Advertisement

ಗೆದ್ದು ಬೀಗಿದವರಿಂದ ಗದ್ದುಗೆ ಗುದ್ದಾಟ

01:24 PM Jan 02, 2021 | Team Udayavani |

ಧಾರವಾಡ: ಚುನಾವಣೆಯಲ್ಲಿ ಗೆದ್ದು ಬೀಗಿ ಪಟಾಕಿ ಹೊಡೆದು, ಗುಲಾಲ ಎರಚಿ ಕುಣಿದಾಡಿ ಇನ್ನೂ ಒಂದು ದಿನ ಕೂಡ ಕಳೆದಿಲ್ಲ. ಆಗಲೇ ಗ್ರಾಪಂಗಳ ಅಧ್ಯಕ್ಷ ಗದ್ದುಗೆಗೆ ಮುಸುಕಿನ ಗುದ್ದಾಟಗಳುಶುರುವಾಗಿವೆ. ಗ್ರಾಪಂ ಸದಸ್ಯತ್ವ ಗೆದ್ದವರಲ್ಲಿ ಗದ್ದುಗೆಏರಲು ಯಾರು ಶ್ರೇಷ್ಠ ಎನ್ನುವ ಲೆಕ್ಕಾಚಾರ ಗ್ರಾಪಂನ ಮರಿ ರಾಜಕಾರಣಿಗಳಲ್ಲಿ ಆರಂಭಗೊಂಡಿದೆ.

Advertisement

ಹೌದು, ಗ್ರಾಪಂ ಚುನಾವಣೆ ಅಖಾಡದಲ್ಲಿ ಲಕ್ಷ ಲಕ್ಷ ಹಣ ಖರ್ಚು ಮಾಡಿ ಗೆಲುವಿನ ನಗೆ ಬೀರಿದ ಅಭ್ಯರ್ಥಿಗಳು ಇದೀಗ ಅಧ್ಯಕ್ಷ-ಉಪಾಧ್ಯಕ್ಷ ಗದ್ದುಗೆ ಏರಲು ಮನಸ್ಸಿನಲ್ಲಿಯೇ ಮಂಡಿಗೆ ಮೇಯುತ್ತಿದ್ದಾರೆ. ಮೀಸಲಾತಿ ಪ್ರಕಟಗೊಂಡನಂತರವೇ ಯಾರು ಅಧ್ಯಕ್ಷರು, ಯಾರು ಉಪಾಧ್ಯಕ್ಷರು ಎನ್ನುವುದು ಗೊತ್ತಾಗಲಿದ್ದರೂ ಅದಕ್ಕೂ ಮುನ್ನವೇ ಪ್ರಬಲ ವರ್ಗದ ಮತ್ತು ಆರ್ಥಿಕ ಸ್ಥಿತಿವಂತ ಅಭ್ಯರ್ಥಿಗಳು ತೆರೆಮರೆಯಲ್ಲಿಯೇ ವಿಭಿನ್ನ ಕಸರತ್ತು ಆರಂಭಿಸಿದ್ದಾರೆ.

ಗ್ರಾಮದ ವಾರ್ಡ್‌ ಮಟ್ಟದಲ್ಲಿ ಪ್ರಬಲ ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಏಕೈಕ ಚುನಾವಣೆ ಎಂದರೆಅದು ಗ್ರಾಪಂ ಚುನಾವಣೆ. ಹೀಗಾಗಿ ಇಲ್ಲಿ ಗೆದ್ದಅಭ್ಯರ್ಥಿಗಳಿಗೆ ತಮ್ಮ ಪಕ್ಷದ ಟ್ರಂಪ್‌ ಕಾರ್ಡ್ ಗಳನ್ನು ಅಂಟಿಸಿ ಅವರನ್ನು ಪಕ್ಷದ ಕಟ್ಟಾ ಕಾರ್ಯಕರ್ತರನ್ನಾಗಿ ಮುಂದುವರೆಸಿಕೊಳ್ಳುವ ಪ್ರಯತ್ನದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಪಕ್ಷದ ಶಾಸಕರು ಇದ್ದರೆ, ತಾವೇನು ಇದಕ್ಕೆ ಕಡಿಮೆ ಇಲ್ಲಎನ್ನುವಂತೆಯೇ ಕಾಂಗ್ರೆಸ್‌ ಮುಖಂಡರು ಕೂಡ ತಮ್ಮ ಬೆಂಬಲಿಗ ಅಭ್ಯರ್ಥಿಗಳಿಗೆ ಅಭಯ ಹಸ್ತ ನೀಡಲು ಸಜ್ಜಾಗಿದ್ದಾರೆ.

