Advertisement

370ನೇ ವಿಧಿ ರದ್ದು; ಐದು ತಿಂಗಳ ಬಳಿಕ ಕಾರ್ಗಿಲ್ ನಲ್ಲಿ ಇಂಟರ್ನೆಟ್ ಸೇವೆ ಪುನರಾರಂಭ

09:54 AM Dec 28, 2019 | Team Udayavani |

ನವದೆಹಲಿ: ಜನಜೀವನ ಯಥಾಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ಸುಮಾರು ಐದು ತಿಂಗಳ ಬಳಿಕ ಕಾರ್ಗಿಲ್ ನಲ್ಲಿ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಪರಿಸ್ಥಿತಿ ಯಥಾಸ್ಥಿತಿಗೆ ಮರಳಿದ್ದರಿಂದ ಇಂಟರ್ನೆಟ್ ಸೇವೆಯನ್ನು ಆರಂಭಿಸುವಂತೆ ಜನರು ಬೇಡಿಕೆ ಇಟ್ಟಿದ್ದರು.

ಈ ಹಿನ್ನೆಲೆಯಲ್ಲಿ ಕಾರ್ಗಿಲ್ ಕಣಿವೆ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಯನ್ನು ಪುನರಾರಂಭಿಸಿದೆ. ಅಲ್ಲದೇ ಕಾನೂನು ಬಾಹಿರ ಚಟುಟಿಕೆಯ ಸಂದೇಶ ಹಾಗೂ ಪ್ರಚೋದನಾತ್ಮಕ ಕಾರ್ಯದಲ್ಲಿ ತೊಡಗದಂತೆ ರಾಜಕೀಯ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ಬಿಡುಗಡೆಗೊಳಿಸಿರುವ ರಾಜಕೀಯ ನಾಯಕರನ್ನು ಪ್ರಸ್ತುತ ಗೃಹ ಬಂಧನದಲ್ಲಿ ಇರಿಸಲಾಗಿದೆ. ಭದ್ರತೆಯ ಪರಿಶೀಲನೆ ನಂತರ ಗೃಹ ಬಂಧನದಲ್ಲಿ ಇರುವ ಮುಖಂಡರ ಬಗ್ಗೆ ಜಿಲ್ಲಾಡಳಿತ ಕಾಲ, ಕಾಲಕ್ಕೆ ಸೂಕ್ತವಾದ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next