Advertisement

ಮಧ್ಯ ಪ್ರದೇಶ ಚುನಾವಣೆ: ಈಗ ಎಸ್‌ಪಿ ಜತೆ ಮೈತ್ರಿಗೆ ಕಾಂಗ್ರೆಸ್‌ ಯತ್ನ

04:45 PM Oct 04, 2018 | udayavani editorial |

ಭೋಪಾಲ್‌ : ಬಿಎಸ್‌ಪಿ ನಾಯಕಿ ಮಾಯಾವತಿ ಕೈಕೊಟ್ಟ ಬಳಿಕ ಇದೀಗ ಕಾಂಗ್ರೆಸ್‌ ಪಕ್ಷ  ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ  ಅಖೀಲೇಶ್‌ ಯಾದವ್‌ ನೇತೃತ್ವದ  ಸಮಾಜವಾದಿ ಪಕ್ಷದೊಂದಿಗೆ ಚುನಾವಣಾ ಮೈತ್ರಿ ಹೊಂದಲಿದೆ ಎಂದು ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲ್‌ ನಾಥ್‌ ಹೇಳಿದ್ದಾರೆ.

Advertisement

“ನಾನು ಕೆಲ ದಿನಗಳ ಹಿಂದೆ ಅಖೀಲೇಶ್‌ ಜತೆಗೆ ಮಾತನಾಡಿದ್ದೇನೆ; ನಾವೀಗ ಅವರೊಂದಿಗೆ ಮಾತುಕತೆಯಲ್ಲಿ ನಿರತವಾಗಿದ್ದೇವೆ’ ಎಂದು ಕಮಲ್‌ ನಾಥ್‌ ಹೇಳಿದರು. 

ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 2018ರ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಾನು ಯಾರೊಂದಿಗೂ ಮೈತ್ರಿ ಹೊಂದದೆ ಏಕಾಂಗಿಯಾಗಿ ಹೋರಾಡುವೆ ಎಂದು ಹೇಳಿರುವುದು ಕಾಂಗ್ರೆಸ್‌ಗೆ ಭಾರೀ ಆಘಾತ ಉಂಟುಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next