Advertisement
ಮೀನಾಕ್ಷಿ ಶೇಷಾದ್ರಿ ತಮಿಳು ಕುಟುಂಬದವರಾಗಿದ್ದು ಜಾರ್ಖಂಡ್ ನ (ಅಂದಿನ ಬಿಹಾರದ) ಧನ್ ಬಾದ್ ಸಮೀಪ ಇರುವ ಸಿಂದ್ರಿಯಲ್ಲಿ ಜನಿಸಿದ್ದರು. ಮೀನಾಕ್ಷಿ ಭರತನಾಟ್ಯಂ, ಕೂಚುಪುಡಿ, ಕಥಕ್ ಹಾಗೂ ಒಡಿಸ್ಸಿ ನೃತ್ಯ ಪ್ರವೀಣೆಯಾಗಿದ್ದರು. ಪೈಂಟರ್ ಬಾಬು ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ ಸೋತುಹೋಗಿತ್ತು. ಇದು ತೆಲುಗು ಮತ್ತು ಹಿಂದಿ ಎರಡು ಭಾಷೆಯಲ್ಲಿ ತೆರೆಕಂಡಿತ್ತು. ಈ ವೇಳೆ ಮೀನಾಕ್ಷಿ ಶೇಷಾದ್ರಿ ನಟನೆಯನ್ನು ಬಿಡುವ ಹಂತಕ್ಕೆ ಬಂದಿದ್ದರು. ಆದರೆ ಸುಭಾಶ್ ಘಾಯ್ ಪ್ರೋತ್ಸಾಹಿಸಿ ಮತ್ತೊಬ್ಬ ಅಂದಿನ ಯುವ ನಟ ಜಾಕಿಶ್ರಾಫ್ ಜತೆ ಹೀರೋ ಸಿನಿಮಾದಲ್ಲಿ ನಟಿಸುವಂತೆ ಅವಕಾಶ ಮಾಡಿಕೊಟ್ಟಿದ್ದರು. ಈ ಸಿನಿಮಾ ಶೇಷಾದ್ರಿಯನ್ನು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ನಟಿಯನ್ನಾಗಿ ಮಾಡಿಬಿಟ್ಟಿತ್ತು. ಇದಾದ ಬಳಿಕ ಸೂಪರ್ ಸ್ಟಾರ್ ರಾಜೇಶ್ ಖನ್ನಾ ಜತೆ ನಟಿಸುವಆಫರ್ ಶೇಷಾದ್ರಿಗೆ ಸಿಕ್ಕಿತ್ತು. ಹೀಗೆ ಅವಾರಾ ಬಾಪ್ ಸಿನಿಮಾದಲ್ಲಿ ಮೀನಾಕ್ಷಿ ದ್ವಿಪಾತ್ರದಲ್ಲಿ ನಟಿಸಿದ್ದರು.
80ರ ದಶಕದಲ್ಲಿ ಮೀನಾಕ್ಷಿ ಶೇಷಾದ್ರಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದರು. ಹೀರೋ ಸಿನಿಮಾದ ಮೂಲಕ ಜನಪ್ರಿಯತೆ ಪಡೆದಿದ್ದ ಮೀನಾಕ್ಷಿ ವೃತ್ತಿ ಬದುಕಿನಲ್ಲಿ ದಾಮಿನಿ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. 1990ರ ದಶಕದಲ್ಲಿ ಮೀನಾಕ್ಷಿ ಶೇಷಾದ್ರಿ ಎಂಬ ಚೆಲುವೆಯ ಬದುಕಿನಲ್ಲಿ ಸಿಂಗರ್ ಕುಮಾರ್ ಸಾನು, ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಕಾಲಿಟ್ಟಿದ್ದರು. ಮಹೇಶ್ ಭಟ್ ನಿರ್ದೇಶನದ “ಜುರ್ಮ್” ಸಿನಿಮಾದ ಪ್ರೀಮಿಯರ್ ಶೋ ವೇಳೆ ಮೀನಾಕ್ಷಿ ಶೇಷಾದ್ರಿ ಮತ್ತು ಕುಮಾರ್ ಸಾನು ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಸಿನಿಮಾದ ಜಬ್ ಕೋಯಿ ಬಾತ್ ಬಿಗಡ್ ಜಾಯೇ ಹಾಡನ್ನು ಹಾಡಿದ್ದು ಕುಮಾರ್ ಸಾನು. ಮೀನಾಕ್ಷಿಯ ರೂಪಕ್ಕೆ ಕುಮಾರ್ ಸಾನು ಶರಣಾಗಿಬಿಟ್ಟಿದ್ದರು! ಹೀಗೆ ಸ್ನೇಹಿತರಾಗಿದ್ದ ಸಾನು, ಶೇಷಾದ್ರಿ ನಿಕಟರಾಗಿಬಿಟ್ಟಿದ್ದರು. ಸುಮಾರು ಮೂರು ವರ್ಷಗಳ ಕಾಲ ತಮ್ಮ ಸಂಬಂಧವನ್ನು ರಹಸ್ಯವಾಗಿ ಇಟ್ಟಿದ್ದರು!
