Advertisement

ಸಿಂಗಾಪುರದಲ್ಲಿ ಧೋನಿ ಅಕಾಡೆಮಿ

12:38 PM Jan 08, 2018 | |

ಹೊಸದಿಲ್ಲಿ: ಈಗಾಗಲೇ ದುಬಾೖಯಲ್ಲಿ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಿರುವ ಭಾರತ ತಂಡದ ತಾರಾ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಇದೀಗ ಸಿಂಗಾಪುರದಲ್ಲಿ ಕ್ರಿಕೆಟ್‌ ಅಕಾಡೆಮಿ ತೆರೆಯಲು ಸಿದ್ಧರಾಗಿದ್ದಾರೆ. ಇದೇ ತಿಂಗಳು 20ರಂದು ಅಕಾಡೆಮಿಯನ್ನು ಉದ್ಘಾಟಿಸಲಿದ್ದಾರೆ.

Advertisement

ಧೋನಿ ಕಳೆದ ವರ್ಷ ದುಬಾೖಯಲ್ಲಿ ಕ್ರಿಕೆಟ್‌ ಅಕಾಡೆಮಿಯನ್ನು ಸ್ಥಾಪಿಸಿದ್ದರು. ಹೀಗಾಗಿ ಇದು ಧೋನಿ ಅವರ 2ನೇ ಅಕಾಡೆಮಿಯಾಗಿದೆ. ಜಾಗತಿಕ ಕ್ರೀಡೆಯಾದ ಕ್ರಿಕೆಟನ್ನು ಇನ್ನಷ್ಟು ವಿಸ್ತರಿಸುವುದು ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಕಾಡೆಮಿ ತೆರೆಯಲಾಗಿದೆ ಎಂದು ಧೋನಿ ಹೇಳಿದ್ದಾರೆ.

ಸದ್ಯ ಭಾರತ ತಂಡ ಟೆಸ್ಟ್‌ ಸರಣಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವುದರಿಂದ ಧೋನಿ ಕುಟುಂಬದ ಜತೆ ಸಮಯ ಕಳೆಯುತ್ತಿದ್ದಾರೆ. ಏಕದಿನ ಮತ್ತು ಟಿ20 ಸರಣಿ ವೇಳೆ ಧೋನಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next