ಜೈಪುರ್: ಮ್ಯೂಕೋರ್ ಮೈಕೋಸಿಸ್( ಬ್ಲ್ಯಾಕ್ ಫಂಗಸ್) ಕೋವಿಡ್ ನಿಂದ ಚೇತರಿಸಿಕೊಂಡವರಲ್ಲಿ ಆರಂಭಿಕವಾಗಿ ಸಮಸ್ಯೆಯೊಡ್ಡುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಅದನ್ನು ಸಾಂಕ್ರಾಮಿಕ ರೋಗ ಎಂದು ಗುರುವಾರ(ಮೇ 20) ಘೋಷಿಸಿದೆ. ರಾಜಸ್ಥಾನ ಸರ್ಕಾರ ಈಗಾಗಲೇ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.
ಇದನ್ನೂ ಓದಿ:ಹಣಕ್ಕಾಗಿ ಕೋವಿಡ್ ಟೆಸ್ಟ್ ನಕಲಿ ವರದಿ: ಬೆಂಗಳೂರಿನಲ್ಲಿ ವೈದ್ಯರು ಸೇರಿ ಆರು ಜನರು ವಶಕ್ಕೆ
ಸಾಂಕ್ರಾಮಿಕ ಸೋಂಕು ರೋಗ ಕಾಯ್ದೆ 1897ರ ಕಾಯ್ದೆಯಡಿ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ ಎಂಬುದಾಗಿ ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜಸ್ಥಾನದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿದ ಸರ್ಕಾರ, ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಬುಧವಾರ ಘೋಷಿಸಿತ್ತು. ರಾಜಸ್ಥಾನ ಸಾಂಕ್ರಾಮಿಕ ರೋಗ ಕಾಯ್ದೆ 2020ರ ಅಡಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.
ಬ್ಲ್ಯಾಕ್ ಫಂಗಸ್ ಕರ್ನಾಟಕ, ಉತ್ತರಾಖಂಡ್, ತೆಲಂಗಾಣ, ಮಧ್ಯಪ್ರದೇಶ, ಆಂಧ್ರಪ್ರದೇಶ, ಹರ್ಯಾಣ , ಬಿಹಾರ ಸೇರಿದಂತೆ ದೇಶದ ವಿವಿಧೆಡೆ ಪತ್ತೆಯಾಗಿದೆ ಎಂದು ವರದಿ ವಿವರಿಸಿದೆ.