Related Articles
Advertisement
ಈ ಸಂದರ್ಶನ ಓದಿದ ನಂತರ ಕುಮಾರ್ ಸಾನು ಪತ್ನಿ ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೂಡಲೇ ಯೂಟರ್ನ್ ಹೊಡೆದ ಕುಮಾರ್ ಸಾನು ಈ ಸಂದರ್ಶನದಲ್ಲಿ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಮೀನಾಕ್ಷಿ ಜತೆ ಯಾವುದೇ ಅಫೇರ್ ಇಲ್ಲ ಅಂತ ಹೇಳಿಕೆ ಕೊಟ್ಟುಬಿಟ್ಟಿದ್ದರು. ಮೀನಾಕ್ಷಿ ವಿರುದ್ಧ ಸಾನು ಪತ್ನಿ ರೀಟಾ ಕೀಳುಮಟ್ಟದಲ್ಲಿ ಬೈದುಬಿಟ್ಟಿದ್ದರು. ರೀಟಾ ಅವರ ಆರೋಪದ ಪ್ರಕಾರ, ಕುಮಾರ್ ಸಾನು ತನ್ನ ಎಲ್ಲಾ ಹಣವನ್ನು ಮೀನಾಕ್ಷಿಗೆ ವ್ಯಯಿಸಿದ್ದು, ಲೈಂಗಿಕವಾಗಿ ಕಾಲಕಳೆದಿದ್ದರು ಎಂದು ಹೇಳಿದ್ದರು. ಕೊನೆಗೆ 1994ರಲ್ಲಿ ರೀಟಾ ಮತ್ತು ಕುಮಾರ್ ಸಾನು ವಿವಾಹ ವಿಚ್ಚೇದನ ಪಡೆದುಕೊಳ್ಳುವಂತಾಯ್ತು!
ಅಹಿತಕರವಾದ ಡೈವೋರ್ಸ್ ನಿಂದ ಮೀನಾಕ್ಷಿ ಮತ್ತು ಕುಮಾರ್ ಸಂಬಂಧದ ನಡುವೆ ಸಮಸ್ಯೆ ತಂದುಬಿಟ್ಟಿತ್ತು. ರೀಟಾಳಿಂದ ಡೈವೋರ್ಸ್ ಪಡೆದ ನಂತರ ಕುಮಾರ್ ಸಾನು ಮೀನಾಕ್ಷಿ ನಡುವಿನ ಸಂಬಂಧವೂ ಹಳಸಿ ಹೋಗುವಂತಾಯ್ತು! ಏತನ್ಮಧ್ಯೆ 1990ರಲ್ಲಿ ಸನ್ನಿ ಡಿಯೋಲ್ ನಟನೆಯ ಘಾಯಲ್ ಸಿನಿಮಾದಲ್ಲಿ ನಟಿಸುವ ವೇಳೆ ನಿರ್ದೇಶಕ ರಾಜ್ ಕುಮಾರ್ ಸಂತೋಷಿ ಜತೆ ಮೀನಾಕ್ಷಿ ಶೇಷಾದ್ರಿ ನಡುವೆ ಪ್ರೇಮ ಪುರಾಣ ಶುರುವಾಗಿತ್ತು. ಅದಕ್ಕೆ ಕಾರಣ ಘಾಯಲ್ ಸಿನಿಮಾ ಯಶಸ್ವಿಯಾದ ನಂತರ ಸಂತೋಷಿ ನೇರವಾಗಿ ಮೀನಾಕ್ಷಿ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರಂತೆ! ಮೀನಾಕ್ಷಿ ಈ ಪ್ರಸ್ತಾಪವನ್ನು ಪ್ರೀತಿಯಿಂದಲೇ ನಿರಾಕರಿಸಿದಾಗ ರಾಜ್ ಕುಮಾರ್ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರಂತೆ. ನಂತರ ಸಂದರ್ಶನದಲ್ಲಿ ಕೇಳಿದ್ದ ಪ್ರಶ್ನೆಗೆ, ಹೌದು ನಾನು ಮೀನಾಕ್ಷಿಯನ್ನು ಪ್ರೀತಿಸಿದ್ದೆ, ಆದರೆ ಆಕೆ ಅದನ್ನು ನಿರಾಕರಿಸಿದ್ದಳು. ಇಲ್ಲದಿದ್ದರೆ ನಾನು ಮದುವೆಯಾಗಬೇಕೆಂದಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದರು.