ಒಂದೊಮ್ಮೆ ಗ್ರಾಪಂನ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳಿಗೆ ತಮ್ಮ ಪಕ್ಷದ ಬೆಂಬಲಿಗರು ಏರಿ ಕುಳಿತರೆಮುಂದೆ ನಡೆಯುವ ತಾಪಂ, ಜಿಪಂ ಸೇರಿದಂತೆಎಲ್ಲಾ ಚುನಾವಣೆಗಳಿಗೂ ಆಯಾ ಪಕ್ಷಗಳಿಗೆ ಬೇರುಮಟ್ಟದಲ್ಲಿ ಸೂಕ್ತ ವೇದಿಕೆ ಲಭಿಸಿದಂತಾಗುತ್ತದೆ. ಹೀಗಾಗಿ ಎಲ್ಲಾ ಪಕ್ಷಗಳು ಗ್ರಾಪಂ ಚುನಾವಣೆಯನ್ನು ಮತ್ತು ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಬಹಳ ಗಂಭೀರವಾಗಿಯೇ ಪರಿಗಣಿಸಿವೆ.

ಅಧಿಕಾರ ಅವಧಿ ಎಷ್ಟು ವರ್ಷ?: 2014-15ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಡಿ.ರಮೇಶಕುಮಾರನೇತೃತ್ವದಲ್ಲಿ ಸಮಿತಿ ರಚಿಸಿ ಸ್ಥಳೀಯ ಆಡಳಿತಸಂಸ್ಥೆಗಳ ಮೀಸಲಾತಿ ಮತ್ತು ಅಧ್ಯಕ್ಷ ಉಪಾಧ್ಯಕ್ಷರ ಅಧಿಕಾರ ಅವಧಿ ಎಷ್ಟು ವರ್ಷ ಇರಬೇಕು ಎನ್ನುವಕುರಿತು ವರದಿ ಸಿದ್ಧಪಡಿಸಿತ್ತು. ಈ ವರದಿ ಅನ್ವಯ10 ವರ್ಷಗಳವರೆಗೆ ಮೀಸಲಾತಿ ಮತ್ತು 5 ವರ್ಷಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು

Advertisement

ನಿಗದಿ ಪಡಿಸಲಾಗಿತ್ತು. ಆರಂಭದಲ್ಲಿ ಇದು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸೀಮಿತವಾಗಿದ್ದರೂ ಗ್ರಾಪಂಗಳಿಗೂ ಇದು ಅನ್ವಯವಾಗಬೇಕು ಎನ್ನಲಾಗಿತ್ತು.ಆದರೆ ಇದರಿಂದ ಬಹಳಷ್ಟು ಜನರಿಗೆ ಅವಕಾಶಗಳು ಕೈ ತಪ್ಪುತ್ತವೆ ಎಂದು ನಿರ್ಧರಿಸಿರುವಬಿಜೆಪಿ ಸರ್ಕಾರ ಗ್ರಾಪಂಗಳ ಮೀಸಲಾತಿ ಪಟ್ಟಿಯನ್ನುಬದಲು ಮಾಡಿಯೇ ಬಿಟ್ಟಿದ್ದು, ಇದರ ಅನ್ವಯವೇಇದೀಗ ಚುನಾವಣೆಗಳು ಕೂಡ ನಡೆದಾಗಿದೆ. ಇನ್ನುಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಅವಧಿಯನ್ನು5 ವರ್ಷಕ್ಕೆ ಬದಲು ಎರಡೂವರೆ ವರ್ಷಕ್ಕೆ ಇಳಿಸಲು ಬಿಜೆಪಿ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ.

ಗುರು-ಹಿರಿಯರ ಮಧ್ಯಸ್ಥಿಕೆ: ಮಾಜಿ ಸಚಿವಡಿ.ರಮೇಶಕುಮಾರ ವರದಿ ಮೇರೆಗೆ ಐದುವರ್ಷಗಳ ಅವಧಿಗೆ ಅಧಿಕಾರ ಹಂಚಿಕೆಗಳು ನಡೆದರೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿಪಟ್ಟಿ ಪ್ರಕಟಗೊಂಡರೂ, ಅಧಿಕಾರ ಹಂಚಿಕೆಯನ್ನುಆಯಾ ಪಕ್ಷಗಳ ಮುಖಂಡರು ನಿರ್ವಹಣೆ ಮಾಡುತ್ತಿದ್ದಾರೆ. ಅಲ್ಲದೇ ಈ ಹಿಂದಿನ ವರ್ಷಗಳಲ್ಲಿ ಮಠಾಧೀಶರ ಸಮ್ಮುಖದಲ್ಲಿ ವಿಶ್ವಾಸದ ಒಪ್ಪಂದಗಳು ನಡೆದಂತೆಯೇ ಈ ಬಾರಿಯೂ ನಡೆಯುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಪಂಚಾಯಿತಿ ಫೈಟ್‌ನಲ್ಲಿ ಗೆದ್ದವರು ಇದೀಗ ನೆಮ್ಮದಿಯ ನಿದ್ರೆ ಮಾಡುತ್ತಿಲ್ಲ. ಗೆಲುವು ಬೆನ್ನಿಗಂಟಿದ್ದೇ ತಡ ಇದೀಗ ಇನ್ನೊಂದು ಮೆಟ್ಟಿಲು ಏರುವ ತವಕದಲ್ಲಿದ್ದು,ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೇರುವ ಕನಸು ಕಾಣುತ್ತಿದ್ದಾರೆ.

