ನವ ದೆಹಲಿ : ಅಮೆರಿಕಾದ ಮಾಡೆರ್ನಾ ಲಸಿಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದಿಂದ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಅನುಮೋದನೆ ಪಡೆದ ನಂತರ, ಫೈಜರ್ ಹಾಗೂ ಜಾನ್ ಸನ್ ಆ್ಯಂಡ್ ಜಾನ್ ಸನ್(ಜೆ&ಜೆ) ಲಸಿಕೆಗಳೂ ಕೂಡ ಶೀಘ್ರದಲ್ಲೇ ಅನುಮೋದನೆ ಪಡೆಯುವ ಸಾಧ್ಯತೆ ಕಾಣಿಸುತ್ತಿದೆ ಎಂದು ನೀತಿ ಆಯೋಗ ಹೇಳಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ. ಕೆ ಪೌಲ್, ದೇಶದಾದ್ಯಂತ ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕಾ ಅಭಿಯಾನಗಳು ನಡೆಯುತ್ತಿದೆ. ವಿದೇಶಗಳಲ್ಲಿ ಸಂಶೋಧನೆಗೊಂಡು, ಉತ್ಪಾದಿಸಲ್ಪಡುತ್ತಿರುವ ಲಸಿಕೆಗಳನ್ನು ಇಲ್ಲಿ ಬಳಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಪಡುತ್ತಿದೆ. ನಮ್ಮ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಲಸಿಕೆಗಳ ಲಭ್ಯತೆಯ ಮಟ್ಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ : ರಾಷ್ಟ್ರಪ್ರಶಸ್ತಿ ವಿಜೇತ ದಿ. ಸಂಚಾರಿ ವಿಜಯ್‌ಗೆ ವಿಶೇಷ ಗೌರವ ನೀಡಿದ ಅಮೆರಿಕಾ ಚಿತ್ರಮಂದಿರ
ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ಗೆ ಪ್ರತಿಕ್ರಿಯಿಸಿದ ಜಾನ್ ಸನ್ ಆ್ಯಂಡ್ ಜಾನ್ ಸನ್ ಸಂಸ್ತೆಯ ವಕ್ತಾರ, ಈಗ ಭಾರತದಲ್ಲಿ ಕೋವಿಡ್ ಲಸಿಕೆಗಳ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಅಗತ್ಯವಿಲ್ಲ ಎಂದು ಡಿಸಿಜಿಐ ತನ್ನ ಇತ್ತೀಚೆಗಿನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ನಾವು ಭಾರತ ಸರ್ಕಾರದೊಂದಿಗೆ ಚರ್ಚಿಸುತ್ತಿದ್ದೇವೆ ಮತ್ತು ಮೊದಲ ಡೋಸ್ ಲಸಿಕೆಗಳನ್ನು ಭಾರತಕ್ಕೆ ಶೀಘ್ರದಲ್ಲೇ ತಲುಪಿಸುವತ್ತ ಕಾರ್ಯೋನ್ಮುಖರಾಗಿದ್ದೇವೆ. ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೇಗೆ ಉತ್ತಮಗೊಳಿಸಬಹುದು ಎಂಬುದನ್ನು ಅನ್ವೇಷಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನು, ದೇಶದ ದೈತ್ಯ ಔಷಧ ಉತ್ಪಾದಕ ಸಂಸ್ಥೆ ಸಿಪ್ಲಾ, ಮಾಡೆರ್ನಾ ಲಸಿಕೆಯನ್ನು ಆಮದು ಮಾಡಿಕೊಳ್ಳುವುದಕ್ಕೆ ಹಾಗೂ ಮಾರಾಟ ಮಾಡುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ದಿಂದ ಅನುಮೋದನೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ : ತಾಲಿಬಾನ್ ಸಂಘಟನೆಯೊಂದಿಗಿನ ಸಚಿವ ಜೈಶಂಕರ್ ಭೇಟಿ ಸತ್ಯಕ್ಕೆ ದೂರವಾದದ್ದು : ಸರ್ಕಾರ ಸ್ಪಷ್ಟನೆ