Advertisement

ಆರೇಳು ತಿಂಗಳ ಬಳಿಕ ಶಾಲೆಗಳತ್ತ ಮಕ್ಕಳ ಹೆಜ್ಜೆ; ಫ್ರಾನ್ಸ್‌, ರಷ್ಯಾ, ಬೆಲ್ಜಿಯಂ‌ನ‌ಲ್ಲಿ ಆರಂಭ

09:29 AM Sep 03, 2020 | Nagendra Trasi |

ವುಹಾನ್‌/ಪ್ಯಾರಿಸ್‌/ಮಾಸ್ಕೋ: ಕೋವಿಡ್ ಸೋಂಕಿನಿಂದ ಆರೇಳು ತಿಂಗಳು ಮನೆಯಲ್ಲೇ ಇದ್ದ ವಿದ್ಯಾರ್ಥಿಗಳು ಇದೀಗ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳತ್ತ ಮುಖ ಮಾಡಿದ್ದಾರೆ. ಚೀನಾದ ವುಹಾನ್‌, ರಷ್ಯಾ, ಫ್ರಾನ್ಸ್‌, ಬೆಲ್ಜಿಯಂ, ಇಂಗ್ಲೆಂಡ್‌ ಸೇರಿದಂತೆ ಐರೋಪ್ಯ ಒಕ್ಕೂಟದ ಹಲವು ರಾಷ್ಟ್ರಗಳಲ್ಲಿ ಈ ವಾರದಿಂದ ಶಾಲೆಗಳನ್ನು ಪುನಾರಂಭಿಸಲಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಧರಿಸಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

Advertisement

ಕೋವಿಡ್ ಭಯ ಭೀತಿಯ ನಡುವೆ ಪೋಷಕರು ಹೆಚ್ಚು ಕಾಳಜಿವಹಿಸಿ, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.

ಚೀನಾ: ಕೊರೊನಾ ವೈರಸ್‌ ಹುಟ್ಟಿದ ಚೀನಾದ ವುಹಾನ್‌ನಲ್ಲಿ ಏಳು ತಿಂಗಳ ಬಳಿಕ ಸುಮಾರು 2,800 ಕಿಂಡರ್‌ ಗಾರ್ಡನ್ಸ್‌, ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳು ಪುನಾರಂಭವಾಗಿವೆ. ಸುಮಾರು 1.4 ಕೋಟಿ ವಿದ್ಯಾರ್ಥಿಗಳು ಮುಖಗವಸು ಧರಿಸಿ ಕ್ಲಾಸ್‌ಗಳಿಗೆ ಹಾಜರಾಗುತ್ತಿದ್ದಾರೆ. ಪ್ರೌಢಶಾಲೆಗಳನ್ನು ಮೇ ತಿಂಗಳಿನಲ್ಲೇ ತೆರೆಯಲಾಗಿತ್ತು.

ರಷ್ಯಾ: ಕೊರೊನಾ ಸಂಖ್ಯೆಯಲ್ಲಿ ಜಾಗತಿಕವಾಗಿ 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 1.7 ಕೋಟಿ ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಫ್ರಾನ್ಸ್‌, ಬೆಲ್ಜಿಯಂ: ಫ್ರಾನ್ಸ್‌ ಹಾಗೂ ಬೆಲ್ಜಿಯಂನಲ್ಲಿ ಬೇಸಿಗೆ ರಜೆ ಬಳಿಕ ಮಂಗಳವಾರದಿಂದ (ಸೆ.1) ಶಾಲೆಗಳನ್ನು ಪುನಾರಂಭಿಸಲಾಗಿದ್ದು, ಫ್ರಾನ್ಸ್‌ನಲ್ಲಿ
1.24 ಕೋಟಿ ಮಕ್ಕಳು ಮಾಸ್ಕ್ ಧರಿಸಿಕೊಂಡು ತರಗತಿಗೆ ಹಾಜರಾಗುತ್ತಿದ್ದಾರೆ.

ಇಂಗ್ಲೆಂಡ್‌: ಇಂಗ್ಲೆಂಡ್‌ನ‌ಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸುರಕ್ಷತಾ ಕ್ರಮಗಳೊಂದಿಗೆ ಶಾಲೆಗಳನ್ನು ತೆರೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೇರ ಸಂಪರ್ಕಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಲಾಗುತ್ತಿದೆ. ಶಾಲೆಗಳ ಕಾರಿ ಡಾರ್‌, ಹೆಚ್ಚು ಜನ ಸೇರುವ ಜಾಗಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ.

Advertisement

ಸ್ಪೇನ್‌ನಲ್ಲಿ ಆರಂಭಿಸಲಾಗಿರುವ ಶಾಲೆಗ ಳಲ್ಲಿ 5 ಅಡಿ ಅಂತರದೊಂದಿಗೆ ಮಕ್ಕಳನ್ನು ಕೂರಿಸಲಾಗುತ್ತಿದೆ. ಗ್ರೀಸ್‌ನಲ್ಲಿ ಮುಂದಿನ ಸೋಮವಾರದಿಂದ ಶಾಲೆಗಳನ್ನು ಪುನಾರಂಭಿಸಲಾಗುತ್ತಿದೆ. ಜರ್ಮನಿಯಲ್ಲಿ ಕಳೆದ ತಿಂಗಳೇ ವಿದ್ಯಾಸಂಸ್ಥೆಗಳನ್ನು ಪುನಾರಂಭಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next