ಮೀನಾಕ್ಷಿ ಮತ್ತು ರಾಜ್ ಕುಮಾರ್ ಸಂತೋಷಿ ನಡುವೆ ದೀರ್ಘ ದೂರವಾಣಿ ಮಾತುಕತೆ, ದೂರ ಪ್ರಯಾಣ, ಸಹಲೆ, ಚರ್ಚೆ ನಡೆದಿದ್ದವು. ಕೊನೆಗೆ ರಾಜ್ ಕುಮಾರ್ ಪ್ರಪೋಸಲ್ ಅನ್ನು ಮೀನಾಕ್ಷಿ ಒಪ್ಪಿದ್ದಳು. ಅಲ್ಲದೇ ತನ್ನ ಆಘ್ ಔರ್ ಸುಹಾಗ್ ಸಿನಿಮಾಕ್ಕೆ ಆರ್ಥಿಕ ನೆರವು ನೀಡುವಂತೆ ಮೀನಾಕ್ಷಿ ರಾಜ್ ಕುಮಾರ್ ಬಳಿ ಕೇಳಿದಾಗ ಒಪ್ಪಿಕೊಂಡಿದ್ದರು. ಆದರೆ ಸಿನಿಮಾದ ಜಾಹೀರಾತು ಹೊರಬಿದ್ದಾಗ ರಾಜ್ ಕುಮಾರ್ ನೇರವಾಗಿ ಮೀನಾಕ್ಷಿ ತಾಯಿ ಜತೆ ಆಕ್ರೋಶಿತರಾಗಿ ಮಾತನಾಡಿದ್ದರು. ನಾನು ನಿಮ್ಮ ಮಗಳ ಬಳಿ ಮದುವೆಯಾಗು ಎಂದು ಕೇಳಿದ್ದೇನೆ ಹೊರತು ಬೇರೆ ಏನು ಆಫರ್ ಕೊಟ್ಟಿಲ್ಲ ಎಂದು ಕೂಗಾಡಿದ್ದರು. ಹೀಗೆ ಇಬ್ಬರ ನಡುವಿನ ಸಂಬಂಧವೂ ಬಿರುಕು ಬಿಟ್ಟು ಹೋಗಿತ್ತು.
ಅಂತೂ ಕೊನೆಗೆ ನಟನೆಗೆ ಗುಡ್ ಬೈ ಹೇಳಿದ ಮೀನಾಕ್ಷಿ ಶೇಷಾದ್ರಿ 1995ರಲ್ಲಿ ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಹರೀಶ್ ಮೈಸೂರು ಅವರನ್ನು ವಿವಾಹವಾಗಿದ್ದರು. ಮೀನಾಕ್ಷಿ ಹರೀಶ್ ದಂಪತಿಗೆ ಇಬ್ಬರು ಗಂಡು ಹಾಗೂ ಒಬ್ಬಳು ಮಗಳು. ಶೇಷಾದ್ರಿ ಪ್ರಸ್ತುತ ಅಮೆರಿಕಾದ ಟೆಕ್ಸಾಸ್ ನಲ್ಲಿ ವಾಸವಾಗಿದ್ದಾರೆ.