Advertisement

ಜಾತಿನಿಂದನೆ: ಸಲ್ಲು, ಕತ್ರೀನಾ ವಿರುದ್ಧ ಅರ್ಜಿ

03:11 PM Feb 24, 2018 | |

ನವದೆಹಲಿ: 2017ರಲ್ಲಿ “ಟೈಗರ್‌ ಜಿಂದಾ ಹೈ’ ಚಿತ್ರದ ಪ್ರಚಾರ ಕಾರ್ಯಕ್ರಮದ ವೇಳೆ ಜಾತಿ ನಿಂದನೆ ಮಾಡುವಂಥ ಹೇಳಿಕೆ ನೀಡಿದ್ದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌, ನಟಿ ಕತ್ರೀನಾ ಕೈಫ್ ಮತ್ತಿತರರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ದೆಹಲಿ ಕೋರ್ಟ್‌ನಲ್ಲಿ ಗುರುವಾರ ಅರ್ಜಿಯೊಂದು ಸಲ್ಲಿಕೆಯಾಗಿದೆ.

Advertisement

ಅರ್ಜಿ ವಿಚಾರಣೆಯನ್ನು ಕೋರ್ಟ್‌ ಫೆ. 27ರಂದು ನಡೆಸಲಿದೆೆ. ಅಲ್ಲದೇ ಈ ದೂರಿನ ಕುರಿತು ದೆಹಲಿ ಪೊಲೀಸರ ಪ್ರತಿಕ್ರಿಯೆಯನ್ನೂ ಕೋರ್ಟ್‌ ಕೇಳಿದೆ. ರಿಯಾಲಿಟಿ ಶೋ ಒಂದರಲ್ಲಿ ಚಿತ್ರದ ಪ್ರಚಾರ ನಡೆಯುತ್ತಿದ್ದ ವೇಳೆ ಸಲ್ಮಾನ್‌ ಜಾತಿ ನಿಂದನೆ ಹೇಳಿಕೆ ನೀಡಿದರು. ಹೇಳಿಕೆ ಕೇಳಿ ಅಲ್ಲೇ ಇದ್ದ ನಟಿಯರಾದ ಕತ್ರೀನಾ ಮತ್ತು ಶಿಲ್ಪಾ ಶೆಟ್ಟಿ ನಕ್ಕಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next