Advertisement
ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜ ಬಿಜೆಪಿಯಿಂದ ಕೈಬಿಟ್ಟು ಹೋಗುತ್ತದೆ ಎಂಬ ಭಾವನೆ ಬಂದ ಕಾರಣದಿಂದ ಈಗ ಬಿಜೆಪಿಯು ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಮುಂದಾಗಿದೆ ಎಂದರು.
Related Articles
ಮಾಡಿದ ಕ್ಷೇತ್ರದಲ್ಲಿ ಜವಾಬ್ದಾರಿ ನಿರ್ವಹಿಸಿದ, ಸಮಾಜದ ಹೋರಾಟದಲ್ಲಿ ಭಾಗಿ ಯಾಗಿದ್ದ ವ್ಯಕ್ತಿಯೊಬ್ಬರು ಬೇರೊಂದು ಪಕ್ಷದಿಂದ ಚುನಾವಣೆ ಯಲ್ಲಿ ಕಣಕ್ಕಿಳಿದ ಪರಿಣಾಮ ಸಮಾಜದ ಬೆಂಬಲ ಎಲ್ಲಿ ಕೈಬಿಟ್ಟು ಹೋಗುತ್ತದೆಯೋ ಎಂಬ ಯೋಚನೆಯಿಂದ ಬಿಜೆಪಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ, ಕೋಟಿ ಚೆನ್ನಯರ ನೆನಪಾಗುತ್ತದೆ ಎಂದರು.
Advertisement
ಕಳೆದ ಕೆಲವು ದಿನಗಳಿಂದ ಬಿಜೆಪಿ ಅಭ್ಯರ್ಥಿ ಸಾಮಾಜಿಕ ಜಾಲತಾಣದ ಪೋಸ್ಟರ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು, ಕೋಟಿ ಚೆನ್ನಯರ ಭಾವಚಿತ್ರ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ನಮ್ಮ ಸಮಾಜದ ಜತೆ ಭಾವ ನಾತ್ಮಕವಾಗಿ ಚೆಲ್ಲಾಟವಾಡ ಬಹುದು ಎಂದು ಸ್ಥಳೀಯ ನಾಯಕರು ಭಾವಿಸಿದ್ದರೆ ಸಾಧ್ಯವಿಲ್ಲ ಎಂದರು.
ಅವಮಾನಿಸಿದವರಿಗೇ ಸಮ್ಮಾನ!10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ನಾರಾಯಣ ಗುರು ಗಳ ಪಾಠವನ್ನು ತೆಗೆದು ಹಾಕುವ ಕೆಲಸ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿತ್ತು. ಇದಕ್ಕೆ ಸಮಾಜ ಪ್ರತಿಭಟನೆ ಮಾಡಿದಾಗ ಇಲ್ಲಸಲ್ಲದ ಸಬೂಬು ನೀಡಲಾಗಿತ್ತು. ಸಮಾಜದಿಂದ ಪ್ರತಿಭಟನೆಯ ಕಾವು ಹೆಚ್ಚಾದಾಗ ಮಣಿದು ಗುರುಗಳ ಪಠ್ಯವನ್ನು ಮತ್ತೆ ಅಳವಡಿಸಲಾಗಿತ್ತು. ಪಠ್ಯವನ್ನು ಕೈಬಿಡುವಲ್ಲಿ ಕಾರಣಕರ್ತರಾಗಿದ್ದ ರೋಹಿತ್ ಚಕ್ರತೀರ್ಥರಿಗೆ ಜಿಲ್ಲೆಯ ದೇವಸ್ಥಾನವೊಂದರ ಬ್ರಹ್ಮಕಲಶೋತ್ಸವ ವೇಳೆ ನಮ್ಮ ಸಮಾಜದ ವಿರೋಧದ ನಡುವೆಯೂ ಮೆರವಣಿಗೆ ನಡೆಸಿ ಸಮ್ಮಾನ ಮಾಡಲಾಯಿತು ಎಂದರು. ಕೋಟಿ ಚೆನ್ನಯರಿಗೆ, ಬಿಲ್ಲವರಿಗೆ ಅಪಮಾನ ಮಾಡಿದ, ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯೊ ಬ್ಬರು ಇನ್ನೂ ಬಿಜೆಪಿಯಲ್ಲಿದ್ದಾರೆ. ಈ ವರೆಗೆ ಅವರನ್ನು ಪಕ್ಷದಿಂದ ಉಚ್ಚಾಟಿ ಸಿಲ್ಲ ಎಂದರು. ಬೆಂಗಳೂರು ಬಿಲ್ಲವ ಅಸೋಸಿಯೇಶನ್ ಅಧ್ಯಕ್ಷ ವೇದ ಕುಮಾರ್, ಕುದ್ರೋಳಿ ದೇಗುಲ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಗೆಜ್ಜೆಗಿರಿ ಕ್ಷೇತ್ರದ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ ಇದ್ದರು. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರನ್ನಿಡುವ ಮಾತನ್ನು ಇಲ್ಲಿನ ಬಿಜೆಪಿ ಅಭ್ಯರ್ಥಿ ಈಗ ಮಾತನಾಡುತ್ತಾರೆ. ಈ ಹಿಂದೆ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇತ್ತು. ಆಗ ಕ್ಯಾಬಿನೆಟ್‌ನಲ್ಲಿ ನಿರ್ಣಯ ಮಾಡುವ ಕೆಲಸ ಬಿಜೆಪಿ ಮಾಡಿಲ್ಲ. ಚಿತ್ತರಂಜನ್ ಗರೋಡಿ ಸಹಿತ ಸಮಾಜದ ಹಿರಿಯರ ನೇತೃತ್ವದಲ್ಲಿ ಅಂದು ಹೋರಾಟ ನಡೆಸಲು ಮುಂದಾದಾಗ ಅಂದಿನ ಸಂಸದರು ಒಂದು ವರ್ಷದಲ್ಲಿ ಈ ಕಾರ್ಯ ನಡೆಸುವುದಾಗಿ ಭರವಸೆ ನೀಡಿ ದಾರಿತಪ್ಪಿಸುವ ಕೆಲಸ ಮಾಡಿದ್ದರು. ಇದನ್ನು ನಾವು ಮರೆತಿಲ್ಲ. ದ.ಕ., ಶಿವಮೊಗ್ಗ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಮಾಜದ ಅಭ್ಯರ್ಥಿಗಳ ಗೆಲುವಿಗಾಗಿ ಕೆಲಸ ನಡೆಯುತ್ತಿದೆ ಎಂದು ಸತ್ಯಜಿತ್ ಸುರತ್ಕಲ್ ವಿವರಿಸಿದರು.