Advertisement
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಜತೆ ಮಾತುಕತೆ ನಡೆಸಿರುವ ಪ್ರಧಾನಿ ಮೋದಿ, ಇಂಥ ಕುಕೃತ್ಯಗಳ ಬಗ್ಗೆ ಅಸ ಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ, ಪ್ರತಿಮೆ ಧ್ವಂಸ ಕುರಿತಂತೆ, ರಾಜ್ಯ ಸರಕಾರಗಳಿಗೆ ಸ್ಪಷ್ಟ ನಿರ್ದೇ ಶನ ನೀಡಿರುವ ಕೇಂದ್ರ ಗೃಹ ಇಲಾಖೆ, ಇಂಥ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಪ್ರತಿಮೆಗಳ ಧ್ವಂಸ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಇಲಾಖೆ, ಬುಧವಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎರಡೆರಡು ಸುತ್ತೋಲೆಗಳನ್ನು ಕಳುಹಿಸಿದೆ. ಮೊದಲ ಸುತ್ತೋಲೆಯಲ್ಲಿ, ಯಾವುದೇ ಪ್ರತಿಮೆ ಧ್ವಂಸ ಪ್ರಕರಣ ಗಮನಕ್ಕೆ ಬಂದ ಕೂಡಲೇ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಈ ಸುತ್ತೋಲೆ ಬಂದ ಕೆಲವೇ ಗಂಟೆಗಳಲ್ಲಿ ಮತ್ತೂಂದು ಸುತ್ತೋಲೆ ಕಳುಹಿಸಿರುವ ಇಲಾಖೆ, ಯಾವ ಜಿಲ್ಲೆಗಳಲ್ಲಿ ಪ್ರತಿಮೆಗಳು ಧ್ವಂಸಗೊಳ್ಳುತ್ತವೋ ಆ ಪ್ರಕರಣಗಳಲ್ಲಿ ಆಯಾ ಜಿಲ್ಲೆಗಳ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಬೇಕೆಂದು ಸೂಚಿಸಿದೆ. ತ್ರಿಪುರದಲ್ಲಿನ ಘಟನೆಗೆ ಸಂಬಂಧಿಸಿದಂತೆ 11 ಕೇಸುಗಳನ್ನು ದಾಖಲಿಸಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ.