Advertisement
ಈಚೆಗೆ ದಟ್ಟವಾಗಿ ಮಂಜು ಕವಿಯುತ್ತಿದ್ದು, ಹೂವಾಡುತ್ತಿರುವ ತೊಗರಿ ಬೆಳೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಸದ್ಯ ತೊಗರಿ ಮೊಗ್ಗು ಹಾಗೂ ಆರಂಭದ ಹೂವಾಡುವಿಕೆ ಹಂತದಲ್ಲಿದೆ. ಆದರೆ, ಬೆಳಿಗ್ಗೆ ಮಂಜಿನ ವಾತಾವರಣದಿಂದ ಎಲೆ, ದೇಟು ಹಾಗೂ ಹೂವಿನ ಮೇಲೆ ಕಂದು ಚುಕ್ಕೆಗಳುಕಾಣಿಸಿಕೊಳ್ಳುವ ಭೀತಿ ಇದೆ. ಇದರ ಪರಿಣಾಮ ಮೊಗ್ಗು ಹಾಗೂ ಹೂ ಉದುರುವ ಸಾಧ್ಯತೆ ಇದೆ. ರೈತರಿಗೆ ಈಗ ಇಳುವರಿ ಕುಸಿಯುವ ಆತಂಕ ಕಾಡತೊಡಗಿದೆ.
Related Articles
Advertisement
ತೊಗರಿ ಹೂವಾಡುವಿಕೆ ಹಂತದಲಿದ್ದಾಗ ಕಡಿಮೆ ಉಷ್ಣಾಂಶ ಹಾಗೂ ಮೋಡಕವಿದ ವಾತಾವರಣ, ತುಂತುರು ಮಳೆ, ಮಂಜಿನಿಂದ ರೋಗದ ಬಾಧೆ ಹೆಚ್ಚಾಗಿ ಕಂಡು ಬರುತ್ತದೆ. ಕಂದು ಚುಕ್ಕೆಗಳು ಕಂಡು ಬರುತ್ತವೆ. ಇಂತಹ ಸಂದರ್ಭದಲ್ಲಿ ಔಷಧಿ ಸಿಂಪಡಿಸಬೇಕು. ತೊಗರಿ ಹೂ ಉದಿರುವಿಕೆ ನಿಯಂತ್ರಿಸಲು “ಪಲ್ಸ್ ಮ್ಯಾಜಿಕ್’ ಔಷಧಿಸಿಂಪಡಿಸಬೇಕೆಂದು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ರಾಜು ಜಿ.ತೆಗ್ಗೆಳ್ಳಿ ಸಲಹೆ ನೀಡುತ್ತಾರೆ.
ಕೆಲವು ದಿನಗಳಿಂದ ಮಂಜು ಆವರಿಸುತ್ತಿದ್ದು, ತೊಗರಿ ಹೂವು ಉದುರುವ ಮತ್ತು ಚುಕ್ಕೆ ರೋಗ ಬರುವ ಸಾಧ್ಯತೆ ಇದೆ. ಹತ್ತಿ ಬೆಳೆಗೂಇದೇ ರೀತಿ ಸಮಸ್ಯೆಯಾಗಲಿದೆ. ಹೀಗಾಗಿ ಜಮೀನಿನಲ್ಲಿ ನೀರು ನಿಲ್ಲದ ಹಾಗೆ ಬಸಿಗಾಲುವೆ ಮಾಡಿ, ನೀರು ಹೊರಹಾಕಬೇಕು. ಮುಂಜಾಗ್ರತಾ ಕ್ರಮವಾಗಿ ನೀರಿನಲ್ಲಿ ಕರುಗುವ 19:19:19 ಗೊಬ್ಬರ (ಪ್ರತಿ ಲೀಟರ್ ನೀರಿಗೆ 3 ಗ್ರಾಂ) ಹಾಗೂ ಕಾರ್ಬನ್‌ಡಿಜಮ್ (ಪ್ರತಿ ಲೀಟರ್ ನೀರಿಗೆ 2 ಗ್ರಾಂ) ಬೆರೆಸಿ ಬೆಳೆಗಳಿಗೆ ಸಿಂಪರಣೆ ಮಾಡಬೇಕು. ಚಂದ್ರಕಾಂತ ಜೀವಣಗಿ, ಸಹಾಯಕ ಕೃಷಿ ನಿರ್ದೇಶಕ, ಕಲಬುರಗಿ
ತೊಗರಿ ಬೆಳೆಗೆ ಮಂಜಿನ ವಾತಾವರಣ ಹಾನಿ ಹೆಚ್ಚಿದೆ.ಆರಂಭಿಕ ಹೂವುಗಳೇ ಫಲವಾಗಿ ಅಧಿಕಫಸಲು ಬರುತ್ತದೆ. ಮತ್ತೂಮ್ಮೆ ಹೂವುಬಿಟ್ಟರೂ ಬೇಗ ಉದುರುತ್ತದೆ. ಹೀಗಾಗಿ ತೊಗರಿಯ ಹೂವು ಮತ್ತು ಮಗ್ಗು ಕಪ್ಪಾಗಿ ಸುಡದಂತೆ ಹಾಗೂ ಉದರದಂತೆ ನೋಡಿಕೊಳ್ಳಬೇಕು. –ಡಾ| ರಾಜು ಜಿ.ತೆಗ್ಗೆಳ್ಳಿ, -ಮುಖ್ಯಸ್ಥ, ಕೃಷಿ ವಿಜ್ಞಾನ ಕೇಂದ್ರ