Advertisement

ಜಾಧವ್‌ಗೆ ಪಾಕ್‌ ಗಲ್ಲು ರಾಜಕೀಯ ಪ್ರೇರಿತ : ಅಮೆರಿಕನ್‌ ಪರಿಣತರು

11:48 AM Apr 12, 2017 | Team Udayavani |

ವಾಷಿಂಗ್ಟನ್‌ : ಪಾಕಿಸ್ಥಾನವು ಭಾರತೀಯ ಪ್ರಜೆ ಕುಲಭೂಣ್‌ ಜಾಧವ್‌ಗೆ ಶರವೇಗದ ಮಿಲಿಟರಿ ವಿಚಾರಣೆಯಲ್ಲಿ  ಗಲ್ಲು ಶಿಕ್ಷೆ ನೀಡಿರುವ ಬಗ್ಗೆ ಅಮೆರಿಕದ ಪರಿಣತರು ಆಶ್ಚರ್ಯ, ಆಘಾತ ವ್ಯಕ್ತಪಡಿಸಿದ್ದು ‘ಇದು ಕೇವಲ ರಾಜಕೀಯ ಪ್ರೇರಿತ ನಿರ್ಧಾರ’ವೆಂದು ಹೇಳಿದ್ದಾರೆ. 

Advertisement

ವಿಶ್ವ ವೇದಿಕೆಗಳಲ್ಲಿ ಪಾಕಿಸ್ಥಾನವನ್ನು ಮೂಲೆಗುಂಪು ಮಾಡಲೆತ್ತಿಸುತ್ತಿರುವ ಭಾರತಕ್ಕೆ ತನ್ನ ಪ್ರಬಲ ಸಂದೇಶ ರವಾನಿಸುವುದಕ್ಕಾಗಿ ಪಾಕಿಸ್ಥಾನ ಈ ರೀತಿ ರಾಜಕೀಯ ದುರುದ್ದೇಶದಿಂದ ಅಮಾಯಕ ಭಾರತೀಯ ಪ್ರಜೆಯಾಗಿರುವ ಕುಲಭೂಷಣ್‌ ಜಾಧವ್‌ಗೆ ಗಲ್ಲು ಶಿಕ್ಷೆ ನೀಡಿ, ಭಾರತಕ್ಕೆ ಪರೋಕ್ಷವಾಗಿ ಶಿಕ್ಷಿಸುವ ತನ್ನ ಉದ್ದೇಶವನ್ನು ಜಗಜ್ಜಾಹೀರಾರು ಮಾಡಿದಂತಾಗಿದೆ ಎಂದು ಅಮೆರಿಕ ಪರಿಣರು ವ್ಯಾಖ್ಯಾನಿಸಿದ್ದಾರೆ. ಇದೇ ರೀತಿಯ ವ್ಯಾಖ್ಯಾನವನ್ನು ಭಾರತ ಈ ಮೊದಲು ಮಾಡಿತ್ತು. 

ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ, 46ರ ಹರೆಯದ ಜಾಧವ್‌ಗೆ ಪಾಕಿಸ್ಥಾನದಲ್ಲಿ ರಾ ಏಜಂಟ್‌ ಆಗಿ ಬೇಹುಗಾರಿಕೆ ನಡೆಸಿ ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪದ ಮೇಲೆ ಪಾಕ್‌ ಭದ್ರತಾ ಅಧಿಕಾರಿಗಳು ಬಲೂಚಿಸ್ಥಾನದಲ್ಲಿ ಬಂಧಿಸಿದ್ದರು. ಇವರಿಗೆ ಪಾಕಿಸ್ಥಾನದ ಮಿಲಿಟರಿ ಫೀಲ್ಡ್‌ ಜನರಲ್‌ ಕೋರ್ಟ್‌ ಮಾರ್ಷಲ್‌, ಸೇನಾ ಕಾಯಿದಯಡಿ, ಗಲ್ಲು ಶಿಕ್ಷೆಯನ್ನು ನೀಡಿತ್ತು. ಇದನ್ನು ಪಾಕ್‌ ಸೇನಾ ಮುಖ್ಯಸ್ಥ ಕಮರ್‌ ಜಾವೇದ್‌ ಬಾಜ್‌ವಾ ದೃಢೀಕರಿಸಿದ್ದರು. 

ಜಾಧವ್‌ಗೆ ಕಾನ್ಸುಲರ್‌ ಸಂಪರ್ಕಾವಕಾಶ ನೀಡದಿರುವುದು, ಅಚ್ಚರಿಯ ಕೋರ್ಟ್‌ ಮಾರ್ಷಲ್‌ ಸುತ್ತ ನಿಗೂಢತೆ ಇರುವುದು; ಮುಂಬಯಿ ದಾಳಿಕೋರರ ವಿಚಾರಣೆಯನ್ನು ವರ್ಷಾನುಗಟ್ಟಲೆ ಮುಂದೂಡಿಕೊಂಡು ಬಂದಿರುವುದಕ್ಕೆ ವ್ಯತಿರಿಕ್ತವಾಗಿ ಜಾಧವ್‌ ಕೇಸನ್ನು ಅತ್ಯಂತ ವೇಗದಿಂದ ಕೊನೆಗೊಳಿಸಿರುವುದು ಮುಂತಾಗಿ ಹತ್ತಾರು ಬಗೆಯ ಅಕ್ರಮ ವಿಚಾರಣ ನಿರ್ವಹಣೆಯನ್ನು ಜಾಧವ್‌ ಕೇಸ್‌ನಲ್ಲಿ ತೋರಲಾಗಿರುವುದು ದಟ್ಟವಾದ ಸಂದೇಹಕ್ಕೆ ಎಡೆಮಾಡಿಕೊಟ್ಟಿದೆ. ಅಂತೆಯೇ ಇದು ಭಾರತಕ್ಕೆ ಬುದ್ಧಿ ಕಲಿಸಲು ಮಾಡಲಾದ ರಾಜಕೀಯ ಪ್ರೇರಿತ ನಿರ್ಧಾರವಾಗಿದೆ ಎಂದು ಅಮೆರಕನ್‌ ಪರಿಣತರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next