ಪಂಚಾಯ್ತಿ ಅಧ್ಯಕ್ಷರ ಅವಧಿ ಐದು ವರ್ಷವೇ ಸೂಕ್ತವಂತೆ! : ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಸುದೀರ್ಘ‌ವಾಗಿ ಅಧ್ಯಯನ ಮಾಡಿರುವ ಧಾರವಾಡದ ಸಿಎಂಡಿಆರ್‌ ಸಂಸ್ಥೆ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ 5 ವರ್ಷಗಳ ಕಾಲ ಇರುವುದೇ ಉತ್ತಮ ಎಂದುರಮೇಶಕುಮಾರ್‌ ಅವರಿಗೆ ವರದಿ ಸಲ್ಲಿಸಿತ್ತು. ಈ ಸಂಬಂಧ ಗುಜರಾತ, ರಾಜಾಸ್ತಾನ, ಹರಿಯಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳನ್ನು ಸುತ್ತಿ ವರದಿಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆಸಲ್ಲಿಸಲಾಗಿತ್ತು. ಇದನ್ನು ಗಂಭೀರವಾಗಿಯೇ ಪರಿಗಣಿಸಿದ್ದ ಸಿದ್ದರಾಮಯ್ಯ ಸರ್ಕಾರ ಜಿಪಂ, ತಾಪಂ ಅಧ್ಯಕ್ಷರಅವಧಿಯಲ್ಲಿ ಆರಂಭದಲ್ಲಿ 5 ವರ್ಷಗಳಿಗೆ ಕಾಯಂಗೊಳಿತ್ತು. ಆದರೆ ಸದಸ್ಯರು ಪರಸ್ಪರ ಹೊಂದಾಣಿಕೆಮೂಲಕ ಮತ್ತೆ ತಾವೇ ಖುದ್ದು ಅನಾರೋಗ್ಯ ಕಾರಣಗಳನ್ನು ನೀಡಿ ರಾಜೀನಾಮೆ ಸಲ್ಲಿಸಿ ಇತರರಿಗೆ ಅಧಿಕಾರಬಿಟ್ಟು ಕೊಟ್ಟ ಪ್ರಕರಣಗಳು ನಡೆದವು. ಹೀಗಾಗಿ ಸದ್ಯಕ್ಕೆ ಗ್ರಾಪಂಗಳಿಗೆ ಬಿಜೆಪಿ ಸರ್ಕಾರ ಎಷ್ಟು ವರ್ಷಗಳ ಅವಧಿಯನ್ನು ನಿಗದಿಪಡಿಸುತ್ತದೆ ಕಾದು ನೋಡಬೇಕು.

ಗ್ರಾಪಂಗಳಿಗೆ ಐದು ವರ್ಷ ಅಧ್ಯಕ್ಷ ಅವಧಿಯ ಅನುಕೂಲವೇನು,ಅನಾನುಕೂಲ ಏನು ಎನ್ನುವ ಕುರಿತು 2015ರಲ್ಲಿ ರಮೇಶಕುಮಾರ್‌ ಅವರಿಗೆ ವರದಿ ಸಲ್ಲಿಸಲಾಗಿತ್ತು. ಇದು ಸೂಕ್ತ ಕೂಡ ಇತ್ತು. ಅಭಿವೃದ್ಧಿಗೆ ಸುದೀರ್ಘ‌ ಅಧಿಕಾರ ಅವಧಿಯಅಗತ್ಯವಿದ್ದು, ಇದನ್ನು ಸದ್ಯದ ಬಿಜೆಪಿ ಸರ್ಕಾರಕೂಡ ಜಾರಿಗೊಳಿಸುವುದು ಸೂಕ್ತ. ಡಾ| ನಾರಾಯಣ ಬಿಲ್ಲವ,ಪಂಚಾಯತ್‌ ರಾಜ್‌ ತಜ್ಞ, ಸಿಎಂಡಿಆರ್‌, ಧಾರವಾಡ

ಅಧ್ಯಕ್ಷರ ಅವಧಿ ಒಂದರ್ಥದಲ್ಲಿ 5 ವರ್ಷವಿದ್ದರೂ ಪರವಾಗಿಲ್ಲ. ಆದರೆ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಗ್ರಾಮಗಳ ಸಮಗ್ರ ಅಭಿವೃದ್ಧಿ ಸಾಧ್ಯ. –ಜ್ಯೋತಿ ನಾಗರಾಜ ಕುಂದಗೋಳ, ಗ್ರಾಪಂ ನೂತನ ಸದಸ್ಯೆ

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next