Advertisement
ಘಟನೆ ನಡೆದಿರುವುದು ಛತ್ತೀಸ್‌ಗಢ ರಾಜಧಾನಿ ಗೊರಖ್ಪುರದ ಡಾ| ಭೀಮರಾವ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ. ಘಟನೆಗೆ ಕಾರಣನಾಗಿರುವ ಸಿಬ್ಬಂದಿ ಹೆಸರು ರವಿಚಂದ್ರ. ಈತನಿಗೆ ಶಿಶುಗಳ ವಾರ್ಡ್‌ನಲ್ಲಿ ಆಮ್ಲಜನಕ ಪೂರೈಕೆ ಮೇಲೆ ನಿಗಾ ಇರಿಸುವ ಹೊಣೆ ನೀಡಲಾಗಿತ್ತು. ಆದರೆ ರವಿವಾರ ರಾತ್ರಿ ಯದ್ವಾತದ್ವ ಮದ್ಯ ಸೇವಿಸಿ ಆಸ್ಪತ್ರೆ ಕರ್ತವ್ಯಕ್ಕೆ ಹಾಜರಾಗಿದ್ದ ರವಿಚಂದ್ರ, ಅಮಲಿನಲ್ಲಿ ನಿದ್ರೆಗೆ ಜಾರಿದ್ದಾನೆ. ಇದೇ ವೇಳೆ ವೆಂಟಿಲೇಟರ್ ನೆರವಿನಿಂದ ಉಸಿರಾಡುತ್ತಿದ್ದ 10 ಮಕ್ಕಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿದೆ. ಸುಮಾರು 30 ನಿಮಿಷಗಳವರೆಗೆ ಆಮ್ಲಜನಕ ಪೂರೈಕೆಯಾಗದ ಹಿನ್ನೆಲೆಯಲ್ಲಿ ನಾಲ್ಕು ನವಜಾತ ಶಿಶುಗಳು ಅಸುನೀಗಿವೆ. ವಿಚಾರ ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತ ಇತರೆ ಸಿಬಂದಿ, ಕೂಡಲೇ ಆಮ್ಲಜನ ಪೂರೈಕೆ ಪುನಾರಂಭಿಸಿ, ಉಳಿದ ಮಕ್ಕಳ ಜೀವವನ್ನು ಉಳಿಸಿದ್ದಾರೆ. ಈ ಸಂಬಂಧ ರವಿಚಂದ್ರನನ್ನು ಕೆಲಸದಿಂದ ವಜಾ ಮಾಡಲಾಗಿದೆ. ಹಾಗೇ ಘಟನೆ ಕುರಿತು ತನಿಖೆ ನಡೆಸುವಂತೆ ಮುಖ್ಯಮಂತ್ರಿ ರಮಣ್ ಸಿಂಗ್ ಆದೇಶಿಸಿದ್ದಾರೆ. Advertisement
ಆಮ್ಲಜನಕ ಪೂರೈಕೆ ಸ್ಥಗಿತ: ನಾಲ್ಕು ಶಿಶುಗಳು ಬಲಿ
08:05 AM Aug 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.