Advertisement

ಸಲಿಂಗ ವಿವಾಹಕ್ಕೆ ಕೇಂದ‹ದ ವಿರೋಧ?

06:00 AM Sep 09, 2018 | Team Udayavani |

ನವದೆಹಲಿ: ಕೆಲವೇ ದಿನಗಳ ಹಿಂದಷ್ಟೇ ಸಲಿಂಗಕಾಮಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ  ನೀಡಿದ್ದು, ಇದೀಗ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಪಡೆಯಲು ಎಲ್‌ಜಿಬಿಟಿ ಸಮುದಾಯ ಸಿದ್ಧವಾಗಿದೆ. ಆದರೆ ಸಲಿಂಗಕಾಮ ವಿಚಾರದಲ್ಲಿ ಕೇಂದ್ರ ಸರ್ಕಾರ ತಟಸ್ಥ ನಿಲುವು ತಾಳಿತ್ತಾದರೂ, ಸಲಿಂಗ ವಿವಾಹವನ್ನು ಕೋರ್ಟ್‌ನಲ್ಲಿ ವಿರೋಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಸಲಿಂಗವಿವಾಹಕ್ಕೆ ಸದ್ಯ ಭಾರತದಲ್ಲಿ ಕಾನೂನು ಮಾನ್ಯತೆಯಿಲ್ಲ. ಸಲಿಂಗಿಗಳು ವಿವಾಹವಾದಲ್ಲಿ ಅವರಿಗೆ ಆಸ್ತಿ ಹಕ್ಕು, ವಿಮೆ ಮೇಲೆ ಪರಸ್ಪರರು ಹಕ್ಕು ಸಾಧಿಸಲಾಗದು. ಈ ಹಿನ್ನೆಲೆಯಲ್ಲಿ ಎಲ್‌ಜಿಬಿಟಿ ಸಮುದಾಯವು ಕಾನೂನು ಹೋರಾಟ ನಡೆಸಲು ನಿರ್ಧರಿಸಿವೆ.

Advertisement

ಆದರೆ ಇದನ್ನು ಕೇಂದ್ರ ವಿರೋಧಿಸಲಿದ್ದು, ಸಲಿಂಗ ವಿವಾಹ ಪ್ರಕೃತಿಗೆ ವಿರುದ್ಧವಾದುದು ಎಂಬ ವಾದವನ್ನು ಮಂಡಿಸಲಿದೆ. ಅಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೂಡ ಇದನ್ನು ವಿರೋಧಿಸಿದ್ದು, ಭಾರತೀಯ ಸಮಾಜ ಇಂತಹ ಸಂಬಂಧಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿದೆ.

ಆರೋಗ್ಯ ವಿಮೆಗೆ ಆಗ್ರಹ: ಇದೇ ವೇಳೆ, ಸಲಿಂಗ ಸಂಬಂಧ ಹೊಂದಿರುವವರ ಸಂಗಾತಿಗಳಿಗೂ ಅನುಕೂಲ ಕಲ್ಪಿಸುವಂಥ ಸಾಮೂಹಿಕ ಆರೋಗ್ಯ ವಿಮೆ ಒದಗಿಸುವಂತೆ ವಿಮಾ ಕಂಪನಿಗಳಿಗೆ ಬಹುರಾಷ್ಟ್ರೀಯ ಕಂಪನಿಗಳು ಮನವಿ ಮಾಡಿವೆ. ಎಲ್ಲ ನೌಕರರಿಗೂ ಸಮಾನ ಅನುಕೂಲಗಳನ್ನು ಕಲ್ಪಿಸಬೇಕಾದ್ದು ನಮ್ಮ ಉದ್ದೇಶ. ನಾಮಿನಿಯನ್ನು ಆಯ್ಕೆ ಮಾಡುವುದು ಪಾಲಿಸಿದಾರರಿಗೆ ಬಿಟ್ಟಿದ್ದು. ಹೀಗಾಗಿ, ವಿಮಾ ಕಂಪನಿಗಳು ಗ್ರೂಪ್‌ ಹೆಲ್ತ್‌ ಪಾಲಿಸಿ ಒದಗಿಸಬೇಕು ಎಂದು ಎಂಎನ್‌ಸಿಗಳು ಕೋರಿವೆ.

Advertisement

Udayavani is now on Telegram. Click here to join our channel and stay updated with the latest news.

Next