Advertisement

ದಿಲ್ಲಿ ಬಳಿಕ ಈಗ ಮುಂಬಯಿಗೂ ಸ್ಮಾಗ್‌

06:00 AM Dec 10, 2017 | Harsha Rao |

ಮುಂಬಯಿ: ಇದುವರೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಕಾಡುತ್ತಿದ್ದ ಸ್ಮಾಗ್‌ (ಧೂಳು ಮುಸುಕಿದ ಮಂಜು) ಸಮಸ್ಯೆ ಈಗ ಮುಂಬಯಿಗೂ ವ್ಯಾಪಿಸಿದೆ. ಶನಿವಾರ ಬೆಳ್ಳಂಬೆಳಗ್ಗೆ ಮುಂಬಯಿ ವಾಸಿಗಳಿಗೆ ದಟ್ಟ ಮಾಲಿನ್ಯ ಪದರ ಕಾಣಿಸಿಕೊಂಡಿದೆ. ವಿಪರೀತ ಮಂಜಿನಿಂದಾಗಿ ನಗರದ ಉಪನಗರ ರೈಲುಗಳು ಕೂಡ 30 -40 ನಿಮಿಷಗಳಷ್ಟು ವಿಳಂಬ ವಾಗಿ ಸಂಚರಿಸಿವೆ. ಆದರೆ ಇದು ಧೂಳು ಹಾಗೂ ಮಂಜು ಮಿಶ್ರಿತ ಮಾಲಿನ್ಯವೇ ಎಂಬುದನ್ನು ಹವಾಮಾನ ಇಲಾಖೆ ಖಚಿತಪಡಿಸಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಂಡುಬರದ ಈ ಸನ್ನಿವೇಶವನ್ನು ಜನರು ಮಂಜು ಮತ್ತು ಧೂಳಿನ ಕಣಗಳು ಎಂದೇ ಪರಿಗಣಿಸಿದ್ದಾರೆ.

Advertisement

ರೈಲು ವಿಳಂಬದಿಂದ ಆತಂಕ ಗೊಂಡ ಜನಸಾಮಾನ್ಯರು ಅಂಧೇರಿಯಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರಾದರೂ ಮಂಜಿನ ಸಮಸ್ಯೆಯೇ ಇದಕ್ಕೆ ಕಾರಣ ಎಂದು ರೈಲ್ವೇ ಅಧಿಕಾರಿಗಳು ಪ್ರಯಾ ಣಿಕರಿಗೆ ವಿವರಣೆ ನೀಡಿ, ಮನವೊಲಿಸಿದರು.

ವಾಯು ಗುಣಮಟ್ಟವೂ ಇಳಿಕೆ: ಶನಿವಾರ ಬೆಳಗ್ಗೆ ವಿಪರೀತ ಮಂಜಿನ ಜತೆಗೆ ವಾಯು ಗುಣಮಟ್ಟವೂ ಕಡಿಮೆಯಾಗಿತ್ತು. ವಾಯು ಗುಣ ಮಟ್ಟ ಸೂಚ್ಯಂಕವು ಕಳೆದ ಎರಡು ದಿನಗಳಿಂದ ಮಧ್ಯಮದಿಂದ ಕಳಪೆಗೆ ಇಳಿದಿದ್ದು, ಪಿಎಂ 10 ಮತ್ತು ಪಿಎಂ 2.5 ಸೂಚ್ಯಂಕ 150 ಹಾಗೂ 90ಕ್ಕೆ ಏರಿದೆ. ಶನಿವಾರ ಬೆಳಗ್ಗೆ ಪಿಎಂ 2.5 ಸೂಚ್ಯಂಕ ಗಮನಾರ್ಹವಾಗಿ ಏರಿದ್ದು, ಅಂಧೇರಿ, ನವಿ ಮುಂಬಯಿ ಮತ್ತು ಬಾಂದ್ರಾದಲ್ಲಿ ಇದು 300ಕ್ಕೆ ಏರಿಕೆಯಾಗಿದೆ. ಮುಂದಿನ ವಾರ ನಗರದ ತಾಪಮಾನ 31ರಿಂದ 21 ಡಿಗ್ರಿ ಇರುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next