5 ಲಕ್ಷ ರೂ. ದಾಟಿದರೆ ಮಾತ್ರ ಆ ಮೊತ್ತದ ಮೇಲೆ ತೆರಿಗೆ ಹಾಕಲಾಗುತ್ತದೆ. ತೆರಿಗೆ ವಿಧಿಸಲೆಂದೇ ಇಪಿಎಫ್ ಖಾತೆಗಳನ್ನು ತೆರಿಗೆಗೆ ಅರ್ಹ ಹಾಗೂ ತೆರಿಗೆಗೆ ಅನರ್ಹ ಖಾತೆಗಳೆಂದು ವರ್ಗೀಕರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next